ಮಡಿಕೇರಿ, ಫೆ. ೫: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಿವಿ-ಮೂಗು-ಗಂಟಲು ವಿಭಾಗವು “ಅಡ್ವಾನ್ಸ್ ಇ.ಎನ್.ಟಿ. ೨೦೨೬” ಎಂಬ ಶೀರ್ಷಿಕೆಯಡಿ ಆಯೋಜಿಸಿದ್ದ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರಾದೇಶಿಕ ಮಟ್ಟದ ವಿವಿಧ ವೈದ್ಯಕೀಯ ಸಂಸ್ಥೆಗಳ ಕಿವಿ-ಮೂಗು-ಗಂಟಲು ತಜ್ಞರು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಭಾಗವಹಿಸಿದ್ದರು.
ಈ ನಿರಂತರ ವೈದ್ಯಕೀಯ ಶಿಕ್ಷಣ (ಸಿಎಂಇ) ಕಾರ್ಯಕ್ರಮವು ಕಿವಿ-ಮೂಗು-ಗಂಟಲು ವೈದ್ಯಕೀಯ ಕ್ಷೇತ್ರದಲ್ಲಿನ ಇತ್ತೀಚಿನ ಪ್ರಗತಿಗಳು ಮತ್ತು ಬೆಳೆಯುತ್ತಿರುವ ಪರಿಕಲ್ಪನೆಗಳ ಮೇಲೆ, ಸಾಕ್ಷಾö್ಯಧಾರಿತ ಚಿಕಿತ್ಸಾ ವಿಧಾನಗಳು ಹಾಗೂ ತಾಂತ್ರಿಕ ನವೀನತೆಗಳಿಗೆ ವಿಶೇಷ ಒತ್ತಡ ನೀಡಿತು.
ಶೈಕ್ಷಣಿಕ ಅಧಿವೇಶನಗಳಲ್ಲಿ ಆಂಟೀರಿಯರ್ ಸ್ಕಲ್ಬೇಸ್ ಚಿಕಿತ್ಸೆ (ಮುಂಭಾಗದ ಕಪಾಲದ ತಳ), ಕೊಕ್ಲಿಯರ್ ಇಂಪ್ಲಾAಟ್ಗಳು, ಅಲರ್ಜಿಕ್ ರೈನೈಟಿಸ್ ನಿರ್ವಹಣೆ, ಎಂಡೋಸ್ಕೋಪಿಕ್ ಸೈನಸ್ ಶಸ್ತçಚಿಕಿತ್ಸೆಯ ಹೊಸ ಆಯಾಮಗಳು, ತಲೆ ಮತ್ತು ಕಂಠ ಕ್ಯಾನ್ಸರ್ಗಳ ನಿರ್ವಹಣೆ ಹಾಗೂ ಓಟಾಲಜಿ ಮತ್ತು ರೈನಾಲಜಿ ಕ್ಷೇತ್ರದ ಸಮಕಾಲೀನ ದೃಷ್ಟಿಕೋನಗಳು ಕುರಿತು ವಿವರವಾಗಿ ಚರ್ಚಿಸಲಾಯಿತು. ಮೂಗಿನ ಮೂಲಕ ಮೆದುಳಿಗೆ ಮಾಡುವ ಕನಿಷ್ಠ ಭೇದಿಸುವ ಸ್ಕಲ್ಬೇಸ್ ಶಸ್ತçಚಿಕಿತ್ಸೆಗಳ ಪ್ರದರ್ಶನಗಳು ಪ್ರತಿನಿಧಿಗಳಲ್ಲಿ ವಿಶೇಷ ಆಸಕ್ತಿಯನ್ನು ಹುಟ್ಟಿಸಿತು.
ಬೆಂಗಳೂರಿನ ಫೋರ್ಟೀಸ್ ಆಸ್ಪತ್ರೆಯ ಡಾ.ಹೆಚ್.ಕೆ.ಸುಶೀನ್ ದತ್ತ್, ಡಾ.ಆಶೀಶ್ ರಾವ್ ಮತ್ತು ಡಾ.ಅಭಿಷೇಕ್ ಶುಭೋದಯ್ ಅವರು ಸೂಚನೆಗಳು, ಶಸ್ತçಚಿಕಿತ್ಸಾತಂತ್ರಗಳು, ಫಲಿತಾಂಶಗಳು ಮತ್ತು ಸಂಭವನೀಯ ತೊಡಕುಗಳ ಕುರಿತು ಉಪನ್ಯಾಸಗಳನ್ನು ನೀಡಿ, ಪ್ರಕರಣಾಧಾರಿತ ಚರ್ಚೆಗಳು ಹಾಗೂ ಅಧಿವೇಶನಗಳ ಮೂಲಕ ತಮ್ಮ ಅನುಭವವನ್ನು ಹಂಚಿಕೊAಡರು. ಕೊಕ್ಲಿಯರ್ ಇಂಪ್ಲಾAಟ್ಗೆ ಅರ್ಹತೆ, ಶಸ್ತçಚಿಕಿತ್ಸೆಯ ಸೂಕ್ಷ್ಮಾಂಶಗಳು, ಇಂಪ್ಲಾAಟ್ ನಂತರದ ಪುನಶ್ಚೇತನ ಹಾಗೂ ಅಲರ್ಜಿಕ್ರೆöÊನೈಟಿಸ್ ನಿರ್ವಹಣೆಯ ಇತ್ತೀಚಿನ ಮಾರ್ಗಸೂಚಿಗಳು ವಿಶೇಷ ಗಮನಾರ್ಹ ವಿಷಯಗಳಾಗಿದ್ದವು. ಸ್ಕಲ್ಬೇಸ್ ಶಸ್ತçಚಿಕಿತ್ಸೆ ಮತ್ತು ತಲೆ-ಕಂಠ ಕಾನ್ಸರ್ ಗಳಲ್ಲಿ ಬಹು ಶಾಖಾಸಹಕಾರ, ವಿವರವಾದ ಶರೀರ ರಚನಾ ಅರಿವು ಹಾಗೂ ಕನಿಷ್ಟ ಭೇದಿಸುವ ಶಸ್ತ್ರಚಿಕಿತ್ಸಾ ತಂತ್ರಗಳ ಪ್ರಗತಿ ಕುರಿತು ಚರ್ಚಿಸಲಾಯಿತು. ಈ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವನ್ನು ಕರ್ನಾಟಕ ವೈದ್ಯಕೀಯ ಪರಿಷತ್ (ಕೆ.ಎಂ.ಸಿ) ಮಾರ್ಗಸೂಚಿಗಳ ಪ್ರಕಾರ ನಡೆಸಲಾಗಿದ್ದು, ಭಾಗವಹಿಸಿದ ಪ್ರತಿನಿಧಿಗಳಿಗೆ ೨ ನಿರಂತರ ವೈದ್ಯಕೀಯ ಶಿಕ್ಷಣ ಕ್ರೆಡಿಟ್ ಅಂಕಗಳನ್ನು ನೀಡಲಾಯಿತು. ಕಾರ್ಯಕ್ರಮಕ್ಕೆ ದೊರೆತ ಭರ್ಜರಿ ಪ್ರತಿಕ್ರಿಯೆ, ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಕಿವಿ-ಮೂಗು-ಗಂಟಲು ಕ್ಷೇತ್ರದಲ್ಲಿ ನಿರಂತರ ಶೈಕ್ಷಣಿಕ ನವೀಕರಣದ ಅಗತ್ಯವನ್ನು ಸ್ಪಷ್ಟಪಡಿಸಿತು.
ಕಾರ್ಯಕ್ರಮದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕರಾದ ಡಾ. ಲೋಕೇಶ್ ಎ.ಜೆ, ಪ್ರಾಂಶುಪಾಲ ಡಾ. ವಿಶಾಲ್ ಕುಮಾರ್, ವೈದ್ಯಕೀಯ ಅಧೀಕ್ಷಕ ಡಾ. ಸೋಮಶೇಖರ್ ಹೆಚ್.ಕೆ, ಜಿಲ್ಲಾ ಶಸ್ತçಚಿಕಿತ್ಸಕ ಡಾ. ನಂಜುAಡಯ್ಯ ಎನ್., ಮುಖ್ಯ ಆಡಳಿತಾಧಿಕಾರಿ ಕೆ.ಎಂ. ರೋಹಿಣಿ ಬಸವರಾಜ್, ಸ್ಥಾನೀಯ ವೈದ್ಯಾಧಿಕಾರಿ ಡಾ. ಅಭಿನಂದನ್ ಬಿ.ವಿ. ಮತ್ತು ಸ್ಥಾನೀಯ ವೈದ್ಯಾಧಿಕಾರಿ ಡಾ. ಧನಂಜಯ್ ಕುಮಾರ್ ಎಸ್.ಎಂ. ಅವರುಗಳು ಹಾಜರಿದ್ದರು.
ಈ ನಿರಂತರ ವೈದ್ಯಕೀಯ ಶಿಕ್ಷಣ ಕಿವಿ, ಮೂಗು, ಗಂಟಲು ವಿಭಾಗದ ಆಯೋಜನಾ ಸಮಿತಿ ಅಧ್ಯಕ್ಷೆ ಡಾ.ಶ್ವೇತ, ಕಾರ್ಯದರ್ಶಿ ಡಾ.ನಳಿನ ಪಿ.ಎ., ಖಜಾಂಚಿ ಡಾ.ಸತ್ಯಾಕಿ ಡಿ.ಸಿ. ಮತ್ತು ಜಂಟಿ ಕಾರ್ಯದರ್ಶಿ ಡಾ. ರಾಜಶ್ರೀ ಕೆ.ಟಿ. ಅವರ ನೇತೃತ್ವದಲ್ಲಿ ನಡೆಯಿತು.