ಸುಂಟಿಕೊಪ್ಪ, ಫೆ. ೮: ರಾಷ್ಟçವನ್ನು ಸಧೃಢಗೊಳಿಸುವ ಕಾಯಕದಲ್ಲಿ ನಾವೆಲ್ಲಾರೂ ಕಟಿಬದ್ಧರಾಗಬೇಕೆಂದು ರಾಷ್ಟಿçÃಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗದ ಪ್ರಚಾರ ಪ್ರಮುಖ್ ಸೂರಜ್ ಕರೆ ನೀಡಿದರು.

ಏಳನೇ ಹೊಸಕೋಟೆ ಮಂಡಲದ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಅಲ್ಲಿನ ಮಹಾಗಣಪತಿ-ಗೋಪಾಲಕೃಷ್ಣ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಶ್ರೇಷ್ಠವಾದ ಚಿಂತನೆಯೇ ಧರ್ಮವಾಗಿದ್ದು, ರಾಮನ ನಡೆ, ಕೃಷ್ಣನ ನುಡಿ ಅಂದರೆ ರಾಮಾಯಣ ಮಹಾಭಾರತವೇ ಜೀವನಕ್ಕೆ ಪಾಠವಾಗಿದೆ. ಹಿಂದೂ ಎಂಬುದು ರಾಷ್ಟಿçÃಯತೆಯೇ ಹೊರತು ಅದೊಂದು ಜಾತಿ ಸೂಚಕ ಪದವಲ್ಲ ಎಂದು ವಿಶ್ಲೇಷಿದ ಅವರು, ನಾವೆಲ್ಲಾರೂ ರಾಷ್ಟಿçÃಯತೆಯ ಪರಿಕಲ್ಪನೆಯಲ್ಲಿ ತಾಯಿ ಭಾರತಾಂಬೆಯನ್ನು ಪೂಜಿಸುವ ಮೂಲಕ ಒಂದೇ ತಾಯಿಯ ಮಕ್ಕಳು ಎಂಬುದನ್ನು ಅರ್ಥೈಸುವ ನಿಟ್ಟಿನಲ್ಲಿ ರಾಷ್ಟಿçÃಯ ಸ್ವಯಂ ಸೇವಕ ತನ್ನ ಶತಮಾನೋತ್ಸವ ಸಂದರ್ಭದಲ್ಲಿ ಹಿಂದೂ ಸಂಗಮ ಕಾರ್ಯಕ್ರಮದ ಮೂಲಕ ಸಮಾಜವನ್ನು ಜಾಗೃತಗೊಳಿಸಿ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಹೇಳಿದರು. ಹಿಂದೂ ಸಮಾಜದಲ್ಲಿ ಸಾಮರಸ್ಯ, ಕುಟುಂಬ ಮೌಲ್ಯವನ್ನು ತಿಳಿಸುವುದು, ಪರಿಸರ ಸಂರಕ್ಷಣೆ, ನಾಗರಿಕ ಕರ್ತವ್ಯದ ಬಗ್ಗೆ ಅರಿವು ಮೂಡಿಸುವುದು, ಸ್ವದೇಶಿ ವಸ್ತುಗಳ ಬಳಕೆಗೆ ಉತ್ತೇಜನ ನೀಡುವುದರ ಬಗ್ಗೆ ತಿಳಿ ಹೇಳುವ ಕಾರ್ಯವನ್ನು ಮುಂದಿನ ದಿನಗಳಲ್ಲಿ ಜಾಗೃತ ಹಿಂದೂ ಸಮಾಜ ಮಾಡಬೇಕಿದೆ ಎಂದ ಸೂರಜ್ ಅವರು, ಮತಾಂತರ, ಲವ್ ಜಿಹಾದ್, ಪ್ಲಾಸ್ಟಿಕ್ ಮುಕ್ತ, ವ್ಯಸನ ಮುಕ್ತ ಸಮಾಜ ಕಟ್ಟುವುದೇ ನಮ್ಮ ಗುರಿಯಾಗಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಕಂಬಿಬಾಣೆಯ ಶ್ರೀ ಬ್ರಹ್ಮ ಜ್ಞಾನ ಧ್ಯಾನ ಮಂದಿರದ ಮುಖ್ಯಸ್ಥ ಎಂ.ವಿ.ರಘುನಾಥ್ ಮಾತನಾಡಿ, ಸನಾತನ ಎಂದರೆ ಸಂಸ್ಕೃತದಲ್ಲಿ ಶಾಶ್ವತ, ಪ್ರಾಚೀನ, ಅನಾದಿ ಅಥವಾ ಸದಾ ಅಸ್ತಿತ್ವದಲ್ಲಿರುವ ಎಂಬ ಅರ್ಥಗಳಿವೆ. ಇದು ಕಾಲಾತೀತ ಸತ್ಯಗಳು, ಧರ್ಮ ಮತ್ತು ಬದುಕಿನ ಮಾರ್ಗವನ್ನು ಸೂಚಿಸುತ್ತದೆ. ಇದನ್ನು ಸಾಮಾನ್ಯವಾಗಿ ಹಿಂದೂ ಧರ್ಮದ ಮೂಲ ರೂಪವೆಂದು ಪರಿಗಣಿಸಲಾಗುತ್ತದೆ. ಹಿಂದೂ ಧರ್ಮಗ್ರಂಥಗಳಲ್ಲಿ ಅಪಾರವಾದ ಜ್ಞಾನ ಭಂಡಾರವಿದೆ. ಆದ್ದರಿಂದ ವೇದ, ಉಪನಿಷತ್ತು, ಭಗವದ್ಗೀತೆ, ರಾಮಾಯಣ ಮುಂತಾದವುಗಳನ್ನು ಅಧ್ಯಯನ ಮಾಡುವ ಅಗತ್ಯವಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಮುಖ್ಯೋಪಾಧ್ಯಾಯಿನಿ ಕೆ.ಎ.ಸಾವಿತ್ರಿ ಮಾತನಾಡಿ, ಯುವಪೀಳಿಗೆ ರಾಷ್ಟçದ ಶಕ್ತಿಯಾಗಿದ್ದು, ಅಂತಹ ಶಕ್ತಿಯನ್ನು ಸಮಾಜಕ್ಕೆ ನೀಡುವಲ್ಲಿ ತಾಯಂದಿರ ಪಾತ್ರ ಮುಖ್ಯವಾಗಿದೆ. ತಾಯಂದಿರು ಉತ್ತಮ ಜೀವನ ಮೌಲ್ಯಗಳನ್ನು ಪಾಲಿಸುವುದರೊಂದಿಗೆ ಅದನ್ನು ಮಕ್ಕಳಿಗೂ ತಿಳಿಸಿಕೊಡಬೇಕು. ಯುವಕರು ಸಮಯ ವ್ಯರ್ಥ ಮಾಡದೆ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು. ಏಳನೇ ಹೊಸಕೋಟೆ ಗ್ರಾ.ಪಂ.ಮಾಜಿ ಉಪಾಧ್ಯಕ್ಷೆ ಲಲಿತಾ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೂ ಮುನ್ನ ಮೆಟ್ನಳ್ಳ ಎಸ್.ಎಸ್.ಡಿ.ಪಿ. ಬಳಿಯಿಂದ ಮಹಾಗಣಪತಿ ದೇವಾಲಯದವರೆಗೆ ಶೋಭಾಯಾತ್ರೆ ನಡೆಯಿತು. ಶೋಭಾಯಾತ್ರೆಯಲ್ಲಿ ಛದ್ಮವೇಷಧಾರಿ ಮಕ್ಕಳು, ಭಾರತಮಾತೆ, ರಾಮ-ಸೀತೆ, ಲಕ್ಷö್ಮ್ಮಣ, ಹನುಮಂತನ ಕಲಾಕೃತಿಯುಳ್ಳ ಮಂಟಪ, ಚೆಂಡೆವಾದ್ಯ, ಸಾವಿರಾರು ಮಂದಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಮಕ್ಕಳ ಛದ್ಮವೇಷ ಸ್ಪರ್ಧೆ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.೪೦ಕ್ಕೂ ಅಧಿಕ ಮಕ್ಕಳು ಛದ್ಮವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಗೋಪೂಜೆ, ಭಾರತಮಾತೆಗೆ ಪುಷ್ಪಾರ್ಚನೆ, ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಸವೇಶ್ವರ ದೇವಾಲಯ ಸಮಿತಿ ಕಾರ್ಯದರ್ಶಿ ಕೆ.ಜಿ. ಶಿವನ್ ಸ್ವಾಗತಿಸಿ, ತಾಲೂಕು ಸೇವಾ ಪ್ರಮುಖ್ ಮುರಳಿ ವಂದೇಮಾತರA ಗೀತೆ ಹಾಡಿದರು. ಶಿಕ್ಷಕಿಯರಾದ ಶುಭಾ ಚಂದ್ರಶೇಖರ್, ಪ್ರಿಯಾ ಕಾರ್ಯಕ್ರಮ ನಿರ್ವಹಿಸಿದರೆ, ಏಳನೇ ಹೊಸಕೋಟೆ ಮಂಡಲದ ಹಿಂದೂ ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ಕೆ.ಎಂ.ರಮೇಶ್ ವಂದಿಸಿದರು. ಮಹಾಗಣಪತಿ-ಗೋಪಾಲಕೃಷ್ಣ ದೇವಾಲಯ ಸಮಿತಿ ಅಧ್ಯಕ್ಷ ದಾಸಂಡ ರಮೇಶ್ ಚಂಗಪ್ಪ, ಹಿಂದೂ ಗೆಳೆಯರ ಬಳಗದ ಅಧ್ಯಕ್ಷ ಶರವಣ, ಎಸ್.ಎನ್.ಡಿ.ಪಿ. ಅಧ್ಯಕ್ಷ ರಿಜೇಶ್ ಮತ್ತಿತರರು ಹಾಜರಿದ್ದರು.