ಕುಶಾಲನಗರ, ಫೆ. ೮: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಯೋಜನೆಯಡಿಯಲ್ಲಿ ಕೂಡ್ಲೂರು ಗ್ರಾಮ ಬಸವೇಶ್ವರ ಬಡಾವಣೆಯ ಯೋಜನೆಯ ಸದಸ್ಯೆ ಸುಮಿತ್ರ ಅವರಿಗೆ ಅಗತ್ಯ ವಸ್ತುಗಳ ವಾತ್ಸಲ್ಯ ಕಿಟ್ ವಿತರಣೆ ನಡೆಯಿತು. ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ ವಿತರಣೆ ಮಾಡಿದರು.

ಸುಮಿತ್ರ ಅವರು ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ೨೦೨೪ ರಿಂದ ಪ್ರತಿ ತಿಂಗಳು ಯೋಜನೆಯ ಮೂಲಕ ಸಾವಿರ ರೂಪಾಯಿ ಸಹಾಯಧನ ನೀಡಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭ ಕರ್ನಾಟಕ ಜನಜಾಗೃತಿ ವೇದಿಕೆಯ ಸದಸ್ಯ ಎಂ.ಎನ್. ಚಂದ್ರಮೋಹನ್, ಯೋಜನೆಯ ವಲಯ ಮೇಲ್ವಿಚಾರಕ ನಾಗರಾಜ್, ಜ್ಞಾನ ವಿಕಾಸ ಯೋಜನೆಯ ಕವನ, ಒಕ್ಕೂಟದ ಸದಸ್ಯರು, ಸೇವಾ ಪ್ರತಿನಿಧಿಗಳು, ಕಾರ್ಯಕರ್ತರು ಇದ್ದರು.