ಮಡಿಕೇರಿ, ಫೆ. ೬: ಸಾಲ ವಿಚಾರ ಸಂಬAಧ ಗ್ರಾಹಕರಿಗೆ ವಂಚನೆ ಮಾಡಿರುವ ಆರೋಪದಡಿ ಕೊಡಗು ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗವು, ಖಾಸಗಿ ಬ್ಯಾಂಕ್ ಸಂಸ್ಥೆಯೊAದಕ್ಕೆ ದಂಡ ವಿಧಿಸಿದೆ. ವಂಚನೆಗೆ ಒಳಗಾದ ಗ್ರಾಹಕನಿಗೆ, ವಂಚನೆ ಆರೋಪ ಹೊತ್ತಿರುವ ಬ್ಯಾಂಕ್ ಆಫ್ ಬರೋಡಾ ಸಂಸ್ಥೆಯು ೬% ಬಡ್ಡಿಯೊಂದಿಗೆ ರೂ. ೨.೨೪ ಲಕ್ಷ ಮರುಪಾವತಿಸಲು ಗ್ರಾಹಕರ ಆಯೋಗ ಆದೇಶಿಸಿದೆ. ಇದಲ್ಲದೆ, ಮಾನಸಿಕ ಹಿಂಸೆ ಮತ್ತು ಮೊಕದ್ದಮೆ ವೆಚ್ಚಗಳಿಗಾಗಿ ದೂರುದಾರರಾಗಿರುವ ಬ್ಯಾಂಕ್ ಗ್ರಾಹಕರಿಗೆ ಸಂಸ್ಥೆಯು ರೂ.೧೫,೦೦೦ ದಂಡ ಕಟ್ಟುವಂತೆಯೂ ಆದೇಶಿಸಲಾಗಿದೆ.

ಸೌದಿ ಅರೇಬಿಯಾದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿರುವ ಸೋಮವಾರಪೇಟೆಯ ನಿವಾಸಿ ಶಾಂತಕುಮಾರ್ ಎಸ್, ೨೦೧೮ರಲ್ಲಿ ವಿಜಯ ಬ್ಯಾಂಕ್‌ನಿAದ (ಪ್ರಸ್ತುತ ಬ್ಯಾಂಕ್ ಆಫ್ ಬರೋಡಾ) ರೂ.೭ಲಕ್ಷ ಸಾಲವನ್ನು ಪಡೆದಿದ್ದರು. ಸಾಲದ ಅವಧಿ ಏಳು ವರ್ಷಗಳಾಗಿತ್ತು. ಕೋವಿಡ್ ಸಂದರ್ಭ, ಶಾಂತಕುಮಾರ್ ಸಾಲದ ಕಂತುಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಲು ಸಾಧ್ಯವಾಗಲಿಲ್ಲ. ಕೋವಿಡ್ ಅವಧಿಯಲ್ಲಿ ಬಡ್ಡಿದರ ಕಡಿತ ಮತ್ತು ಸಡಿಲಿಕೆ ಮಾಡುವಂತೆ ಆರ್‌ಬಿಐ ಎಲ್ಲ ಬ್ಯಾಂಕುಗಳಿಗೆ ಆದೇಶಿಸಿತ್ತು, ಅದಾಗ್ಯೂ ಕೋವಿಡ್ ಅವಧಿಯಲ್ಲಿ ಸಾಲದ ಮೊತ್ತದ ಕಂತುಗಳನ್ನು ಪಾವತಿಸುವಲ್ಲಿ ವಿಳಂಬ ಮಾಡಿದ್ದಕ್ಕಾಗಿ ದಂಡವನ್ನು ಪಾವತಿಸುವಂತೆ ಬ್ಯಾಂಕ್ ಅಧಿಕಾರಿಗಳು ಆರ್.ಬಿ.ಐ ಗೈಡ್‌ಲೈನ್ಸ್ ವಿರುದ್ಧವಾಗಿ ಸಾಲ ಪಡೆದಿದ್ದ ಶಾಂತಕುಮಾರ್ ಅವರಿಗೆ ಒತ್ತಾಯಿಸಿತ್ತು ಎಂಬುದಾಗಿ ಹಾಗೂ ಆಗಸ್ಟ್ ೨೦೨೪ರಲ್ಲಿ ಉಳಿದ ಸಾಲದ ಮೊತ್ತವಾದ ರೂ.೪,೫೦,೮೦೦ ಒಂದು ಬಾರಿ ಪಾವತಿಸುವಂತೆ ಶಾಂತಕುಮಾರ್‌ಗೆ ಬ್ಯಾಂಕ್ ಒತ್ತಾಯಿಸಿದ್ದಲ್ಲದೆ ಇತ್ಯರ್ಥ ಪತ್ರವನ್ನು ಒದಗಿಸುವುದಾಗಿಯೂ ಭರವಸೆ ನೀಡಿದ್ದಾಗಿ ಗ್ರಾಹಕರ ಆಯೋಗಕ್ಕೆ ನೀಡಿದ ದೂರಿನಲ್ಲಿ ಉಲ್ಲೇಖವಾಗಿದೆ.

ಶಾಂತಕುಮಾರ್ ಅಂತಿಮ ಇತ್ಯರ್ಥ ಮೊತ್ತವನ್ನು ಪಾವತಿಸಿದ್ದರೂ, ಸಾಲದ ಕಂತು ಪಾವತಿಯಲ್ಲಿನ ವ್ಯತ್ಯಾಸಗಳನ್ನು ಅನುಸರಿಸಿ ಬ್ಯಾಂಕ್ ಅವರಿಂದ ಹೆಚ್ಚಿನ ಹಣವನ್ನು ಕೇಳಿತ್ತು. ನಂತರ ಅವರ ಉಳಿತಾಯ ಖಾತೆಯಿಂದ ರೂ.೨,೨೪,೭೦೫ಗಳನ್ನು ಯಾವುದೇ ಮಾಹಿತಿ ಇಲ್ಲದೆ ಬ್ಯಾಂಕ್ ಅಧಿಕಾರಿಗಳು ಸಾಲದ ಖಾತೆಗೆ ವರ್ಗಾಯಿಸಿದ್ದಾಗಿ ಶಾಂತಕುಮಾರ್‌ಗೆ ಬ್ಯಾಂಕ್ ಮಾಹಿತಿ ನೀಡಿತ್ತು. ಆದರೆ ವಿವರಗಳನ್ನು ಪರಿಶೀಲಿಸಿದಾಗ, ಅವರ ಉಳಿತಾಯ ಖಾತೆಯಿಂದ ಹಿಂತೆಗೆದುಕೊAಡ ಮೊತ್ತವನ್ನು ಸಾಲದ ಮೊತ್ತಕ್ಕೆ ಜಮಾ ಮಾಡಲಾಗಿಲ್ಲ ಎಂಬುದಾಗಿ ತಿಳಿದುಬಂದಿದೆ.

ಈ ಹಿನ್ನೆಲೆ ಗ್ರಾಹಕ ವೇದಿಕೆಯನ್ನು ಸಂಪರ್ಕಿಸಿದ ಶಾಂತಕುಮಾರ್, ವಂಚನೆ ಆರೋಪದಡಿ ದೂರು ನೀಡಿದ್ದರು.

ಆಯೋಗದಿಂದ ತನಿಖೆ ಬಳಿಕ ಬ್ಯಾಂಕ್ ಆಫ್ ಬರೋಡಾಗೆ ೬% ಬಡ್ಡಿಯೊಂದಿಗೆ ರೂ.೨,೨೪,೭೦೫ ಶಾಂತಕುಮಾರ್ ಅವರ ಖಾತೆಗೆ ಹಿಂತಿರುಗಿಸಲು ಆದೇಶಿಸಲಾಗಿದೆ ಮತ್ತು ಬ್ಯಾಂಕ್ ತಕ್ಷಣ ಕಾರ್ಯನಿರ್ವಹಿಸಲು ವಿಫಲವಾದರೆ ಬಡ್ಡಿದರವನ್ನು ೯%ಕ್ಕೆ ಹೆಚ್ಚಿಸಲಾಗುವುದಾಗಿಯೂ ಎಚ್ಚರಿಸಲಾಗಿದೆ. ಇದಲ್ಲದೆ, ಮಾನಸಿಕ ಹಿಂಸೆ ನೀಡಿದ್ದಕ್ಕಾಗಿ ಬ್ಯಾಂಕ್‌ಗೆ ೧೦,೦೦೦ ರೂ.ಗಳನ್ನು ಮತ್ತು ಮೊಕದ್ದಮೆ ಶುಲ್ಕವಾಗಿ ೫,೦೦೦ ರೂ.ಗಳನ್ನು ಪಾವತಿಸಲು ಆದೇಶಿಸಲಾಗಿದೆ. ಅಲ್ಲದೆ, ಸಾಲ ಇತ್ಯರ್ಥ ಪತ್ರವನ್ನು ತಕ್ಷಣವೇ ಕಕ್ಷಿದಾರರಿಗೆ ಹಸ್ತಾಂತರಿಸುವAತೆ ಮತ್ತು ದಾಖಲೆಯ ಪ್ರಕ್ರಿಯೆಯಲ್ಲಿ ಯಾವುದೇ ವಿಳಂಬವಾದರೆ ದಿನಕ್ಕೆ ೫೦ ರೂ.ಗಳನ್ನು ದಂಡವಾಗಿ ವಿಧಿಸಲು ವೇದಿಕೆ ಬ್ಯಾಂಕಿಗೆ ಆದೇಶಿಸಿದೆ.