ಮಡಿಕೇರಿ, ಫೆ. ೫: ದೇವಣಗೇರಿ ಬಿ.ಸಿ .ಪ್ರೌಢಶಾಲೆಯ ೨೦೨೪-೨೫ನೇ ಸಾಲಿನ ಪ್ರತಿಭಾ ಪುರಸ್ಕಾರ ಸಮಾರಂಭ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಮುಕ್ಕಾಟೀರ ಐ. ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಾಲುಗುಂದ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ದಾನಿಗಳು ಆಗಿರುವ ಪಂದಿಕAಡ ದಿನೇಶ್ ಅವರು ಆಗಮಿಸಿ ಮಾತನಾಡಿ, ತಾವು ಈ ಶಾಲೆಯಲ್ಲಿ ಓದಿರುವ ಅನುಭವಗಳನ್ನು ಹಂಚಿಕೊAಡರು. ಶಾಲಾ ಆಡಳಿತ ಮಂಡಳಿಯವರ ಸೌಹಾರ್ದತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಯ ಫಲಿತಾಂಶ ಪ್ರತಿ ವರ್ಷ ಶೇಕಡ ೧೦೦ ಬರುತ್ತಿದ್ದು ಈ ವರ್ಷ ಕೂಡ ಶೇಕಡ ೧೦೦ ಫಲಿತಾಂಶ ಬರಲಿ ಎಂದು ಶುಭ ಹಾರೈಸಿದರು.

ಮತ್ತೋರ್ವ ಅತಿಥಿಗಳಾದ ವೀರಾಜಪೇಟೆ ತಾಲೂಕಿನ ಎಸ್.ಎಸ್.ಎಲ್.ಸಿ. ನೋಡಲ್ ಅಧಿಕಾರಿ ಕೆ.ಡಿ. ಕವಿತ ಮಾತನಾಡಿ, ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

೨೦೨೪-೨೫ನೇ ಸಾಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿದ್ದ ಗಣ್ಯರು ದತ್ತಿನಿಧಿಯ ಮೊಬಲಗನ್ನು ವಿತರಿಸಿದರು.

ಸಮಾರಂಭದ ಅಧ್ಯಕ್ಷ ಸ್ಥಾನದಿಂದ ಮುಕ್ಕಾಟೀರ ಐ ನಾಣಯ್ಯ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಗುರಿಯನ್ನು ಇಟ್ಟುಕೊಳ್ಳಬೇಕು. ೧೦ನೇ ತರಗತಿಯ ನಂತರ ತಮ್ಮ ಮುಂದಿನ ವಿದ್ಯಾಭ್ಯಾಸವನ್ನು ಮೊಟಕುಗೊಳಿಸದೆ ಉನ್ನತ ವಿದ್ಯಾಭ್ಯಾಸಕ್ಕೆ ಹೋಗುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಉಪಾಧ್ಯಾಕ್ಷರಾದ ಚೇಂದAಡ ಜಿ. ಪೊನ್ನಪ್ಪ, ಕಾರ್ಯನಿರ್ವಹಕರಾದ ಕರ್ನಂಡ ಎನ್. ಬೊಳ್ಳಮ್ಮ, ಸದಸ್ಯರಾದ ಬೀನಂಡ ಎಸ್. ಪೂಣಚ್ಚ, ಮೂಕೊಂಡ. ಪಿ. ಶಶಿ ಸುಬ್ರಮಣಿ, ಸ.ಮಾ.ಪ್ರಾ. ಶಾಲಾ ಮುಖ್ಯ ಶಿಕ್ಷಕರಾದ ಮಹೇಶ್, ಮುಖ್ಯ ಶಿಕ್ಷಕರಾದ ಹೆಚ್.ಡಿ. ಲೋಕೇಶ, ಶಾಲಾ ಶಿಕ್ಷಕ ವೃಂದ, ಸಿಬ್ಬಂದಿ ವರ್ಗ ಹಾಜರಿದ್ದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದ ಸ್ವಾಗತವನ್ನು ಶಾಲಾ ಮುಖ್ಯ ಶಿಕ್ಷಕರಾದ ಹೆಚ್.ಡಿ. ಲೋಕೇಶ ನೆರವೇರಿಸಿದರು. ನಿರೂಪಣೆಯನ್ನು ಶಿಕ್ಷಕಿ ವೈ. ಪ್ರಮೀಳಾ ಕುಮಾರಿ ಮಾಡಿ ಶಿಕ್ಷಕ ವಿ.ಆರ್. ಸಂದೀಪ ವಂದಿಸಿದರು.