ಪೊನ್ನಂಪೇಟೆ, ಫೆ. ೬: ಕಾಟ್ರಕೊಲ್ಲಿ ಮಾತಾಯಿ ಪುರುಷ ಸ್ವ ಸಹಾಯ ಸಂಘದ ವತಿಯಿಂದ ತಾ. ೧೫ ರಂದು ೨೦ನೇ ವರ್ಷದ ಮಹಾ ಶಿವರಾತ್ರಿ ಪ್ರಯುಕ್ತ ಪೊನ್ನಂಪೇಟೆ ಬಸ್ ನಿಲ್ದಾಣದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘದ ಅಧ್ಯಕ್ಷ ಬಿ.ಕೆ. ಕರುಣಾಕರ, ಶಿವರಾತ್ರಿ ಪ್ರಯುಕ್ತ ತಾ. ೧೫ ರಂದು ಸಂಜೆ ೮ ಗಂಟೆಗೆ ಪೊನ್ನಂಪೇಟೆ ಬಸ್ ನಿಲ್ದಾಣದಲ್ಲಿ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಕಾವೇರಿ ಕಲಾಸಿರಿ ತಂಡದಿAದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವ ಮಕ್ಕಳು ತಮ್ಮ ತಂಡದ ಹೆಸರು ನೀಡಲು ತಾ. ೮ ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ೯೯೮೦೪೬೧೪೩೨, ೯೯೦೨೧೧೦೮೦೪ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಸ್ವಾಮಿ ಪರಹಿತಾನಂದ ಮಹಾರಾಜ್ ಅವರು ಉದ್ಘಾಟಿಸಲಿದ್ದು, ಅತಿಥಿಗಳಾಗಿ ಬಸವೇಶ್ವರ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ, ಮಾತಾಯಿ ಪುರುಷ ಸ್ವ ಸಹಾಯ ಸಂಘದ ಅಧ್ಯಕ್ಷ ಕರುಣಾಕರ, ಗೌರವ ಅಧ್ಯಕ್ಷ ಸಿ.ಬಿ. ವಿನೋದ್, ಪೊನ್ನಂಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೀರಂಡ ಕಂದಾ ಸುಬ್ಬಯ್ಯ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣೀರ ಹರೀಶ್, ಪೆರುಂಬಾಡಿಯ ಸಂಷುದ್ ಉಲಾಮ ಶಾಲೆಯ ಅಧ್ಯಕ್ಷ ಬಶೀರ್ ಹಾಜಿ, ಕಾಫಿ ಬೆಳೆಗಾರ ಮುದ್ದಿಯಡ ನರೇಶ್ ಭಾಗವಹಿಸಲಿದ್ದು, ಪೊನ್ನಂಪೇಟೆಯ ನಿವೃತ್ತ ಸೇನಾಧಿಕಾರಿ ಐನಂಡ ಕೆ. ಮಂದಣ್ಣ, ಕೆಪಿಎಸ್ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ರಂಗಯ್ಯ, ಕಿರುಗೂರಿನ ಕೃಷಿಕ ರವಿ ಶೆಟ್ಟಿ, ದೇವತಕ್ಕ ಚೆಪ್ಪುಡೀರ ಪೊನ್ನಪ್ಪ ಅವರನ್ನು ಸನ್ಮಾನಿಸಲಾಗುವುದು.

೭ನೇ ತರಗತಿ, ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿ ತೇರ್ಗಡೆಯಾದ ಪೊನ್ನಂಪೇಟೆ ಭಾಗದ ಸರ್ಕಾರಿ ಶಾಲೆ, ಕಾಲೇಜಿನ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಸನ್ಮಾನಿಸಲಾಗುವುದು.

ಭಕ್ತಾದಿಗಳಿಗೆ ಶಿವರಾತ್ರಿ ಹಬ್ಬದ ದಿನದಂದು ಸಂಜೆ ೮ ಗಂಟೆಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಸಂಘದ ಕಾರ್ಯದರ್ಶಿ ಸುದರ್ಶನ್, ಖಜಾಂಚಿ ಅನೀಸ್, ಮಾಜಿ ಅಧ್ಯಕ್ಷ ವಿ.ಬಿ. ರುದ್ರಪ್ಪ, ವಿನು ಕೆ.ಬಿ., ಕೆ.ಹೆಚ್. ಉಮ್ಮರ್, ಎನ್. ಮಂಜು, ಎಸ್.ಪಿ. ಸತೀಶ್, ಎಂ.ಕೆ. ಕುಟ್ಟಪ್ಪ, ಅನಿಫ್, ಎಂ.ಎA. ಶಾದೀಕ್, ಇ.ಎ. ಆಜೀಸ್, ವಿ.ಬಿ. ಶೇಖರ್, ಪಿ.ಎಂ. ಮಹಮ್ಮದ್, ಬಿ.ಕೆ. ಅಣ್ಣಪ್ಪ, ಟಿ.ವಿ. ಸುರೇಶ್, ಹೆಚ್.ಪಿ. ಸುರೇಶ್, ಕೆ.ವಿ. ಮುರಳಿ ಇದ್ದರು.