ಕಡAಗ, ಫೆ. ೭: ಕೆ.ಪಿ.ಎಲ್ ಆಯೋಜಿಸಿದ್ದ ೭ನೇ ವರ್ಷದ ಹೊನಲು ಬೆಳಕಿನ ಕಾಲ್ಚೆಂಡು ಕ್ರೀಡಾಕೂಟವು ಕಡಂಗ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು.
ಕ್ರೀಡಾಕೂಟದ ಅಂತಿಮ ಪಂದ್ಯದಲ್ಲಿ ಅಮಿಗೋಸ್ ಎಫ್.ಸಿ. ತಂಡವನ್ನು ಮಣಿಸಿ ಹಲಾ ಎಫ್.ಸಿ. ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.
ಕ್ರೀಡಾಕೂಟ ಉದ್ಘಾಟನೆಯನ್ನು ನರಿಯಂದಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ ನೇರವೇರಿಸಿ ಮಾತನಾಡಿ, ಕ್ರೀಡೆ ಮತ್ತು ವಿದ್ಯೆ ಒಂದೇ ನಾಣ್ಯದ ಎರಡು ಮುಖಗಳು ಇದ್ದ ಹಾಗೆ, ಎರಡರಲ್ಲೂ ಪ್ರತಿಭೆಯನ್ನು ತೋರಿಸಿದರೆ ಸಮಾಜದಲ್ಲಿ ಉನ್ನತ ಮಟ್ಟದಲ್ಲಿ ಏರಲು ಸಹಕಾರಿ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.
ನರಿಯಂದಡ ಗ್ರಾಮ ಪಂಚಾಯಿತಿ ಸದಸ್ಯ ಸುಬೀರ್ ಮಾತನಾಡಿ, ಕ್ರೀಡೆಯು ಇನ್ನಷ್ಟು ಎತ್ತರಕ್ಕೆ ನಮ್ಮ ಭಾಗದಲ್ಲಿ ಬೆಳೆಯಲಿ, ಗ್ರಾಮೀಣ ಮಟ್ಟದ ಯುವ ಪ್ರತಿಭೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಕ್ರೀಡೆಯು ಯಶಸ್ವಿಯಾಗಿ ಸಾಗಲಿ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಿರಣ್ ಕಾರ್ಯಪ್ಪ ಮಾತನಾಡಿ, ಕ್ರೀಡೆಯಿಂದ ಸೌಹಾರ್ದತೆ ಬೆಳೆಯಲು ಅವಕಾಶವಿದ್ದು, ಈ ಭಾಗದಿಂದ ರಾಜ್ಯಮಟ್ಟದ ಹಲವಾರು ಕ್ರೀಡಾಕೂಟಗಳಲ್ಲಿ ಕ್ರೀಡಾಪಟುಗಳು ಭಾಗಿಯಾಗಿರುವುದು ಹೆಮ್ಮೆಯ ವಿಷಯ ಎಂದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೋಡಿರ ಪ್ರಸನ್ನ ತಮ್ಮಯ್ಯ ಮಾತನಾಡಿ, ಕಡಂಗ ಭಾಗದಲ್ಲಿ ಹೆಚ್ಚಿನ ಕ್ರೀಡೆಗಳು ಆಯೋಜಿಸುತ್ತಿರುವುದು ಸಂತೋಷದ ವಿಷಯ ಎಂದರು.
ಮತ್ತೊಬ್ಬ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್ ಕಣೇಯರ ಕಡಂಗದಲ್ಲಿ ಸೌಹಾರ್ದತೆಯು ಹೆಚ್ಚಾಗಿದ್ದು ಕ್ರೀಡೆಯಲ್ಲೂ ಸಹ ಇಂತಹ ಸೌಹಾರ್ದತೆ ಕಾಣುತ್ತಿರುವುದು ಸಂತಸದ ವಿಷಯ ಎಂದರು.
ಕ್ರೀಡಾಕೂಟದ ವೈಯುಕ್ತಿಕ ಪಾರಿತೋಷಕದ ವಿಭಾಗದಲ್ಲಿ ಉತ್ತಮ ಸ್ಟೆçöÊಕರ್ ಪ್ರಶಸ್ತಿಯನ್ನು ಶಮ್ಮಸ್, ಉತ್ತಮ ಗೋಲ್‌ಕೀಪರ್ ರಫಿ, ಉತ್ತಮ ಡಿಫೆಂಡರ್ ಪ್ರಶಸ್ತಿಯನ್ನು ಸಜೀರ್, ಉದಯೋನ್ಮುಖ ಆಟಗಾರನಾಗಿ ಫಯಾಜ್ ಸಿ.ಎ, ಉತ್ತಮ ಮಿಡ್-ಫೀಲ್ಡರ್ ಪ್ರಶಸ್ತಿಯನ್ನು ಅಜ್ಮಲ್, ಕ್ರೀಡಾಕೂಟದ ಸ್ಟಾರ್ ಪ್ರಶಸ್ತಿಯನ್ನು ಹಿರಿಯ ಆಟಗಾರ ಶೌಕತ್ ಪಡೆದುಕೊಂಡರು. ಫೈನಲ್ ಪಂದ್ಯದ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ರಾಫಿ ಪಡೆದುಕೊಂಡರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಆಯೋಜಕರಾದ ಕೆ.ಪಿ.ಎಲ್ ಸಮಿತಿ ಅಧ್ಯಕ್ಷ ರಸೀಕ್ ಅವರು ವಹಿಸಿದ್ದರು. ವೇದಿಕೆಯಲ್ಲಿ ಪ್ರಮುಖರಾದ ಕರೀಂ, ಮುಸ್ತಫ, ನಡಿಕೇರಿಯಂಡ ಜೀವನ, ಕೋಡಿರ ದರ್ಶಿನಿ ಪ್ರಸನ್ನ, ಶಿವು, ನಾಫಿ ಅಫ್ಸಲ್, ಅರ್ಫಾಜ್ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಹರ್ಷದ್ ದುಬೈ ಅವರು ನೆರವೇರಿಸಿದರು.