ಕುಶಾಲನಗರ, ಫೆ. ೧೦: ಕುಟುಂಬ, ಮಕ್ಕಳು ಹಾಗೂ ಸಮಾಜದಿಂದ ಹಿರಿಯ ನಾಗರಿಕರ ಕಡೆಗಣನೆ ಸಲ್ಲದು. ಹಿರಿಯರು ಮೂಲೆ ಗುಂಪಾಗದAತೆ ನೋಡಿಕೊಳ್ಳುವುದು ಮಕ್ಕಳ ಆದ್ಯ ಕರ್ತವ್ಯವಾಗಿದೆ ಎಂದು ಕುಶಾಲನಗರ ಸಿವಿಲ್ ಮತ್ತು ಪ್ರಥಮ ದರ್ಜೆ ದಂಡಾಧಿಕಾರಿಗಳ ನ್ಯಾಯಾಲಯದ ನ್ಯಾಯಾಧೀಶರಾದ ಎಲ್.ಚೈತ್ರ ಹೇಳಿದರು.

ಕುಶಾಲನಗರದ ರೋಟರಿ ಸಂಸ್ಥೆಯ ಸಭಾಂಗಣದಲ್ಲಿ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ರಾಜ್ಯ ಸರ್ಕಾರದ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ, ಕೊಡಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಹಿರಿಯ ನಾಗರಿಕರ ಸ್ವಯಂ ಸೇವಾ ಸಂಸ್ಥೆಗಳ ವತಿಯಿಂದ ಹಿರಿಯ ನಾಗರಿಕರಿಗೆ ಆಯೋಜಿಸಿದ್ದ ಕಾನೂನು ಅರಿವು ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಹಿರಿಯ ನಾಗರಿಕರನ್ನು ಸಮಾಜ ಹಾಗೂ ಕುಟುಂಬ ಅತ್ಯಂತ ವಿನಯ ಹಾಗೂ ಗೌರವದಿಂದ ಕಾಣಬೇಕಿದೆ.

ಸೇವೆಯಿಂದ ನಿವೃತ್ತರಾದವರು, ಹಿರಿಯ ನಾಗರಿಕರು ಹಾಗೂ ವಯೋವೃದ್ಧರ ಪಾಲನೆ, ಪೋಷಣೆ ಮತ್ತು ಸಂರಕ್ಷಣೆಗೆAದು ಸರ್ಕಾರ ಜಾರಿಗೊಳಿಸಿರುವ ಭಾರತೀಯ ನಾಗರಿಕರ ಸಂರಕ್ಷಣಾ ಸಂಹಿತೆ ೧೪೪ ರ ಅಡಿ ನಿರ್ಲಕ್ಷ್ಯ ತೋರುವುದು ಅಪರಾಧವಾಗಿದೆ. ಪಾಲಕರ ರಕ್ಷಣೆಗೆ ಯಾವುದೇ ರೀತಿಯ ಚ್ಯುತಿ ಎದುರಾಗದಂತೆ ಎಚ್ಚರ ವಹಿಸಬೇಕು.

ಹಿರಿಯ ನಾಗರಿಕರು ತಮ್ಮಲ್ಲಿನ ಸ್ಥಿರ ಅಥವಾ ಚರ ಆಸ್ತಿಗಳ ವಿಲೇವಾರಿ ಸಂದರ್ಭ ಮುಂದಾಲೋಚನೆ ಮಾಡಬೇಕು. ಗಿಫ್ಟ್ ಅಥವಾ ಸೇಲ್ಸ್ ಡೀಡ್‌ಗಳ ಸಂದರ್ಭವೂ ಅಗತ್ಯವಿರುವ ಉಚಿತ ಮಾಹಿತಿಗಳನ್ನು ಪಡೆಯಲು ಹಿರಿಯ ನಾಗರಿಕರಿಗೆ ನ್ಯಾಯಾಧೀಶರು ಮಾಹಿತಿ ನೀಡಿದರು.

ಕೊಡಗು ಜಿಲ್ಲಾ ವಿಕಲ ಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಕೆ.ಜಿ.ವಿಮಲ ಪ್ರಾಸ್ತಾವಿಕವಾಗಿ ಮಾತನಾಡಿ, ಹಿರಿಯ ನಾಗರಿಕರ ಬಗ್ಗೆ ಅವರ ಕುಟುಂಬದ ಸದಸ್ಯರು ಅಥವಾ ಸಮಾಜ ನಿರ್ಲಕ್ಷö್ಯ ತೋರುವುದು ಕಂಡುಬAದಲ್ಲಿ ಹಿರಿಯರ ರಕ್ಷಣೆಗೆ ಸರ್ಕಾರ ಜಾರಿಗೆ ತಂದಿರುವ ನಿಯಮಾವಳಿಗಳ ಕುರಿತು ಮಾಹಿತಿ ಒದಗಿಸಿದರು.

ಕುಶಾಲನಗರ ವಕೀಲರ ಸಂಘದ ಕಾರ್ಯದರ್ಶಿ ಕೆ.ಬಿ. ಮೋಹನ್ ಉಪನ್ಯಾಸ ನೀಡಿ, ಮಕ್ಕಳಿಗೆ ಸಂಸ್ಕಾರಯುತ ಬದುಕು ಕಲಿಸಿ ಕೊಡುವ ಮೂಲಕ ಉತ್ತಮ ಸಮಾಜ ಕಾಣಲು ಸಾಧ್ಯ ಎಂದರು.

ಕುಶಾಲನಗರ ರೋಟರಿ ಅಧ್ಯಕ್ಷÀ ಮನು ಪೆಮ್ಮಯ್ಯ ಅಧ್ಯಕ್ಷತೆಯಲ್ಲಿ ಕಾರ್ಯಾಗಾರ ನಡೆಯಿತು. ಈ ಸಂದರ್ಭ ಮಾತನಾಡಿದ ಅವರು ಹಿರಿಯರು ತಮ್ಮ ಭದ್ರತೆ ರಕ್ಷಣೆ ಬಗ್ಗೆ ಗಮನ ಹರಿಸುವುದು ಅಗತ್ಯ ಎಂದರು. ಪ್ರತಿಯೊಬ್ಬ ಹಿರಿಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಈ ನಿಟ್ಟಿನಲ್ಲಿ ರೋಟರಿ ಸದಾ ಸಹಾಯ ಹಸ್ತ ನೀಡಲು ಸಿದ್ಧವಿದೆ ಎಂದರು.

ಕುಶಾಲನಗರದ ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಮಂಡೆಪAಡ ಬೋಸ್ ಮೊಣ್ಣಪ್ಪ, ಆರೋಗ್ಯ ಇಲಾಖೆಯ ಹಿರಿಯ ಉಪನಿರೀಕ್ಷಕ ವಿಶ್ವಜ್ಞ, ಸಹಾಯವಾಣಿ ಕೇಂದ್ರದ ತೀರ್ಥ ಕುಮಾರ್, ಪೊಲೀಸ್ ಇಲಾಖೆಯ ಸಹಾಯಕ ಉಪ ನಿರೀಕ್ಷಕ ನಂದಾ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಟಿ.ಆರ್. ಹರೀಶ್ ಹಿರಿಯ ನಾಗರಿಕರಿಗೆ ತಮ್ಮ ಇಲಾಖೆ ಮೂಲಕ ಲಭಿಸುವ ಸೌಲಭ್ಯಗಳ ಬಗ್ಗೆ ಮಾಹಿತಿ ಒದಗಿಸಿದರು. ಅಂಗನವಾಡಿ ಕಾರ್ಯಕರ್ತೆ ಚಂದ್ರಿಕಾ ಪ್ರಾರ್ಥಿಸಿದರು. ಹರೀಶ್ ಸ್ವಾಗತಿಸಿ ನಿರೂಪಿಸಿದರು.