ಮಡಿಕೇರಿ, ಫೆ. ೬: ಸಾಧಕರು, ಸುಧಾರಕರನ್ನು ಕೇವಲ ಅವರ ಜಯಂತಿಗಳAದು ಮಾತ್ರ ನೆನೆಯದೆ ವರ್ಷಪೂರ್ತಿ ನೆನೆಯಬೇಕು. ಅವರ ಪಥದಲ್ಲಿ ಹೆಜ್ಜೆ ಹಾಕಬೇಕು ಎಂದು ಶಾಸಕ ಡಾ. ಮಂತರ್ಗೌಡ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇಲ್ಲಿನ ಗಾಂಧಿ ಭವನದಲ್ಲಿ ನಡೆದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಡಿವಾಳ ಮಾಚಿದೇವರ ತತ್ವ ಮತ್ತು ಆದರ್ಶಗಳು ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿ ಬೇಕಿದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗಿಯಾಗಿರುವುದರಿಂದ ಇದೊಂದು ಅರ್ಥಪೂರ್ಣ ಕಾರ್ಯಕ್ರಮ ಎನಿಸಿದೆ ಎಂದರು.
ಸಮಾನತೆಯನ್ನು ಮಡಿವಾಳ ಮಾಚಿದೇವರು ಅಂದೇ ಬೋಧಿಸಿದರು. ಆದರೆ, ಇಂದಿಗೂ ಸಮಾನತೆ ಎನ್ನುವುದು ಬಂದಿಲ್ಲ ಮಕ್ಕಳನ್ನು ವಿಭಜಿಸುತ್ತಿದ್ದೇವೆ. ಇದು ಸರಿಯಲ್ಲ. ಮಡಿವಾಳ ಮಾಚಿದೇವ ಅವರು ಸಾಮಾಜಿಕ ಸುಧಾರಣೆಯನ್ನು ಮಾತ್ರ ಮಾಡಲಿಲ್ಲ. ಅವರು ಅಧ್ಯಾತ್ಮಿಕ ಬದುಕನ್ನು ನಡೆಸಿದರು. ಆದರೆ, ಇಂದು ಸಾಮಾಜಿಕ ಕಾಳಜಿ ಯಾರಿಗೂ ಇಲ್ಲ. ಬಹುತೇಕÀ ಮಂದಿ ಸಮಾಜ ಸೇವೆಗೆ ಕೊನೆಯ ಆದ್ಯತೆ ನೀಡಿದ್ದಾರೆ ಎಂದು ಹೇಳಿದರು.
ಮುಂದಿನ ವರ್ಷದ ಕಾರ್ಯಕ್ರಮದಲ್ಲಿ ಸಮಾಜದ ಭವನದಲ್ಲಿ ಮಾಡಬೇಕು. ಇಂತಹ ಕಾರ್ಯಕ್ರಮಗಳಿಗೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗಳು ಬರಬೇಕು. ಸಮಾಜದ ಜನರ ಸಮಸ್ಯೆಗಳನ್ನು ಆಲಿಸಬೇಕು ಎಂದರು. ತಹಶೀಲ್ದಾರ್ ಶ್ರೀಧರ್, ನಿವೃತ್ತ ಉಪನ್ಯಾಸಕ ಶಂಕರಯ್ಯ, ಮಡಿವಾಳರ ಅಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಜಿ. ಸುಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ, ಮುಖಂಡರಾದ ಮಂಜುನಾಥ್, ದೀಪಿಕಾ, ಪ್ರಸನ್ನಭಟ್ಟ ಭಾಗವಹಿಸಿದ್ದರು.