ಮಡಿಕೇರಿ, ಫೆ. ೭: ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಮಡಿಕೇರಿಯ ಫ್ಯೂಚರ್ ಪಾಯಿಂಟ್ ಕಂಪ್ಯೂಟರ್ ತರಬೇತಿ ಸಂಸ್ಥೆ, ಎಮ್.ಎಸ್.ಎಮ್.ಇ ಡೆವಲಪ್ಮೆಂಟ್ ಅಂಡ್ ಫೆಸಿಲಿಯೇಷನ್ ಆಫೀಸ್-ಮಂಗಳೂರು ಸಹಯೋಗದೊಂದಿಗೆ ಹೆಣ್ಣು ಮಕ್ಕಳಿಗಾಗಿ ೫ ದಿನಗಳ ಉಚಿತ ಸೈಬರ್ ಸೆಕ್ಯೂರಿಟಿ ಮ್ಯಾನೇಜ್ಮೆಂಟ್ ತರಗತಿ ಕಾರ್ಯಕ್ರಮವನ್ನು ತಾ. ೨ ರಂದು ಉದ್ಘಾಟಿಸÀಲಾಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫ್ಯೂಚರ್ ಪಾಯಿಂಟ್ ಕಂಪ್ಯೂಟರ್ ತರಬೇತಿ ಸಂಸ್ಥೆಯ ವ್ಯವಸ್ಥಾಪಕಿ ಸುನಿತಾ ಸುಧಾಕರ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ನಿರ್ಮಲ ಹೆಚ್.ಪಿ. ಭಾಗವಹಿಸಿ ಮಾತನಾಡಿ, ಸೈಬರ್ ಭದ್ರತೆಯ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಎಂ.ಎಸ್.ಎA.ಇ ಅಸಿಸ್ಟೆಂಟ್ ಡೈರೆಕ್ಟರ್ ಸುಮನ್.ಎಸ್ ರಾಜು ಅವರು ಸೈಬರ್ ಸೆಕ್ಯೂರಿಟಿ ಮ್ಯಾನೇಜ್ಮೆಂಟ್ ಪ್ರಾಮುಖ್ಯತೆಯ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಎಮ್.ಎಸ್.ಎಂ.ಇ.ನ ಯಂಗ್ ಪ್ರೊಫೆಷನಲ್ ಆಫೀಸರ್ ಆಯಿಷಾ ಹಾಗೂ ಉಪನ್ಯಾಸಕರಾದ ತೃಪ್ತಿ ಹಾಗೂ ಧನ್ಯ ಉಪಸ್ಥಿತರಿದ್ದರು.