ಸಿದ್ದಾಪುರ ಫೆ. ೯: ಇತ್ತೀಚೆಗೆ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಅಬ್ದುಲ್ ಲತೀಫ್ ಅವರ ನಿವಾಸಕ್ಕೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಭೇಟಿ ನೀಡಿ ಸಾಂತ್ವನ ಹೇಳಿದರು.
ಹುಂಡಿಯ ನಿವಾಸಿ ಅಬ್ದುಲ್ ಲತೀಫ್ ಇತ್ತೀಚೆಗೆ ಕೌರಿಬೆಟ್ಟ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಆನೆ ದಾಳಿ ನಡೆಸಿತ್ತು. ಈ ಹಿನ್ನೆಲೆ ಕುಟುಂಬಕ್ಕೆ ಪೊನ್ನಣ್ಣ ಅವರು ಸಾಂತ್ವನ ಹೇಳಿ ಸ್ಥೆöÊರ್ಯ ತುಂಬಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ, ಸದಸ್ಯರಗಳಾದ ಮಹಮ್ಮದ್ ಅಲಿ, ಹನೀಫ್, ಇಸ್ಮಾಯಿಲ್, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಚಿನ್ನಮ್ಮ, ಇತರರು ಹಾಜರಿದ್ದರು.