ಗೋಣಿಕೊಪ್ಪಲು, ಫೆ. ೯: ಬುಡಕಟ್ಟು ಕಾರ್ಮಿಕ ಸಂಘದ ವತಿಯಿಂದ ಹೊಸೂರು ಗ್ರಾಮ ಪಂಚಾಯಿತಿ ಎದುರು ಸ್ವಂತ ನಿವೇಶನಕ್ಕಾಗಿ ನಡೆಸುತ್ತಿದ್ದ ಪ್ರತಿಭಟನೆ ೨೯ನೇ ದಿನಕ್ಕೆ ಅಂತ್ಯಗೊAಡಿದೆ.

ನಿವೇಶನಕ್ಕಾಗಿ ಒತ್ತಾಯಿಸಿ ಬುಡಕಟ್ಟು ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ವೈ.ಬಿ.ಗಪ್ಪು ನೇತೃತ್ವದಲ್ಲಿ ಗ್ರಾ.ಪಂ. ಎದುರು ಪ್ರತಿಭಟನೆ ನಡೆಯುತಿತ್ತು. ಕೊಡಗು ಜಿಲ್ಲಾ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು. ನಂತರ ಪ್ರತಿಭಟನಾಕಾರರೊಂದಿಗೆ ಚÀರ್ಚೆ ನಡೆಸಿ ಪ್ರತಿಭಟನೆಯನ್ನು ಹಿಂಪಡೆಯುವAತೆ ಮನವೊಲಿಸಿದರು. ೧೫ ದಿನಗಳವರೆಗೆ ನಮ್ಮ ಬೇಡಿಕೆ ಈಡೇರದಿದ್ದಲ್ಲಿ ನಮ್ಮ ಪ್ರತಿಭಟನೆಯನ್ನು ಮತ್ತೆ ಆರಂಭಿಸುವ ಎಚ್ಚರಿಕೆಯೊಂದಿಗೆ ೨೯ ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ಹಿಂಪಡೆದರು.

ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ಮತ್ತು ವಸತಿಗಾಗಿ ೩.೩೦ ಎಕರೆ ಗಿರಿಜನ ಕಲ್ಯಾಣ ಇಲಾಖೆಯ ಹೆಸರಿನಲ್ಲಿರುವ ಭೂಮಿಯನ್ನು ಸಮತಟ್ಟು ಮಾಡಿ ಪ್ರಸ್ತುತ ಗುಡಿಸಲು ಕಟ್ಟಿಕೊಂಡು ವಾಸ ಮಾಡುತ್ತಿರುವ ೭೬ ಗಿರಿಜನ ಕುಟುಂಬಗಳಿಗೆ ಇದೇ ಸ್ಥಳದಲ್ಲಿ ಸೂಕ್ತ ನಿವೇಶನಗಳನ್ನು ನೀಡಬೇಕು. ಈಗಾಗಲೇ ಸರ್ವೆ ನಂ. ೪೭ರಲ್ಲಿ ಜಾಗವನ್ನು ಗುರುತಿಸಿದ ಸ್ಥಳದಲ್ಲಿ ೭೬ ಕುಟುಂಬಗಳು ಗುಡಿಸಲು ಕಟ್ಟಿಕೊಂಡು ಕಳೆದ ೧೦ ತಿಂಗಳಿನಿAದ ವಾಸ ಮಾಡುತ್ತಿದ್ದಾರೆ. ಇದೇ ಸ್ಥಳಗಳಲ್ಲಿ ೧೧೦ ಕುಟುಂಬಗಳಿಗೆ ೩೦x೨೦ ಅಳತೆಯ ನಿವೇಶನವನ್ನು ಹಂಚಿಕೆ ಮಾಡಲು ಇಲಾಖೆಯು ತೀರ್ಮಾನ ಕೈಗೊಂಡಿರುವುದನ್ನು ಸರಿಯಾದ ಕ್ರಮವಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದರು.

ಪ್ರತಿಭಟನೆಯಲ್ಲಿ ಬುಡಕಟ್ಟು ಕಾರ್ಮಿಕ ಸಂಘದ ಪದಾಧಿಕಾರಿಗಳಾದ ಭವ್ಯ, ಪುಷ್ಪ, ಚಿನ್ನಮ್ಮ, ಮುತ್ತ, ಕೊಡಗು ಜಿಲ್ಲಾ ಅಭಿವೃದ್ದಿ ಸಮಿತಿಯ ಪ್ರಮುಖರುಗಳಾದ ಮೈಕಲ್, ವೇಗಸ್, ಪ್ರಸನ್ ಭಟ್, ಪ್ರಭು ಮಾದಪ್ಪ, ದಾವೂದ್, ಪಿ.ಕೆ.ಯಾದವ್, ಡೇವಿಡ್, ನಾಗೇಂದ್ರ ಲವಕುಮಾರ್, ಪ್ರಭುರೈ, ಪ್ರದೀಪ್ ಕರ್ಕೆರ ಸೇರಿದಂತೆ ಇನ್ನಿತರರು ಪ್ರತಿಭಟನಾ ಸ್ಥಳದಲ್ಲಿ ಉಪಸ್ಥಿತರಿದ್ದರು.