ನಾಪೋಕ್ಲು, ಫೆ. ೬: ಪ್ರಸ್ತುತ ಹಿಂದೂ ಸಮಾಜ ಪರಸ್ಪರ ಸಾಮರಸ್ಯತೆಯಿಂದ ಬದುಕನ್ನು ಕಾಣುವಂತಾಗಬೇಕೆAದು ಎಂದು ರಾಷ್ಟಿçÃಯ ಸ್ವಯಂಸೇವಕ ಸಂಘದ ಜಿಲ್ಲಾ ಕುಟುಂಬ ಪ್ರಮೋದನ್ ಪ್ರಮುಖ್ ಟಿ.ಸಿ. ಚಂದ್ರನ್ ಹೇಳಿದರು.

ಇಲ್ಲಿಯ ಶ್ರೀ ಗುರು ಪೊನ್ನಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಹಿಂದೂ ಸಮಾಜದ ಜಾಗೃತಿ ಮತ್ತು ರಾಷ್ಟಿçÃಯ ಸುರಕ್ಷತೆ ಬಗ್ಗೆ ಮಾತನಾಡಿದ ಅವರು, ಕ್ಷೀಣಿಸುತ್ತಿರುವ ಕುಟುಂಬ ಪದ್ಧತಿ ಬಲವರ್ದನೆಗೊಳಿಸುವುದರೊಂದಿಗೆ ನಾಗರಿಕ ಶಿಷ್ಟಾಚಾರ ಪಾಲಿಸಬೇಕು ಎಂದು ಕರೆ ನೀಡಿದರು.

ಶಿವಚಾಳಿಯಂಡ ನಿತ್ಯ ಕಾರ್ಯಪ್ಪ ಮಾತನಾಡಿ, ಹಿಂದೂ ಸಮಾಜದ ಸ್ತಿçÃಯರು ಸಮಾಜದ ಅಳಿವು ಮತ್ತು ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅಲ್ಲದೆ ಹೆಣ್ಣು ಮಕ್ಕಳು ಲವ್ ಜಿಹಾದ್‌ನಂತಹ ಷಡ್ಯಂತ್ರದಿAದ ಎಚ್ಚರವಹಿಸಬೇಕೆಂದು ಎಚ್ಚರಿಸಿದರು. ವಿಶ್ವವೇ ಗೌರವಿಸುವ ಸನಾತನ ಧರ್ಮ ಉಳಿಸಿ ಬೆಳಸುವಂತಾಗಲಿ ಎಂದು ಆಶಿಸಿದರು.

ಮತ್ತೊಬ್ಬ ಅತಿಥಿ ಬಿಲ್ಲವ ಸಮಾಜದ ನಾಪೋಕ್ಲು ಹೋಬಳಿ ಅಧ್ಯಕ್ಷ ಬಿ.ಎಂ. ಪ್ರತೀಪ ಮಾತನಾಡಿ, ಹಿಂದೂ ಧರ್ಮದ ಭದ್ರತೆಗೆ ಜಾತಿ ವ್ಯವಸ್ಥೆ ಪೂರಕವಾಗಿರಬೇಕು. ಎಲ್ಲಾ ಜಾತಿಗಳು ಒಂದಾಗಿ ಹಿಂದುತ್ವದಡಿಯಲ್ಲಿದ್ದರೆ ಮಾತ್ರ ರಕ್ಷಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಹಿಂದೂ ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ಕುಂಡ್ಯೋಳAಡ ರಮೇಶ್ ಮುದ್ದಯ್ಯ ಮಾತನಾಡಿ, ಹಿಂದುತ್ವಕ್ಕಾಗಿ ಬದುಕಬೇಕು; ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದು ಹೇಳಿದರು. ಸಭೆಯಲ್ಲಿ ಸರಸ್ವತಿ ಮನೋಹರಿ ಪ್ರಾರ್ಥಿಸಿ, ಜಾಲಿ ಪೂವಪ್ಪ ಸ್ವಾಗತಿಸಿದರು. ಶಿವಚಾಳಿಯಂಡ ಜಗದೀಶ್ ವಂದಿಸಿದರು. ವಂದೆಮಾತರA ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.