ಪೊನ್ನಂಪೇಟೆ, ಫೆ.೧೦: ನಾಗರಹೊಳೆ ಆದಿವಾಸಿ ಜಮ್ಮಪಾಳೆ ಹಕ್ಕುಸ್ಥಾಪನಾ ಸಮಿತಿ ವತಿಯಿಂದ ನಾಗರಹೊಳೆ ಅರಣ್ಯದ ನಾಣಚ್ಚಿಯಲ್ಲಿ ತಾ.೯ ರಂದು ಆದಿವಾಸಿಗಳು ಶೃಂಗಸಭೆ ಆಯೋಜನೆ ವಿರುದ್ಧ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಮಾತನಾಡಿದ ನಾಗರಹೊಳೆ ಆದಿವಾಸಿ ಜಮ್ಮ ಪಾಳೆ ಹಕ್ಕು ಸ್ಥಾಪನ ಸಮಿತಿ ಗ್ರಾಮ ಸಭೆಗಳ ಒಕ್ಕೂಟದ ಅಧ್ಯಕ್ಷ ಜೆ.ಕೆ ತಿಮ್ಮ, ಕೇಂದ್ರ ಸರ್ಕಾರ ಅಂತರರಾಷ್ಟಿçÃಯ ಹುಲಿ ಶೃಂಗ ಸಭೆ ಕರೆದಿದ್ದು, ೨೦೨೬ರ ಕೇಂದ್ರದ ಬಜೆಟ್ಟಿನಲ್ಲಿ ಹುಲಿ ಶೃಂಗಸಭೆ ಮತ್ತು ಅದರ ಕೆಲಸ ಕಾರ್ಯಗಳಿಗೆ ೧೫೦ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಐಬಿಸಿಎ iಟಿಣeಡಿಟಿಚಿಣioಟಿಚಿಟ big ಛಿಚಿಣ ಚಿಟಟiಚಿಟಿಛಿe), ವರ್ಲ್ಡ್ ವೈಲ್ಡ್ ಲೈಫ್ ಫಂಡ್ ಫಾರ್ ನೇಚರ್, ಕೈಗಾರಿಕೋದ್ಯಮಿಗಳು, ಪರಿಸರ ಸಂರಕ್ಷಣಾ ವಾದಿಗಳು, ಹಾಗೂ ವಿವಿಧ ಎನ್.ಜಿ.ಒ ಸಂಸ್ಥೆಗಳು ಒಟ್ಟಾಗಿ ಸೇರಿ ನಡೆಸುತ್ತಿರುವ ಹುಲಿ ಶೃಂಗ ಸಭೆಯು, ೨೦ ದೇಶಗಳ ಸಹಕಾರದೊಂದಿಗೆ, ಗ್ರೀನ್ ಕ್ರೆಡಿಟ್ ಹೆಸರಿನಲ್ಲಿ ಕಾಡುಗಳಿಗೆ ಬಂಡವಾಳ ಹಾಕಿ ದೊಡ್ಡ ಮಟ್ಟದ ಲೂಟಿ ಮಾಡುವ ಹುನ್ನಾರವಷ್ಟೆ. ಪ್ರವಾಸೋದ್ಯಮದ ಹೆಸರಿನಲ್ಲಿ ಅರಣ್ಯ ನಾಶ, ಸಾಂಪ್ರದಾಯಿಕ ಗಡಿಗಳಿಂದ ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಹುನ್ನಾರ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳದಲ್ಲಿ ನಾಗರಹೊಳೆ ಆದಿವಾಸಿ ಜಮ್ಮ ಪಾಳೆ ಹಕ್ಕು ಸ್ಥಾಪನ ಸಮಿತಿ ಗ್ರಾಮ ಸಭೆಗಳ ಒಕ್ಕೂಟದ ಅಧ್ಯಕ್ಷರಾದ ತಿಮ್ಮ ಜೆ. ಕೆ, ಸಂಚಾಲಕರಾದ ಪಿ.ಸಿ ರಾಮು, ರಾಮಕೃಷ್ಣ ಜೆ.ಎಸ್, ಶಿವು ಜೆ.ಎ, ಕರಿಯಪ್ಪ, ರಾಮು, ಮಂಜುಳ, ಸುಶೀಲ ಜೆ.ಕೆ, ರವಿ ಬಿ.ಕೆ, ಕಾಳ ಜೆ.ಕೆ, ಜೆ.ಎಂ ಸೋಮಯ್ಯ, ಬಿ.ಕೆ ಚೆಲ್ಲಿ, ಗೌರಿ ಜೆ.ಆರ್ ಹಾಗೂ ನಾಗರಹೊಳೆ ಕಾಡಿನ ಒಳಗೆ ಇರುವ ಮೈಸೂರು-ಕೊಡಗು ಜಿಲ್ಲೆಗಳ ಆದಿವಾಸಿಗಳು ಹಾಜರಿದ್ದರು.