ಕಣಿವೆ, ಫೆ. ೬: ಕುಶಾಲನಗರ ತಾಲೂಕಿನ ಬಸಿರುಗುಪ್ಪೆ ಗ್ರಾಮದ ಬಸವೇಶ್ವರ ದೇವಾಲಯ ಸೇವಾ ಟ್ರಸ್ಟ್ ವತಿಯಿಂದ ನೂತನವಾಗಿ ಭದ್ರಕಾಳಿ, ಭಂಟ, ನಾಗನಕಟ್ಟೆ, ಮಾರಿಯಮ್ಮ ಮತ್ತು ಗುಳಿಗ ದೇವರುಗಳ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವದ ಅಂಗವಾಗಿ ಎರಡು ದಿನಗಳ ಕಾಲ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.

ಸಾಮೂಹಿಕ ಪ್ರಾರ್ಥನೆ, ಗಣಪತಿ ಪ್ರಾರ್ಥನೆ, ಪೂಜೆ, ಶುದ್ಧ ಪುಣ್ಯಾಹ, ಮಂಡಲ ರಚನೆ, ನಾಗ ಪ್ರಾರ್ಥನೆ, ಗಣಪತಿ ಹೋಮ, ನಾಗ ದೇವರಿಗೆ ಆಶ್ಲೇಷ ಬಲಿ ಪೂಜೆ, ಹೋಮ ಹಾಗೂ ಗೋವು ಪೂಜೆ ಮೊದಲಾದ ಧಾರ್ಮಿಕ ವಿಧಾನಗಳು ಜರುಗಿ ದವು. ಶಾಂತಳ್ಳಿಯ ಗಣೇಶ ಭಟ್ ನೇತೃತ್ವದಲ್ಲಿ ಸೋಮವಾರಪೇಟೆಯ ಜಗದೀಶ್ ಉಡುಪ, ಕೂತಿಯ ವೇದವ್ಯಾಸ್, ವಾದಿರಾಜ್, ಬೆಂಗಳೂರಿನ ವೆಂಕಟೇಶ್ ಹೊಳ್ಳ, ಕುಶಾಲನಗರದ ಕೃಷ್ಣಮೂರ್ತಿ ಭಟ್, ಮಣಿ ಬಜೆಗುಂಡಿ ಇವರಿಂದ ಪೂಜಾ ಕಾರ್ಯಕ್ರಮಗಳು ನಡೆದವು. ಮಹಾಮಂಗಳಾರತಿಯೊAದಿಗೆ ನೆರೆದ ಎಲ್ಲಾ ಭಕ್ತಾದಿಗಳಿಗೆ ಪ್ರಸಾದ ಹಾಗೂ ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಸಿ.ಎಸ್.ಶಶಿಕುಮಾರ್, ಸ್ಥಾಪಕ ಅಧ್ಯಕ್ಷ ಧನಂಜಯ, ಕಾರ್ಯದರ್ಶಿ ಹೆಚ್.ಆರ್.ಉದಯಕುಮಾರ್, ಕೆ.ಎಲ್. ಜಸ್ಮಿ ಮೊದಲಾದವರಿದ್ದರು. ಶಿಕ್ಷಕರಾದ ಹುಲುಸೆ ಬಸವರಾಜು ಕಾರ್ಯಕ್ರಮ ನಿರೂಪಿಸಿದರು.