ಮಡಿಕೇರಿ, ಫೆ. ೧೦: ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ, ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ವತಿಯಿಂದ ಮಹಾಶಿವರಾತ್ರಿ ಅಂಗವಾಗಿ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ತಾ. ೧೫ ರಂದು ವಿಶೇಷ ಪೂಜೆ ಏರ್ಪಡಿಸಲಾಗಿದೆ.
ಅಂದು ಬೆಳಿಗ್ಗೆ ೬.೪೫ಕ್ಕೆ ಮಹಾಪೂಜೆ, ೭.೧೫ಕ್ಕೆ ನಿತ್ಯ ಸೇವೆಗಳ ಆರಂಭ, ೯.೩೦ಕ್ಕೆ ಸಾಮೂಹಿಕ ರುದ್ರ ಹೋಮ ಸಂಕಲ್ಪ ಹಾಗೂ ಏಕದಶ ರುದ್ರಾಭಿಷೇಕ, ೧೦ ಗಂಟೆಗೆ ಸಾಮೂಹಿಕ ರುದ್ರ ಹೋಮ ಪ್ರಾರಂಭ, ಮಧ್ಯಾಹ್ನ ೧೨ ಗಂಟೆಗೆ ಸಾಮೂಹಿಕ ರುದ್ರಹೋಮ ಪೂರ್ಣಾಹುತಿ, ೧೨.೩೦ಕ್ಕೆ ಕಲಶಾಭಿಷೇಕ, ೧ ಗಂಟೆಗೆ ಮಹಾಪೂಜೆ, ೧.೩೦ಕ್ಕೆ ತೀರ್ಥ ಪ್ರಸಾದ ವಿತರಣೆ, ಸಂಜೆ ೪ ಗಂಟೆಗೆ ದೇವರ ದರ್ಶನ ಹಾಗೂ ಸೇವೆಗೆ ಅವಕಾಶ, ರಾತ್ರಿ ೯ ಗಂಟೆಗೆ ಮಹಾಪೂಜೆ ನಡೆಯಲಿದೆ.
ಮಹಾಶಿವರಾತ್ರಿ ಹಬ್ಬದ ಜಾಗರಣೆ ಪ್ರಯುಕ್ತ ತಾ. ೧೫ ರಿಂದ ತಾ. ೧೬ ರ ಬೆಳಗ್ಗಿನ ಜಾವ ೪.೩೦ ಗಂಟೆವರೆಗೆ ದೇವರ ದರ್ಶನಕ್ಕೆ ಅವಕಾಶವಿರುತ್ತದೆ. ರುದ್ರ ಹೋಮ ಮತ್ತು ಏಕದಶ ಸಾಮೂಹಿಕ ರುದ್ರಾಭಿಷೇಕ ಸೇವಾರ್ಥ ಮಾಡಿಸಲು ಇಚ್ಛಿಸುವ ಭಕ್ತಾದಿಗಳು ದೇವಾಲಯದ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವAತೆ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ ತಿಳಿಸಿದ್ದಾರೆ.
ತಾ. ೧೨ ರಂದು ಸ್ವಚ್ಛತಾ ಕಾರ್ಯ
ಮಹಾಶಿವರಾತ್ರಿ ಪ್ರಯುಕ್ತ ತಾ. ೧೨ ರಂದು ಸಂಜೆ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯ ಇರುವದರಿಂದ ಸಂಜೆ ದೇವರ ದರ್ಶನಕ್ಕೆ ಅವಕಾಶವಿರುವದಿಲ್ಲ, ಭಕ್ತಾದಿಗಳು ಸಹಕರಿಸುವಂತೆ ಚುಮ್ಮಿ ದೇವಯ್ಯ ಕೋರಿದ್ದಾರೆ.