ಶ್ರೀಮಂಗಲ, ಫೆ. ೬: ಪೊನ್ನಂಪೇಟೆ ತಾಲೂಕು ತಿತಿಮತಿ-ಪಾಲಿಬೆಟ್ಟಕ್ಕೆ ತೆರಳುವ ಲೋಕೋಪಯೋಗಿ ಇಲಾಖೆಯ ರೂ. ೨.೫೦ ಕೋಟಿ ವೆಚ್ಚದಲ್ಲಿ ಪೂರ್ಣಗೊಂಡ ರಸ್ತೆಯನ್ನು ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಉದ್ಘಾಟಿಸಿದರು.
ಈ ಸಂದರ್ಭ ಕೆಪಿಸಿಸಿ ವಕ್ತಾರ ಲಕ್ಷö್ಮಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ವಲಯ ಅಧ್ಯಕ್ಷ ನವೀನ್, ಪ್ರಚಾರ ಸಮಿತಿ ಅಧ್ಯಕ್ಷ ಆಪಟ್ಟಿರ ಟಾಟು ಮೊಣ್ಣಪ್ಪ, ಹಿರಿಯರಾದ ಬೆನ್ನಿ, ಚೆಕ್ಕು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಪಂಕಜ, ವಾಣಿ, ರಜಿನಿ, ಡಿಸಿಸಿ ಸದಸ್ಯರಾದ ವಿನಯ್ ಕುಮಾರ್, ಡಾ. ಮಧ್ಯಸ್ತಾ, ಪಂಚಾಯಿತಿ ಸದಸ್ಯರಾದ ಅಫ್ರೋಜ್, ಗಣೇಶ್, ಅಣ್ಣಳಮಾಡ ಹರೀಶ್, ಅನಿಲ್, ಅಯೂಬ್, ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.