ಸೋಮವಾರಪೇಟೆ, ಫೆ. ೧೦: ಚೌಡ್ಲು ಆಲೇಕಟ್ಟೆ ರಸ್ತೆಯ ಸಾರ್ವಜನಿಕ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ ೩ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ ಮತ್ತು ಶ್ರೀನಿವಾಸ ಕಲ್ಯಾಣ ಉತ್ಸವ ತಾ. ೧೨ ರಂದು ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎಸ್.ಎಂ.ಸುಬ್ರಮಣ್ಯ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. ೧೨ರ ಬೆಳಿಗ್ಗೆ ೯ಗಂಟೆಗೆ ಶಲಾತತ್ವಾಧಿವಾಸ ಹೋಮ, ನವತಪ್ರಧಾನ, ಕಲಾ ಕಲಶ ಪ್ರತಿಷ್ಠೆ, ಕಲಾಭಿಷೇಕ ಮಧ್ಯಾಹ್ನ ೧ ಗಂಟೆಗೆ ಮಹಾಮಂಗಳಾರತಿ, ಅನ್ನಸಂತರ್ಪಣೆ ನಡೆಯಲಿದೆ ಎಂದರು. ಸಂಜೆ ೫ಗಂಟೆಗೆ ಸ್ವಾಮಿ ಶ್ರೀನಿವಾಸ ಕಲ್ಯಾಣೋತ್ಸವ, ೮ ಗಂಟೆಗೆ ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಗೌರವಾಧ್ಯಕ್ಷ ಬಿ.ಡಿ. ಗೋವಿಂದ, ಉಪಾಧ್ಯಕ್ಷರಾದ ಸಿ.ಕೆ. ಮೋಹನ್, ಮಹೇಶ್ ತಿಮ್ಮಯ್ಯ, ಕಾರ್ಯದರ್ಶಿ ಟಿ.ಎ. ಪ್ರಕಾಶ್, ಸಹ ಕಾರ್ಯದರ್ಶಿ ಎಂ.ಜಿ. ಪ್ರವೀಣ್, ಖಜಾಂಚಿ ಎಂ.ಬಿ. ಉಮೇಶ್ ಇದ್ದರು.