ಮಡಿಕೇರಿ, ಫೆ. ೯: ೬೬/೩೩/೧೧ ಕೆ.ವಿ ಎಂಯುಎಸ್ಎಸ್ ಮಗ್ಗುಲ, ವೀರಾಜಪೇಟೆ ವಿದ್ಯುತ್ ವಿತರಣಾ ಉಪ ಕೇಂದ್ರದಲ್ಲಿ ತ್ರೆöÊಮಾಸಿಕ ನಿರ್ವಾಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಇದೇ ತಾ. ೧೦ ರಂದು (ಇಂದು)ಬೆಳಗ್ಗೆ ೧೦ ರಿಂದ ಸಂಜೆ ೫ ಗಂಟೆ ವರೆಗೆ ಮೂರ್ನಾಡು ೩೩/೧೧ ಕೆ.ವಿ ವಿದ್ಯುತ್ ಉಪ ಕೇಂದ್ರದಿAದ ಹೊರಹೊಮ್ಮುವ ಪಾರಾಣೆ, ನಾಪೋಕ್ಲು, ಮೂರ್ನಾಡು, ಹೊದ್ದೂರು ಹಾಗೂ ಮರಗೋಡು ಫೀಡರ್ಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಈ ಫೀಡರ್ಗಳಿಂದ ಹೊರಹೊಮ್ಮುವ ಮೂರ್ನಾಡು, ಮರಗೋಡು, ಹಾಕತ್ತೂರು, ಹೊಸ್ಕೇರಿ, ಹೊದ್ದೂರು, ನರಿಯಂದಡ, ನಾಪೋಕ್ಲು, ಕುಂಜಿಲ, ಎಮ್ಮೆಮಾಡು, ಬಲ್ಲಮಾವಟಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಸಮಯ ಹಾಗೂ ಸ್ಥಳದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕೋರಿದೆ.
ಹಾಗೆಯೇ ೬೬/೩೩ ಕೆ.ವಿ ವೀರಾಜಪೇಟೆ ವಿದ್ಯುತ್ ವಿತರಣಾ ಉಪಕೇಂದ್ರ ಮಗ್ಗುಲದಲ್ಲಿ ಫೆಬ್ರುವರಿ ೧೦ ರಂದು ಬೆಳಗ್ಗೆ ೧೦ ರಿಂದ ೦೬ ಗಂಟೆ ವರೆಗೆ ತುರ್ತು ನಿರ್ವಹಣಾ ಕಾಮಗಾರಿ ನಡೆಸಬೇಕಿರುವುದರಿಂದ ವೀರಾಜಪೇಟೆ, ಸಿದ್ದಾಪುರ ಮತ್ತು ಅಮ್ಮತ್ತಿ ಶಾಖಾ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯ ಯ ಉಂಟಾಗಲಿದೆ. ಆದ್ದರಿಂದ ವೀರಾಜಪೇಟೆ ಪಟ್ಟಣ, ಬಿಟ್ಟಂಗಾಲ, ಬಿ ಶೆಟ್ಟಿಗೇರಿ, ಕೆದಮುಳ್ಳೂರು, ಕಾಕೋಟುಪರಂಬು, ಕದನೂರು, ಆರ್ಜಿ, ಬೇಟೋಳಿ, ಸಿದ್ದಾಪುರ ಪಟ್ಟಣ, ಮಾಲ್ದಾರೆ, ಗುಹ್ಯ, ಅಮ್ಮತ್ತಿ, ಚೆಂಬೆಬೆಳ್ಳೂರು, ಹಾಲುಗುಂದ, ಕಣ್ಣಂಗಾಲ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಮೇಲೆ ತಿಳಿಸಿರುವ ಸಮಯದಲ್ಲಿ ಹಾಗೂ ಸ್ಥಳದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ಕೋರಿದ್ದಾರೆ.