ಮಡಿಕೇರಿ, ಫೆ. ೭: ಮೈ ಭಾರತ್ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಚೇರಿ, ಭಾರತ ಸರ್ಕಾರದ ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಆಶ್ರಯದಲ್ಲಿ, ರಾಷ್ಟಿçÃಯ ವಿಪತ್ತು ಪ್ರತಿಕ್ರಿಯಾ ಪಡೆ (ಎನ್.ಡಿಆರ್.ಎಫ್) ಹಾಗೂ ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ (ಎಸ್.ಡಿ.ಆರ್.ಎಫ್) ಮತ್ತು ಕೊಡಗು ಜಿಲ್ಲಾ ಯುವ ಒಕ್ಕೂಟದ ಸಹಯೋಗದಲ್ಲಿ, ಯುವ ಆಪತ್ ಮಿತ್ರ ಯೋಜನೆಯಡಿಯಲ್ಲಿ ೭ ದಿನಗಳ ವಸತಿ ಸಹಿತ ಶಿಬಿರವನ್ನು ಆಯೋಜಿಸಲಾಗಿದೆ. ಈ ತರಬೇತಿ ಶಿಬಿರವು ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ೧೮ ರಿಂದ ೪೦ ವರ್ಷದ ಯುವ ಸ್ವಯಂಸೇವಕರಿಗೆ ಅವಕಾಶ ಕಲ್ಪಿಸುತ್ತದೆ ಎಂದು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್ ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಮಂಗಳೂರಿನ ಪಿಲಿಕುಲದ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರದಲ್ಲಿ ತಾ.೨೩ರಿಂದ ಮಾ. ೧ ರವರೆಗೆ ಶಿಬಿರ ನಡೆಯಲಿದೆ. ಆಯ್ಕೆಯಾದ ೨೫೦ ಅಭ್ಯರ್ಥಿಗಳಿಗೆ ರೂ. ೧೦ ಸಾವಿರ ಮೌಲ್ಯದ ತುರ್ತು ನೆರವು ಕಿಟ್, ೩ ವರ್ಷಗಳ ಜೀವ ಹಾಗೂ ಆರೋಗ್ಯ ವಿಮೆ ರಕ್ಷಣೆ, ಭಾರತ ಸರಕಾರದಿಂದ ಮಾನ್ಯತೆ ಪಡೆದ ಪ್ರಮಾಣ ಪತ್ರ, ವಿಪತ್ತು ಸಂದರ್ಭಗಳಲ್ಲಿ ರಕ್ಷಣಾ ಕಾರ್ಯಗಳನ್ನು ನಿರ್ವಹಿಸಲು ಪ್ರಾಯೋಗಿಕ ಹಾಗೂ ತಾಂತ್ರಿಕ ತರಬೇತಿ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ತಾ. ೧೦ ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಮೊ.ಸಂ. ೯೫೯೧೧೩೭೨೭೫ ನ್ನು ಸಂಪರ್ಕಿಸಬಹುದಾಗಿದೆ ಎಂದು ಪಿ.ಪಿ. ಸುಕುಮಾರ್ ಮಾಹಿತಿ ನೀಡಿದ್ದಾರೆ.