ಪೊನ್ನAಪೇಟೆ, ಫೆ. ೮: ರಾಷ್ಟಿçÃಯ ಸ್ವಯಂಸೇವಕ ಸಂಘ ನೂರು ವಸಂತಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ, ಹಿಂದೂ ಸಮಾಜದಲ್ಲಿ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪೊನ್ನಂಪೇಟೆಯಲ್ಲಿ ಆಯೋಜಿಸಲಾಗಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯ ಹಿಂದೂಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಪಟ್ಟಣದ ಮಹಿಳಾ ಸಮಾಜ ಸಮೀಪದಿಂದ ಸಂಜೆ ಮುಖ್ಯ ರಸ್ತೆಯ ಮೂಲಕ ಭಾರತಾಂಬೆಯ ಶೋಭಾಯಾತ್ರೆಯೊಂದಿಗೆ ಕೊಡವ ಸಮಾಜ ಸಮೀಪದ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದವರೆಗೆ ಹೊರಟ ಮೆರವಣಿಗೆಯಲ್ಲಿ, ಕೇಸರಿ ಶಾಲು ಧರಿಸಿ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಮೆರವಣಿಗೆಗೆ ಮೆರಗು ನೀಡಿದರು.

ಕಲಶ ಹೊತ್ತ ಹೆಣ್ಣು ಮಕ್ಕಳು, ಶ್ರೀ ರಾಮ, ಲಕ್ಷö್ಮಣ, ಸೀತೆ, ಶ್ರೀಕೃಷ್ಣ, ಸ್ವಾಮಿ ವಿವೇಕಾನಂದ, ಕಿತ್ತೂರು ಚೆನ್ನಮ್ಮ, ಸುಭಾಷ್ ಚಂದ್ರ ಬೋಸ್, ಝಾನ್ಸಿ ರಾಣಿ ಲಕ್ಷಿö್ಮÃಬಾಯಿ ಮುಂತಾದ ಮಹನೀಯರ ಛದ್ಮವೇಷ ಧÀರಿಸಿದ ಪುಟಾಣಿಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಚಂಡೆ ಹಾಗೂ ಕೊಡವ ವಾಲಗ, ವೀರಗಾಸೆ ನೃತ್ಯ ಶೋಭಾಯಾತ್ರೆಗೆ ಮೆರುಗು ನೀಡಿತು. ಸುವೃತ ನಾಟ್ಯಾಲಯ ವಿದ್ಯಾರ್ಥಿಗಳಿಂದ ಭಜನಾ ಕುಣಿತ ಗಮನ ಸೆಳೆಯಿತು.

ನಂತರ ಶಾಲಾ ಮೈದಾನದಲ್ಲಿ ದೇವತಕ್ಕರಾದ ಚೆಪ್ಪುಡೀರ ಪೊನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮವನ್ನು

ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಪರಹಿತಾನಂದ ಮಹಾರಾಜ್ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಸರ್ವರಿಗೂ ಒಳಿತನ್ನು ಬಯಸುವ ಹಿಂದೂ ಧರ್ಮ ಶ್ರೇಷ್ಠ ಧರ್ಮವಾಗಿದ್ದು, ಪ್ರತಿಯೊಬ್ಬರೂ ಕೂಡ ಧರ್ಮ ಹಾಗೂ ಸಂಸ್ಕೃತಿಯ ಪಾಲನೆ ಮಾಡಬೇಕು ಎಂದರು.

ದಿಕ್ಸೂಚಿ ಭಾಷಣಕಾರರಾಗಿ ಮಾತನಾಡಿದ ರಾಷ್ಟಿçÃಯ ಸ್ವಯಂಸೇವಕ ಸಂಘದ ವಿಭಾಗ ಪ್ರಚಾರ ಪ್ರಮುಖ್ ಮಂಗಳೂರಿನ ಸೂರಜ್ ಮಾತನಾಡಿ ಮಹಾಭಾರತ, ರಾಮಾಯಣದ ಕಾಲದಲ್ಲಿಯೇ ಹಿಂದೂ ಎಂಬ ಚಿಂತನೆ ಇತ್ತು, ಸ್ವಾತಂತ್ರ‍್ಯದ ನಂತರ ಹಿಂದೂ ಧರ್ಮ ಎಂದರೆ, ತಾತ್ಸಾರ ಮನೋಭಾವ ಮೂಡುವಂತೆ ಮಾಡಲಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಹಿಂದೂ ಸಮಾಜ ಜಾಗೃತವಾಗಿದೆ. ಇದಕ್ಕೆಲ್ಲಾ ಕಾರಣ ಸ್ವಾಮಿ ವಿವೇಕಾನಂದರು. ಹಿಂದೂ ಧರ್ಮದ ಬಗ್ಗೆ ಹಾಕಿದ ಅಡಿಪಾಯವನ್ನು ರಾಷ್ಟಿçÃಯ ಸ್ವಯಂಸೇವಕ ಸಂಘ ಗಟ್ಟಿಗೊಳಿಸಿದೆ. ನಮ್ಮ ರಾಷ್ಟç ಬೆಳೆದಿದ್ದು ಮೌಲ್ಯಗಳ ಆಧಾರದ ಮೇಲೆ ಎಂದು ಹೇಳಿದರು.

ಶಿಕ್ಷಕಿ ನಿತ್ಯ ಅಂಬಿ ಕಾರ್ಯಪ್ಪ ಮಾತನಾಡಿ, ಎಲ್ಲಿ ಸನಾತನ ಧರ್ಮ ಇದೆಯೋ ಅಲ್ಲಿ ಪದ್ಧತಿ, ಪರಂಪರೆ, ಆಚಾರ, ವಿಚಾರ ಇರಲು ಸಾಧ್ಯ. ಹಿಂದೂ ಹೆಣ್ಣು ಮಕ್ಕಳಿಗೆ ನಾವು ವಿದ್ಯೆ ಕೊಟ್ಟರೂ ಕೂಡ ಇತ್ತೀಚಿನ ದಿನಗಳಲ್ಲಿ ಅವರು ಕೆಲವೊಂದು ವಿಚಾರಗಳಲ್ಲಿ ಬಲಿಪಶುಗಳು ಆಗುತ್ತಿದ್ದಾರೆ. ಏಕೆಂದರೆ ನಾವು ಕೊಡುತ್ತಿರುವ ವಿದ್ಯೆ ಕೇವಲ ಪುಸ್ತಕದ ಜ್ಞಾನವನ್ನು ಮಾತ್ರ ಬೆಳಸುತ್ತಿದೆ. ಅದು ಕೇವಲ ಉದ್ಯೋಗಕ್ಕಾಗಿ ಮಾತ್ರ ಸೀಮಿತವಾಗಿದೆ. ನಾವು ಮಕ್ಕಳಿಗೆ ಕಲಿಸುವ ವಿದ್ಯೆಯಲ್ಲಿ ವೈಚಾರಿಕತೆಯನ್ನು ಬೆಳೆಸಿಕೊಳ್ಳಬೇಕು. ಯಾವುದು ತಪ್ಪು ಯಾವುದು ಸರಿ ಎಂದು ಅರ್ಥ ಮಾಡಿಕೊಳ್ಳುವಂತ ವಿದ್ಯೆಯನ್ನು ನಮ್ಮ ಮಕ್ಕಳಿಗೆ ಕೊಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿಯ ಅಧ್ಯಕ್ಷ ಚಿರಿಯಪಂಡ ರಾಜಾ ನಂಜಪ್ಪ, ಶ್ರೀ ಬಸವೇಶ್ವರ ದೇವಸ್ಥಾನ ಆಡಳಿತ ಮಂಡಳಿ ಉಪಾಧ್ಯಕ್ಷ ರುದ್ರಪ್ಪ, ಪೊನ್ನಂಪೇಟೆ ಪಟ್ಟಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಚಿರಿಯಪಂಡ ಉಮೇಶ್ ಉತ್ತಪ್ಪ, ಸಾಯಿ ಶಂಕರ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೋಳೆರ ಝರು ಗಣಪತಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಂತರ ನೆರೆದಿದ್ದವರಿಗೆ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

ನಿಸರ್ಗ ಯುವತಿ ಮಂಡಳಿ ಸದಸ್ಯರು ಪ್ರಾರ್ಥಿಸಿ, ಸರ್ವದೈವತ ಶಾಲೆ ವಿದ್ಯಾರ್ಥಿಗಳು ಸ್ವಾಗತ ನೃತ್ಯ ಮಾಡಿದರು. ಹಿಂದೂ ಸಂಗಮ ಆಯೋಜನಾ ಸಮಿತಿಯ ಪದಾಧಿಕಾರಿ ರೇಖಾ ಶ್ರೀಧರ್ ಸ್ವಾಗತಿಸಿ, ಕಾರ್ಯದರ್ಶಿ ಶೀಲಾ ಬೋಪಣ್ಣ ನಿರೂಪಿಸಿ, ವಂದಿಸಿದರು.