ಸೋಮವಾರಪೇಟೆ, ಫೆ. ೯: ಸುತ್ತಮುತ್ತಲೂ ಹಚ್ಚ ಹರಿಸಿನ ಪ್ರದೇಶ, ಬಹುತೇಕ ಭೂ ಭಾಗವನ್ನು ಕಾಫಿ ತೋಟಗಳು ಆವರಿಸಿದ್ದರೆ, ಉಳಿದಂತೆ ಅರಣ್ಯ. ನಡುವೆ ನೆಲೆಯಾಗಿರುವ ಐಗೂರು ಗ್ರಾಮ ಹಲವು ಸಮಸ್ಯೆಗಳಲ್ಲಿ ದಿನದೂಡುತ್ತಿದೆ. ಪ್ರಮುಖವಾಗಿ ಕಾಡಾನೆಗಳ ಸಮಸ್ಯೆಯನ್ನು ವರ್ಷದ ಬಹುತೇಕ ಸಮಯ ಎದುರಿಸುತ್ತಿರುವ ಐಗೂರಿನಲ್ಲಿಂದು ಕನ್ನಡ ಸಾರಸ್ವತ ಲೋಕದ ವೈಭವ ಕಂಡುಬAತು.

ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಹಾಗೂ ಸೋಮವಾರಪೇಟೆ ತಾಲೂಕು ಘಟಕದ ನೇತೃತ್ವದಲ್ಲಿ, ಐಗೂರು ಕಸಾಪ ಘಟಕದ ಆಶ್ರಯದಲ್ಲಿ ಐಗೂರಿನ ಕಾಜೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜರುಗಿದ ೯ನೇ ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ಕನ್ನಡಿಗರ ಸಮ್ಮಿಲನದೊಂದಿಗೆ ಯಶಸ್ವಿಯಾಯಿತು.

ಸಮ್ಮೇಳನದಲ್ಲಿ ಸೋಮವಾರಪೇಟೆ ತಾಲೂಕಿನ ವಿವಿಧ ಭಾಗಗಳಿಂದ ಕನ್ನಡಾಭಿಮಾನಿಗಳು ಭಾಗವಹಿಸಿದ್ದರೆ, ಜಿಲ್ಲೆಯ ವಿವಿಧೆಡೆಗಳಿಂದಲೂ ಕಸಾಪ ಪದಾಧಿಕಾರಿಗಳು ಆಗಮಿಸಿದ್ದರು. ಮಕ್ಕಳು ಕನ್ನಡ ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದರು. ಸಮ್ಮೇಳನದಲ್ಲಿ ಮಹಿಳೆಯರು ಹೆಚ್ಚಾಗಿ ಭಾಗವಹಿಸಿದ್ದರು.

ಬೆಳಿಗ್ಗೆ ಕಾಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ರಾಷ್ಟç ಧ್ವಜಾರೋಹಣವನ್ನು ಐಗೂರು ಕಸಾಪ ಘಟಕದ ಅಧ್ಯಕ್ಷ ನಂಗಾರು ಕೀರ್ತಿ ಪ್ರಸಾದ್ ನೆರವೇರಿಸಿದರು. ಕನ್ನಡ ಧ್ವಜಾರೋಹಣವನ್ನು ಕಸಾಪ ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್, ಕನ್ನಡ ಸಾಹಿತ್ಯ ಪರಿಷತ್‌ನ ಧ್ವಜಾರೋಹಣವನ್ನು ಕಸಾಪ ಜಿಲ್ಲಾಧ್ಯಕ್ಷ ಕೇಶವ ಕಾಮತ್ ನೆರವೇರಿಸಿದರು.

ನಂತರ ಐಗೂರು ಕಬ್ಬಿಣ ಸೇತುವೆ ಬಳಿಯಿಂದ ಕಾಜೂರು ಮಾರ್ಗವಾಗಿ ಸಮ್ಮೇಳನಾಧ್ಯಕ್ಷೆ ಜಲಜಾ ಶೇಖರ್ ಅವರನ್ನು ಅಲಂಕೃತ ರಥದಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪರಮೇಶ್‌ಕುಮಾರ್ ಮೆರವಣಿಗೆಗೆ ಚಾಲನೆ ನೀಡಿದರು. ಕಾಜೂರು ಅರಣ್ಯ ವಸತಿ ಗೃಹದವರೆಗೆ ಕನ್ನಡಾಭಿಮಾನಿಗಳು ವಾಹನ ಜಾಥಾ ನಡೆಸಿದರು. ನಂತರ ಕಾಲ್ನಡಿಗೆ ಮೂಲಕ ಕಾಜೂರು ಶಾಲಾ ಮೈದಾನದವರೆಗೆ ಮೆರವಣಿಗೆ ನಡೆಯಿತು. ಅಲಂಕೃತ ರಥದಲ್ಲಿ ಆಸೀನರಾಗಿದ್ದ ಸಮ್ಮೇಳನಾಧ್ಯಕ್ಷರೊಂದಿಗೆ ಪ್ರಮುಖರು ಇದ್ದರು.

ರಸ್ತೆಯ ಎರಡೂ ಬದಿಯಲ್ಲಿರುವ ಮನೆಗಳ ಮುಂಭಾಗ ರಂಗೋಲಿ ಬಿಡಿಸಿ ಮೆರವಣಿಗೆಯನ್ನು ಸ್ಥಳೀಯರು ಸ್ವಾಗತಿಸಿದರು. ಶಾಲಾ ಕಾಲೇಜು ವಿದ್ಯಾರ್ಥಿಗಳು, ಕನ್ನಡಾಭಿಮಾನಿಗಳು ಸಂಭ್ರಮದಿAದ ಹೆಜ್ಜೆಹಾಕಿದರು. ಮಹಿಳೆಯರು ಪೂರ್ಣಕುಂಭದೊAದಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರೆ, ಜೋಡೆತ್ತಿನಗಾಡಿಯು ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು; ಇದರೊಂದಿಗೆ ಕನ್ನಡ ನಾಡಿನ ಸಂಸ್ಕೃತಿಯ ಧ್ಯೋತಕವಾಗಿತ್ತು.

ಮೆರವಣಿಗೆಯಲ್ಲಿ ಮಂಗಳವಾದ್ಯ, ತೋಳೂರುಶೆಟ್ಟಳ್ಳಿಯ ಸುಗ್ಗಿ ಕುಣಿತ ತಂಡ, ಮಂಡ್ಯದ ನಗಾರಿ, ಪಟ ಕುಣಿತ, ಐಗೂರಿನ ಚಾಣಕ್ಯ ತಂಡದಿAದ ಆಕರ್ಷಕ ಚಂಡೆ ವಾದ್ಯ, ಕೊಡಗಿನ ವಾಲಗ, ಬ್ಯಾಂಡ್‌ಸೆಟ್‌ಗಳು ಅದ್ದೂರಿತನ ನೀಡಿತು. ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಸ್ಥಳೀಯ ಸ್ತಿçÃಶಕ್ತಿ ಸಂಘ, ಸ್ವ ಸಹಾಯ ಸಂಘ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಯುವಕ-ಯುವತಿ ಮಂಡಳಿ ಸದಸ್ಯರು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಉಪನ್ಯಾಸಕರುಗಳು, ಶಿಕ್ಷಕರು, ಆಟೋ-ಟ್ಯಾಕ್ಸಿ ಚಾಲಕರೂ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರ ಮುಂದಾಳತ್ವದಲ್ಲಿ ಮೆರವಣಿಗೆ ಸಾಗಿತು.

ರಸ್ತೆಯ ಇಕ್ಕೆಲಗಳಲ್ಲಿ ಕನ್ನಡ ಬಾವುಟಗಳನ್ನು ಕಟ್ಟಿದ್ದರೆ, ಬೃಹತ್ ಬ್ಯಾನರ್‌ಗಳ ಮೂಲಕ ಸಮ್ಮೇಳನಕ್ಕೆ ಸ್ವಾಗತ ಕೋರಲಾಗಿತ್ತು. ಐಗೂರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಸಂಪೂರ್ಣ ಕನ್ನಡಮಯವಾಗಿತ್ತು. ಕೆಂಪು-ಹಳದಿ ತೋರಣ ಕಣ್ಮನ ಸೆಳೆಯಿತು.

ಇದಕ್ಕೂ ಮುನ್ನ ಐಗೂರು ಭಾಗದಲ್ಲಿ ಸಾಮಾಜಿಕ ಸೇವೆ ಸಲ್ಲಿಸಿದ ಮಹನೀಯರುಗಳಾದ ದಿ.ಕೆ.ಟಿ. ಪೂವಯ್ಯ, ಗುಂಡುಕುಟ್ಟಿ ಮಂಜುನಾಥಯ್ಯ, ಮಲ್ಲಚೀರ ಪಟೇಲ್ ಸೋಮಯ್ಯ, ಮಲ್ಲಪ್ಪ, ಲಿಂಗಪ್ಪ, ಬೆಳ್ಳಿಯಪ್ಪ, ಚಂಗಪ್ಪ, ಸುರೇಶ್ ಎಂ.ಬಿ.,ಎA.ಬಿ. ದೇವರಾಜ್, ಎಂ.ಎಲ್. ಅಪ್ಪಚ್ಚು, ಎಂ.ಎಲ್. ಕೃಪಾಲ್ ಅವರುಗಳ ನೆನಪಿನಲ್ಲಿ ನಿರ್ಮಿಸಿದ್ದ ದ್ವಾರಗಳನ್ನು ಸ್ಥಳೀಯ ಗಣ್ಯರು ಉದ್ಘಾಟಿಸಿದರು.

ಇದರೊಂದಿಗೆ ಸಂಪಿಗೆಕೊಲ್ಲಿ ಡಿ.ಎಸ್. ದೇವಯ್ಯ, ಪೂವಮ್ಮ, ಮೂಲೆ ಮಜಲು ದಿ. ಸೋಮಣ್ಣ ತಂಗಮ್ಮ, ನಂಗಾರು ಬೋಪಯ್ಯ ಸೀತಮ್ಮ, ನಂಗಾರು ಗೋಪಾಲ ಮಾಸ್ಟರ್, ಚಿಣ್ಣಪ್ಪ, ಮುಕ್ಕಾಟೀರ ಮಾದಪ್ಪ, ಮಚ್ಚಂಡ ನಾಚಪ್ಪ, ಕಾಳೇರಮ್ಮನ ಅಯ್ಯಣ್ಣ, ನಾಣಯ್ಯ, ಗೋಪಾಲ, ಪಾಲಾಕ್ಷ, ಸಿ.ಕೆ. ಕಾಳಪ್ಪ, ಮಣವಟ್ಟೀರ ಅಪ್ಪಯ್ಯ, ಅಕ್ಕವ್ವ, ಅಯ್ಯಣ್ಣ, ಮಂದಣ್ಣ, ಬೆಳ್ಳಿಯಪ್ಪ, ಎ.ಎಂ. ಬೆಳ್ಳಿಯಪ್ಪ, ಎ.ಕೆ. ಸುಬ್ಬಯ್ಯ, ಈಶ್ವರಿ ಮೇದಪ್ಪ ಅವರುಗಳ ಜ್ಞಾಪಕಾರ್ಥ ದ್ವಾರಗಳನ್ನು ನಿರ್ಮಿಸಲಾಗಿತ್ತು.

ಸಮ್ಮೇಳನ ನಡೆದ ಐಗೂರು-ಕಾಜೂರು ಸರ್ಕಾರಿ ಶಾಲಾ ಮೈದಾನದಲ್ಲಿ ನಿರ್ಮಿಸಿದ್ದ ವೇದಿಕೆಗೆ ದಿ. ಶ್ರೀಮತಿ ಕೊಡಗಿನ ಗೌರಮ್ಮ ಹೆಸರನ್ನಿಟ್ಟು ಅವರ ಸಾಹಿತ್ಯ ಸೇವೆಯನ್ನು ಸ್ಮರಿಸಲಾಯಿತು. ಸಾಕಮ್ಮನವರ ಹೆಸರಿನಲ್ಲಿ ಪ್ರವೇಶ ದ್ವಾರ ನಿರ್ಮಿಸಿ, ಕಾಫಿ ಕ್ಷೇತ್ರಕ್ಕೆ ಹಾಗೂ ಸಮಾಜಕ್ಕೆ ಸಾಕಮ್ಮ ಅವರು ನೀಡಿದ ಕೊಡುಗೆಯನ್ನು ನೆನಪಿಸಲಾಯಿತು. ಸಮ್ಮೇಳನದ ಸಭಾಂಗಣಕ್ಕೆ ದಿ. ದಳವಾಯಿ ಹನುಮರಾಜೇ ಅರಸ್ ಹೆಸರನ್ನಿಟ್ಟರೆ, ಸಾಹಿತಿ ಕೋವರ್‌ಕೊಲ್ಲಿ ದಿ. ಕರುಣಾಕರ ಹೆಸರಿನಲ್ಲಿ ಪುಸ್ತಕ ಮಳಿಗೆ ತೆರೆಯಲಾಗಿತ್ತು. ಕೊಡಗಿನ ಲೇಖಕರ ವಿವಿಧ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು. ಕರ್ನಾಟಕ ಜ್ಞಾನ ವಿಜ್ಞಾನ ಕೇಂದ್ರ, ಗ್ರಂಥಾಲಯದ ಅರಿವು ಕೇಂದ್ರದಿAದ ಮಾಹಿತಿ ಕೇಂದ್ರಗಳನ್ನು ತೆರೆಯಲಾಗಿತ್ತು. ಜಿಲ್ಲಾ ರಕ್ತನಿಧಿ ಘಟಕದಿಂದ ರಕ್ತದಾನ ಶಿಬಿರ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಿAದ ಅಂಗಾAಗ ದಾನ ನೋಂದಣಿ ಜರುಗಿತು. ಯುವಕರು ಸ್ವಯಂಪ್ರೇರಣೆಯಿAದ ರಕ್ತದಾನದಲ್ಲಿ ಭಾಗಿಯಾಗಿದ್ದರು.

ಕೊಡಗಿನ ಗೌರಮ್ಮ ಮುಖ್ಯ ವೇದಿಕೆಯಲ್ಲಿ ಸೋಮವಾರಪೇಟೆ ತಾಲೂಕು ೯ನೇ ಸಾಹಿತ್ಯ ಸಮ್ಮೇಳನದ ಅಧಿಕೃತ ಉದ್ಘಾಟನೆ ಜರುಗಿತು. ನಂತರ ಸ್ಥಳೀಯ ಕಲಾವಿದರನ್ನು ಒಳಗೊಂಡAತೆ ಗೀತಗಾಯನ ನಡೆಯಿತು. ನಂತರ ವಿಚಾರಗೋಷ್ಠಿ, ಕವಿಗೋಷ್ಠಿ, ಬಹಿರಂಗ ಅಧಿವೇಶನ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿವಿಧ ಭಾಷಿಕರು ನೆಲೆಯಾಗಿರುವ ಐಗೂರಿನಲ್ಲಿ ನಡೆದ ೯ನೇ ಸಾಹಿತ್ಯ ಸಮ್ಮೇಳನ ಎಲ್ಲರ ಭಾಗವಹಿಸುವಿಕೆಯಿಂದ ಯಶಸ್ವಿಯಾಯಿತು.

- ವಿಜಯ್ ಹಾನಗಲ್ / ಸುಕುಮಾರ್