ಮಡಿಕೇರಿ, ಫೆ. ೧೦: ಕಳ್ಳತನವಾಗಿದ್ದ., ಬೇರೆ ಕಾರಣಗಳಿಂದ ಕಳೆದುಹೋಗಿದ್ದ ಒಟ್ಟು ೧೦೪ ಮೊಬೈಲ್ಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಸೈಬರ್ ಕ್ರೆöÊಂ ಹಾಗೂ ಅಪರಾಧ ಪತ್ತೆದಳದ ಪೊಲೀಸರು ಯಶಸ್ವಿಯಾಗಿದ್ದಾರೆ. ಮೊಬೈಲ್ ಕಳೆದುಕೊಂಡವರಿಗೆ ಪೊಲೀಸ್ ವರಿಷ್ಠಾಧಿಕಾರಿಗಳು ಮರಳಿಸಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಈ ಬಗ್ಗೆ ಎಸ್.ಪಿ. ಬಿಂದುಮಣಿ ಮಾಹಿತಿ ನೀಡಿದರು. ಕಳೆದ ೨೦೨೧ ರಿಂದ ೨೪, ೨೫ ರವರೆಗೆ ಕಳೆದುಹೋಗಿದ್ದ ಮೊಬೈಲ್ಗಳನ್ನು ಪತ್ತೆಹಚ್ಚಲಾಗಿದೆ. ಅದರಲ್ಲೂ ೨೦೨೫ರಲ್ಲಿ ಅತಿ ಹೆಚ್ಚು ಮೊಬೈಲ್ ಕಳೆದು ಹೋಗಿದ್ದು, ಈ ಬಗ್ಗೆ ದಾಖಲಾಗಿದ್ದ ದೂರಿನ ಆಧಾರದಲ್ಲಿ ಸೈಬರ್ ಕ್ರೆöÊಂ ಪೊಲೀಸರು ಸಿಇಐಆರ್ ಪೋರ್ಟಲ್ ಮೂಲಕ ಪತ್ತೆಹಚ್ಚಿದ್ದಾರೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಒಟ್ಟು ರೂ. ೧೧ ಲಕ್ಷ ಮೌಲ್ಯದ ೧೦೪ ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಸೈಬರ್ ಕ್ರೆöÊಂ ಹಾಗೂ ಅಪರಾಧ ಪತ್ತೆ ದಳದವರು ಹಾಗೂ ಇತರ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆ ನಡೆಸಿ ಜಿಲ್ಲೆ, ರಾಜ್ಯ ಮಾತ್ರವಲ್ಲದೆ ಕೇರಳ ಹಾಗೂ ತಮಿಳುನಾಡಿನಿಂದಲೂ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಮೊಬೈಲ್ ಕಳವಾದರೆ ಅಥವಾ ಕಳೆದು ಹೋದರೆ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಬಹುದು. ಅಥವಾ ಸಿಇಐಆರ್ ಪೋರ್ಟಲ್ನಲ್ಲಿ ಮೊಬೈಲ್ನ ಡಿಜಿಟ್ಗಳನ್ನು ನಮೂದಿಸಿ ಕಂಡು ಹಿಡಿಯಬಹುದೆಂದು ಎಸ್ಪಿ ಸಲಹೆ ಮಾಡಿದರು. ಮೊಬೈಲ್ ಕಳೆದುಕೊಂಡವರನ್ನು ಕರೆ ಮಾಡಿ ಕಚೇರಿಗೆ ಕರೆಸಿಕೊಳ್ಳಲಾಗಿತ್ತು. ಅವರುಗಳಿಗೆ ಎಸ್ಪಿಯವರು ಮೊಬೈಲ್ಗಳನ್ನು ಮರಳಿಸಿದರಲ್ಲದೆ, ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳನ್ನು ಅಭಿನಂದಿಸಿದರು.
೪ಐದನೇ ಪುಟಕ್ಕೆ
(ಮೊದಲ ಪುಟದಿಂದ)
ಅಭಿನಂದಿಸಿದ ಗ್ರಾಹಕರು
ಮೊಬೈಲ್ ಕಳೆದುಕೊಂಡವರಲ್ಲಿ ತಮ್ಮ ಮೊಬೈಲ್ ವಾಪಸ್ ಸಿಕ್ಕಿದ ಸಂತೋಷ ಮನೆ ಮಾಡಿತ್ತು. ತಮ್ಮ ಅನಿಸಿಕೆ ವ್ಯಕ್ತಪಡಿಸಿದ ಶನಿವಾರಸಂತೆಯ ನಾಗರಾಜ್, ತನ್ನ ಮೊಬೈಲ್ ೨೦೨೩ರಲ್ಲಿ ಕಳೆದು ಹೋಗಿದ್ದು, ವಾಪಸ್ ಸಿಗುತ್ತದೆ ಎಂಬ ಖಾತರಿ ಇರಲಿಲ್ಲ. ಇದೀಗ ಪೊಲೀಸರು ಪತ್ತೆ ಹಚ್ಚಿರುವದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ. ಪೊಲೀಸ್ ಇಲಾಖೆಗೆ ಅಬಾರಿಯಾಗಿದ್ದೇನೆ ಎಂದರು.
ಸ್ವಾತಿ ಎಂಬವರು ಮಾತನಾಡಿ, ಕಳೆದು ಹೋಗಿದ್ದ ಮೊಬೈಲ್ ಸಿಗುತ್ತದೆ ಎಂಬ ಗ್ಯಾರಂಟಿ ಇರಲಿಲ್ಲ. ನಿನ್ನೆ ಪೊಲೀಸರು ಕರೆ ಮಾಡಿ ಮೊಬೈಲ್ ಸಿಕ್ಕಿದೆ ಎಂದು ಹೇಳಿದಾಗ ಸಂತೋಷವಾಯಿತು. ಪೊಲೀಸರ ಕಾರ್ಯ ಮೆಚ್ಚುವಂತದ್ದು ಎಂದರು.
ಈ ಸಂದರ್ಭ ಡಿವೈಎಸ್ಪಿ ಸೂರಜ್, ಸೈಬರ್ ಕ್ರೆöÊಂ ವಿಭಾಗದ ಡಿವೈಎಸ್ಪಿ ಲಕ್ಷಿö್ಮಕಾಂತ್ ತಳವಾರ್, ವೃತ್ತ ನಿರೀಕ್ಷಕರುಗಳಾದ ಪಿ.ಕೆ.ರಾಜು, ಐ.ಪಿ. ಮೇದಪ್ಪ, ಪೊಲೀಸ್ ನಿರೀಕ್ಷಕರಾದ ಚಂದ್ರಶೇಖರ್, ಅಧಿಕಾರಿಗಳು, ಸಿಬ್ಬಂದಿಗಳಿದ್ದರು.