ವೀರಾಜಪೇಟೆ, ಫೆ. ೭: ವೀರಾಜಪೇಟೆ ನಗರದ ಮುಖ್ಯ ರಸ್ತೆ ಅಗಲೀಕರಣಕ್ಕೆ ಸಂಬAಧಿಸಿದAತೆ ರಸ್ತೆಯನ್ನು ಚರಂಡಿಯಿAದ ಚರಂಡಿಗೆ ದುರಸ್ತಿ ಮಾಡುವುದಾಗಿ, ರಸ್ತೆಬದಿ ನಿವಾಸಿಗಳಿಗೆ ತೊಂದರೆ ಮಾಡಲ್ಲ ಎಂದು ಹೇಳುತ್ತಾ ಇದೀಗ ಜಾಗ ಬಿಟ್ಟುಕೊಡಬೇಕೆಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಪ್ರಮುಖರಾದ ಡಾ.ಇ.ರಾ. ದುರ್ಗಾಪ್ರಸಾದ್ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಾ. ದುರ್ಗಾ ಪ್ರಸಾದ್, ಅಭಿವೃದ್ಧಿ ಮಾಡಲು ನಮ್ಮ ಸಹಮತವಿದೆ. ದಬ್ಬಾಳಿಕೆ ಸರಿಯಲ್ಲ. ರಸ್ತೆ ಬದಿ ಕಟ್ಟಡ ಮತ್ತು ಅಂಗಡಿ ಮಳಿಗೆಗಳನ್ನು ಕಟ್ಟುವವರಿಗೆ ಪರವಾನಗಿ ನೀಡುವ ಸಂದರ್ಭ ತಳಭಾಗದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಬೇಕೆಂಬುದನ್ನು ಪುರಸಭೆ ಅಧಿಕಾರಿಗಳು ಹೇಳುವುದನ್ನೆ ಮರೆತಿದ್ದಾರೆ. ಪಟ್ಟಣದಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದರೂ ಪುರಸಭೆ ಆಡಳಿತದಲ್ಲಿದ್ದ ಕಾಂಗ್ರೆಸ್ ಸದಸ್ಯರು ಅಂದು ಕ್ರಮ ಕೈಗೊಂಡಿಲ್ಲ. ಆದರೆ ಇಂದು ರಸ್ತೆ ಬದಿ ವಾಸಮಾಡುವ ಕಟ್ಟಡವನ್ನು ಕೆಡವಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯರಾದ ವಕೀಲ ಟಿ.ಪಿ. ಕೃಷ್ಣ ಮಾತನಾಡಿ, ೨೦೧೯ರಲ್ಲಿ ಮುಖ್ಯರಸ್ತೆ ಅಗಲೀಕರಣ ಸಂಬAಧ ಶಾಸಕರನ್ನೊಳಗೊಂಡು ಸಭೆ ನಡೆಸಿದ್ದ ಸಂದರ್ಭ ಕಾಂಗ್ರೆಸ್ಸಿನವರು ಶೇ.೯೯ ರಷ್ಟು ಅಗಲೀಕರಣಕ್ಕೆ ವಿರೋಧಿಸಿ ಹೋರಾಟ ನಡೆಸಿದ್ದರು. ಈಗ ಅವರೇ ಅಗಲೀಕರಣದ ಪರ ನಿಂತು ಜನರಿಕೆ ಬೆದರಿಸುತ್ತಿದ್ದಾರೆ.
ಇದಕ್ಕೆ ಅವರು ಉತ್ತರ ನೀಡಬೇಕು, ಅಭಿವೃದ್ದಿ ಕೆಲಸಗಳಿಗೆ ನಾವು ಎಂದಿಗೂ ಅಡ್ಡಗಾಲು ಹಾಕುವುದಿಲ್ಲ. ಆದರೆ ಮುಖ್ಯರಸ್ತೆ ಅಗಲೀಕರಣ ಮಾಡುವಾಗ ಜಾಗ ಬಿಟ್ಟುಕೊಡಬೇಕಾದರೆ ಅದಕ್ಕೆ ಪರಿಹಾರ ನೀಡುವಂತಾಗಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ನೆಲ್ಲಮಕ್ಕಡ ಗಣಪತಿ ಮಾತನಾಡಿ, ನಮ್ಮ ಜಾಗವನ್ನು ಬಿಟ್ಟುಕೊಡುವಂತೆ ಒತ್ತಾಯ ಮಾಡಲಾಗುತ್ತಿದೆ. ಆದರೆ ಯಾವುದೇ ಪರಿಹಾರ ಇಲ್ಲದಿರುವುದರಿಂದ ಜಾಗವನ್ನು ಹೇಗೆ ಬಿಟ್ಟುಕೊಡುವುದು. ವೀರಾಜಪೇಟೆ ಶಾಸಕರು, ಜಾಗ ಬಿಡುವುದಕ್ಕೆ ಬಲತ್ಕಾರ ಮಾಡುವುದು ಬೇಡ ಎಂದು ಹೇಳಿದ್ದರು. ಆದರೆ ಇಂದು ಜನರನ್ನು ಇಲ್ಲಿಂದ ಎಬ್ಬಿಸುತ್ತಿದ್ದಾರೆ ಎಂದರು. ಜನರಿಗೆ ಪರಿಹಾರ ನೀಡಿ ಅಗಲೀಕರಣ ಮಾಡಲಿ ಎಂದು ಒತ್ತಾಯಿಸಿದರು.