ಮಡಿಕೇರಿ, ಫೆ. ೧೦: ಅನೈತಿಕ ಸಂಬAಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಸೈನೆಡ್ ನೀಡಿ ಹತ್ಯೆಗೈದ ಮಹಿಳೆ ಹಾಗೂ ಆಕೆಯ ಪ್ರಿಯಕರನಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮವಾರಪೇಟೆ ನಿವಾಸಿ ಬಿ.ಡಿ. ಮುರಳಿ ಮತ್ತು ತಣ್ಣೀರುಹಳ್ಳ ಗ್ರಾಮದ ರಾಧ ಎಂಬಾಕೆಯ ನಡುವೆ ಅನೈತಿಕ ಸಂಬAಧವಿತ್ತು. ಇವರ ಅನೈತಿಕ ಸಂಬAಧಕ್ಕೆ ರಾಧಳ ಪತಿ ಸುರೇಶ ಎಂಬವರು ಅಡ್ಡಿಯಾಗಿದ್ದರಿಂದ ಅವರನ್ನು ಕೊಲೆ ಮಾಡಲು ರಾಧ ಮತ್ತು ಮುರಳಿ ಸಂಚು ರೂಪಿಸಿದ್ದರು. ಅದರಂತೆ ಮಂಗಳೂರಿನಲ್ಲಿ ಮೆಡಿಕಲ್ ರೆಪ್ ಆಗಿ ಕೆಲಸ ಮಾಡಿಕೊಂಡು, ಭೋಗ್ಯಕ್ಕೆ ಮನೆ ಮಾಡಿ ತಾತ್ಕಾಲಿಕ ವಾಸವಿದ್ದ ಮುರಳಿ ತಾ. ೧೭.೭.೨೦೧೯ ರಂದು ಮಹಾರಾಷ್ಟçದ ಸೊಲ್ಲಾಪುರದ ಮಲ್ಲಿಕಾರ್ಜುನ್ ಮೊಟಗಿ ಎಂಬವರೊAದಿಗೆ ವಾಟ್ಸಾö್ಯಪ್ ಮೂಲಕ ಪೊಟಾಷಿಯಂ ಸೈನೆಡ್ ಬಗ್ಗೆ ಚಾಟಿಂಗ್ ಮಾಡಿ ಅವರಿಂದ ೫೦೦ ಗ್ರಾಂ ಪೊಟಾಷಿಯಂ ಸೈನೆಡನ್ನು ಸೊಲ್ಲಾಪುರದಿಂದ ತನ್ನ ವಿಳಾಸಕ್ಕೆ ಕೊರಿಯರ್ ಮಾಡಿಸಿಕೊಂಡು ಬಳಿಕ ಹೂ, ಕುಂಕುಮ ಖರೀದಿಸಿ ತಾನು ತರಿಸಿದ್ದ ಪೊಟಾಷಿಯಂ ಸೈನೆಡ್‌ನಲ್ಲಿ ಸ್ವಲ್ಪವನ್ನು ತೆಗೆದು ನೀರಿನಲ್ಲಿ ಹಾಕಿ ಮಿಶ್ರಣ ಮಾಡಿ, ಅದರೊಂದಿಗೆ ಹೂ, ಕುಂಕುಮ ಇಟ್ಟು ಅದರೊಂದಿಗೆ ಒಂದು ಪತ್ರವನ್ನು ಇಟ್ಟು ಅದರಲ್ಲಿ ಇದು ದೇವರ ಪ್ರಸಾದ ಮನೆಯ ಯಜಮಾನ ಮಾತ್ರ ಕುಡಿಯಬೇಕು ಎಂದು ಬರೆದು ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಪ್ಯಾಕ್ ಮಾಡಿ ರಾಧಳ ಗಂಡ ಸುರೇಶ ಕೆಲಸ ಮಾಡುತ್ತಿದ್ದ ಸೋಮವಾರಪೇಟೆ ಪಟ್ಟಣದ ಹೊಟೇಲ್‌ಗೆ ಕೊರಿಯರ್ ಮಾಡಿದ್ದ. ಅದನ್ನು ರಾಧ ತಾ. ೪.೮.೨೦೧೯ ರಂದು ಸಂಜೆ ೬ ಗಂಟೆಗೆ ತನ್ನ ವಾಸದ ಮನೆಯಲ್ಲಿ ತನ್ನ ಗಂಡ ಸುರೇಶ ಬೇಡ ಎಂದರೂ ಕೂಡ ಬಿಡದೆ ದೇವರ ಪ್ರಸಾದ ಬೇಡ ಎನ್ನಬಾರದು ಎಂದು ಒತ್ತಾಯಪೂರ್ವಕವಾಗಿ ಪೊಟಾಷಿಯಂ ಸೈನೆಡ್ ಮಿಶ್ರಿತ ನೀರನ್ನು ಸುರೇಶ್‌ಗೆ ಕುಡಿಸಿ ಸುರೇಶನನ್ನು ಕೊಲೆ ಮಾಡಿ, ಉಳಿದಿದ್ದ ಸೈನೆಡ್ ಮಿಶ್ರಿತ ನೀರು ಹಾಗೂ ಪ್ಲಾಸ್ಟಿಕ್ ಡಬ್ಬವನ್ನು ಮನೆಯ ಹಿಂಬದಿ ನೀರಿನ ಒಲೆಗೆ ಹಾಕಿ ಸುಟ್ಟು ಹಾಕಿದ್ದಳು.

ಈ ಬಗ್ಗೆ ಪಿ.ಎಸ್.ಐ. ಶಿವಶಂಕರ್ ಪ್ರಕರಣ ದಾಖಲಿಸಿ ಮುರಳಿ ಹಾಗೂ ರಾಧ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆದು ಮುರಳಿ ಹಾಗೂ ರಾಧ ಸಂಚು ರೂಪಿಸಿ ಸೈನೆಡ್ ನೀಡಿ ಸುರೇಶನನ್ನು ಕೊಲೆ ಮಾಡಿ, ಸಾಕ್ಷಾö್ಯ ನಾಶಪಡಿಸಿದ ಆರೋಪ ಸಾಬೀತಾದ ಮೇರೆಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಹೊಸಮನಿ ಪುಂಡಲಿಕ್ ಅವರು, ಮುರಳಿ ಹಾಗೂ ರಾಧಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಸರಕಾರಿ ಅಭಿಯೋಜಕರಾದ ಕೆ.ಜಿ. ಅಶ್ವಿನಿ ಅವರು ವಾದ ಮಂಡಿಸಿದ್ದರು.