ನಾಪೋಕ್ಲು, ಫೆ. ೧೦: ವೀರಾಜಪೇಟೆ ಮಾಜಿ ಶಾಸಕ, ಮಾಜಿ ವಿಧಾನಸಭಾಧ್ಯಕ್ಷ ಕೆ ಜಿ ಬೋಪಯ್ಯ ಅವರು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಭಾನುವಾರ ಕಾಡಾನೆ ದಾಳಿಗೊಳಗಾದ ಮದೆನಾಡು ನಿವಾಸಿ ಪಟ್ಟಡ ಭರತ್ ಕುಮಾರ್ ಅವರ ಆರೋಗ್ಯ ವಿಚಾರಿಸಿದರು.
ಮದೆನಾಡು ಗ್ರಾಮದಲ್ಲಿ ಆನೆ ಹಾವಳಿಯ ಬಗ್ಗೆ ಕಾರ್ಯಕರ್ತರಿಂದ ಮಾಹಿತಿ ಪಡೆದು ಆಸ್ಪತ್ರೆಗೆ ಆಗಮಿಸಿದ ಅವರು ಗಾಯಾಳುವಿಗೆ ಸಾಂತ್ವನ ಹೇಳಿದರು. ಮದೆ ವಿಎಸ್‌ಎಸ್‌ಎನ್ ನಿರ್ದೇಶಕ ಬೈನರವನ ಇಂದ್ರ ಕುಮಾರ್, ಕಾಯರ್ ಮಾರ್ ಸುರೇಶ ಕುಮಾರ್ ಉಪಸ್ಥಿತರಿದ್ದರು.