ಕೂಡಿಗೆ, ಫೆ. ೯: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ೨೦೨೬-೨೭ನೇ ಸಾಲಿಗೆ ರಾಜ್ಯ ವಲಯದ ಕ್ರೀಡಾ ಶಾಲೆ, ಕ್ರೀಡಾ ವಸತಿ ನಿಲಯಗಳಿಗೆ ಪ್ರತಿಭಾನ್ವಿತ ಕ್ರೀಡಾ ಪಟುಗಳ ಆಯ್ಕೆ ಪ್ರಕ್ರಿಯೆ ಕೂಡಿಗೆ ಸರಕಾರಿ ಕ್ರೀಡಾ ಪ್ರೌಢಶಾಲಾ
ಮೈದಾನದಲ್ಲಿ ನಡೆಯಿತು.
ಅಥ್ಲೆಟಿಕ್, ವಾಲಿಬಾಲ್, ಹಾಕಿ, ಜಿಮ್ನಾಸ್ಟಿಕ್ ಸೇರಿದಂತೆ ವಿವಿಧ ಕ್ರೀಡೆಗಳ ಸಂಬAಧ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಸೋಮವಾರಪೇಟೆ ಹಾಗೂ ಕುಶಾಲನಗರ ತಾಲೂಕಿನ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ ದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿಸ್ಮಯ್ ಚಕ್ರವರ್ತಿ, ಶಾಲಾ ಮುಖ್ಯೋಪಾಧ್ಯಾಯಿನಿ ಅಶ್ವಿತ್, ಹಾಕಿ ತರಬೇತುದಾರರಾದ ವೆಂಕಟೇಶ್, ದೀನಾಮಣಿ, ಕೆ.ಕೆ ಬಿಂದಿತಾ, ಸುಬ್ಬಯ್ಯ, ಗಣಪತಿ, ಅಥ್ಲೆಟಿಕ್ಸ್ ತರಬೇತುದಾರರಾದ ಮಂಜುನಾಥ, ಮಹಾಬಲ ಹಾಗೂ ಇತರರು ಹಾಜರಿದ್ದರು.