ವೀರಾಜಪೇಟೆ, ಫೆ. ೯: ಪಟ್ಟಣದ ಶ್ರೀ ದಕ್ಷಿಣ ಮಾರಿಯಮ್ಮ ಮತ್ತು ಶ್ರೀ ಅಂಗಾಳ ಪರಮೇಶ್ವರಿ ದೇವಸ್ಥಾನ, ಸಾಧು ಶೆಟ್ಟಿ ೨೪ ಮನೆ ತೆಲುಗು ಶೆಟ್ಟಿ ಸಂಘ ವತಿಯಿಂದ ತೆಲುಗು ಶೆಟ್ಟರ ಬೀದಿಯ ಶ್ರೀ ಅಂಗಾಳ ಪರಮೇಶ್ವರಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ ತಾ.೧೩ ರಿಂದ ೧೬ ರವರೆಗೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಟಿ.ಪಿ. ಕೃಷ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾ.೧೩ರಂದು ಬೆಳಿಗ್ಗೆ ೭ ಗಂಟೆಗೆ ಧ್ವಜ ಸ್ಥಂಭ ಪೂಜೆ, ತಾ.೧೪ ರಂದು ಮಧ್ಯಾಹ್ನ ೧೨ ಗಂಟೆಗೆ ತಳಿಗೆ ಪೂಜೆ, ಕಾವಲು ದೇವತೆಗಳ ಪೂಜೆ ನಂತರ ಪ್ರಸಾದ ವಿನಿಯೋಗ ನಡೆಯಲಿದೆ. ತಾ.೧೫ರಂದು ಬೆಳಿಗ್ಗೆ ೭ ಗಂಟೆಗೆ ತಲಕಾವೇರಿಯಿಂದ ಶಕ್ತಿ ಆವಾಹನೆ, ಅಭಿಷೇಕ ಪೂಜೆ, ನಂತರ ಪ್ರಸಾದ ವಿನಿಯೋಗ, ರಾತ್ರಿ ೭.೩೦ ಗಂಟೆಗೆ ಪ್ರಥಮ ಕಾಲ ಅಭಿಷೇಕ ಪೂಜೆ, ಪ್ರಸಾದ ವಿನಿಯೋಗ, ರಾತ್ರಿ ೧೦ ಗಂಟೆಗೆ ದ್ವಿತೀಯ ಕಾಲ ಅಭಿಷೇಕ ಪೂಜೆ, ಪ್ರಸಾದ ವಿನಿಯೋಗ, ಮಧ್ಯರಾತ್ರಿ ೧೨ ಗಂಟೆಗೆ ತೃತೀಯ ಕಾಲ ಅಭಿಷೇಕ ಪೂಜೆ, ಪ್ರಸಾದ ವಿನಿಯೋಗ ನಡೆಯಲಿದೆ.

ತಾ.೧೬ರಂದು ಬೆಳಿಗ್ಗೆ ೪ ಗಂಟೆಗೆ ಚತುರ್ಥ ಕಾಲ ಅಭಿಷೇಕ ಪೂಜೆ ನಂತರ ಪ್ರಸಾದ ವಿನಿಯೋಗ, ಮಧ್ಯಾಹ್ನ ೧೨ ಗಂಟೆಗೆ ಅಲಂಕಾರ ಪೂಜೆ ಹಾಗೂ ಅನ್ನ ಸಂತರ್ಪಣೆ, ನಂತರ ಶ್ರೀ ಅಂಗಾಳ ಪರಮೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯೊಂದಿಗೆ ಮುಖ್ಯ ಬೀದಿಗಳಲ್ಲಿ ಕಂಚಿ ಕಾಮಾಕ್ಷಿ ದೇವಾಲಯ ರಸ್ತೆಯಲ್ಲಿರುವ ಕಂಚಿ ಕಾಮಾಕ್ಷಿ ದೇವಸ್ಥಾನದವರೆಗೆ ಮೆರವಣಿಗೆ ನಡೆಸಲಾಗುತ್ತದೆ. ರಾತ್ರಿ ೮.೩೦ ಗಂಟೆಗೆ ವಿಶೇಷಾರಾಧನೆ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ ಎಂದು ತಿಳಿಸಿದ್ದಾರೆ.