ಮಡಿಕೇರಿ, ಫೆ. ೪: ಮಡಿಕೇರಿ ನಗರದಲ್ಲಿ ತಾ. ೭ ರಂದು ವಿರಾಟ ಹಿಂದೂ ಸಂಗಮ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಆಯೋಜನಾ ಸಮಿತಿ ಪ್ರಮುಖರು ಮಾಹಿತಿ ನೀಡಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಂದೂ ಸಂಗಮ ಆಯೋಜನ ಸಮಿತಿ ಅಧ್ಯಕ್ಷ ಕಾರೇರ ಕವನ್, ರಾಷ್ಟಿçÃಯ ಸ್ವಯಂ ಸೇವಕ ಸಂಘ ನೂರು ವರ್ಷ ಪೂರೈಸಿದ ಹಿನ್ನೆಲೆ ದೇಶವ್ಯಾಪಿ ಹಿಂದೂ ಸಂಗಮ ಕಾರ್ಯಕ್ರಮವನ್ನು ಆಯೋಜಿಸಿದ್ದು, ಮಡಿಕೇರಿಯಲ್ಲಿಯೂ ತಾ. ೭ ರಂದು ಕಾರ್ಯಕ್ರಮ ನಡೆಯಲಿದೆ. ಛತ್ರಪತಿ, ಅಭಿಮನ್ಯು, ಅಶ್ವಿನಿ ಹಾಗೂ ಸಮರ್ಥ ಎಂಬ ೪ ವಸತಿ ವಿಭಾಗ ಗಳಿಂದ ಮೆರವಣಿಗೆ ಆರಂಭಗೊAಡು ಚೌಕಿ ಯಲ್ಲಿ ಜೊತೆ ಸೇರಿ ನಂತರ ಮೆರವಣಿಗೆ ಮೂಲಕ ಗಾಂಧಿ ಮೈದಾನಕ್ಕೆ ತೆರಳಿ ಅಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಗಣ್ಯರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಸಂಯೋಜಕ ಕೆ.ಕೆ. ದಿನೇಶ್ ಕುಮಾರ್ ಮಾತನಾಡಿ, ವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜಿಸಲು ಎಲ್ಲಾ ರೀತಿಯ ಕೆಲಸಗಳನ್ನು ನಡೆಸಲಾಗಿದೆ. ಸುಮಾರು ೫ ಸಾವಿರ ಜನ ಸೇರುವ ನಿರೀಕ್ಷೆ ಇದೆ. ಮನೆ ಸಂಪರ್ಕ ಮೂಲಕ ಎಲ್ಲರಿಗೂ ಆಹ್ವಾನ ನೀಡುವ ಕೆಲಸವಾಗುತ್ತಿದೆ. ಸ್ವಯಂಪ್ರೇರಿತವಾಗಿ ಅಂಗಡಿಮುAಗಟ್ಟುಗಳನ್ನು ಮುಚ್ಚಿ ಪಾಲ್ಗೊಳ್ಳಲು ೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ವರ್ತಕರು ನಿರ್ಧರಿಸಿದ್ದಾರೆ. ೨ ಗಂಟೆಗೆ ಆಯಾ ವಸತಿ ವಿಭಾಗದಲ್ಲಿ ಸೇರಿ ಭೌದ್ಧಿಕ್ ನಂತರ ೩ ಗಂಟೆಗೆ ಆಯಾ ಭಾಗದಿಂದ ಮೆರವಣಿಗೆ ಮೂಲಕ ಬಂದು ೪ ಗಂಟೆಗೆ ನಗರದ ಚೌಕಿಯಲ್ಲಿ ಸಂಗಮಗೊAಡು ಗಾಂಧಿ ಮೈದಾನ ತನಕ ಬೃಹತ್ ಶೋಭಾಯಾತ್ರೆ ಸಾಗಲಿದೆ. ವೈವಿಧ್ಯಮಯ ಟ್ಯಾಬ್ಲೋ, ಭಜನೆ ಕುಣಿತ ಪ್ರಮುಖ ಆಕರ್ಷಣೆಯಾಗಿರಲಿದೆ. ಸಂಜೆ ೫ ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಇದಕ್ಕೂ ಮುನ್ನ ರವಿ ಭೂತನಕಾಡು ಅವರಿಂದ ದೇಶಭಕ್ತಿ ಗೀತಗಾಯನ ನಡೆಯಲಿದೆ ಎಂದು ಮಾಹಿತಿಯಿತ್ತರು.

ವಸತಿ ವಿಭಾಗದಿಂದ ವೈವಿಧ್ಯಮಯ ಕಾರ್ಯಕ್ರಮ

ಛತ್ರಪತಿ ವಸತಿ ವಿಭಾಗದ ಪ್ರಮುಖ್ ಕೆ.ಎಸ್. ರಮೇಶ್ ಮಾತನಾಡಿ, ಶ್ರೀ ಓಂಕಾರೇಶ್ವರ ದೇವಾಲಯ ಆಸು ಪಾಸು, ದೇಚೂರು, ಚೈನ್‌ಗೇಟ್, ಗೌಡ ಸಮಾಜ, ಕನ್ನಂಡ ಬಾಣೆ, ಜೂನಿಯರ್ ಕಾಲೇಜು, ಪುಟಾಣಿ ನಗರ, ಸಂಪಿಗೆ ಕಟ್ಟೆ, ರಾಘವೇಂದ್ರ ದೇವಾಲಯವನ್ನೊಳಗೊಂಡAತೆ ಛತ್ರಪತಿ ವಸತಿಯ ಸಭೆ ಮೇಲಿನ ಗೌಡ ಸಮಾಜದಲ್ಲಿ ನಡೆಯಲಿದೆ.

೬೦೦ ರಿಂದ ೮೦೦ ಮಂದಿ ಸೇರಲಿದ್ದು, ಊಟದ ವ್ಯವಸ್ಥೆ ಮಾಡಲಾಗಿದೆ. ಕಳಸ ಹೊತ್ತ ಮಹಿಳೆಯರು, ೩ ಟ್ಯಾಬ್ಲೋ, ಚೆಂಡೆ ವಾದ್ಯ, ೧೫೦೦ ಮೀಟರ್ ಉದ್ದದ ಕೇಸರಿ ಭಾವುಟದೊಂದಿಗೆ ಮೆರವಣಿಗೆ ಸಾಗಲಿದ್ದು, ಮಹಾನ್ ವ್ಯಕ್ತಿಗಳ ಛದ್ಮವೇಷ ತೊಟ್ಟ ಪುಟಾಣಿಗಳು, ಭಜನೆ ಕುಣಿತವೂ ಇರಲಿದೆ ಎಂದರು.

ಅಭಿಮನ್ಯು ವಿಭಾಗದ ಪ್ರಮುಖ್ ಬಿ.ಕೆ. ಜಗದೀಶ್ ಮಾತನಾಡಿ, ಗೌಳಿಬೀದಿ, ಕೊಹಿನೂರು ರಸ್ತೆ, ಹೊಸ ಬಡಾವಣೆ, ವಿಜಯನಗರ, ವಿದ್ಯಾನಗರ, ಜ್ಯೋತಿನಗರ, ಇಂದಿರಾನಗರ, ಚಾಮುಂಡೇಶ್ವರಿ ನಗರವನ್ನೊಳಗೊಂಡ ಅಭಿಮನ್ಯು ವಸತಿಯ ಸಭೆ ಸಂತ ಜೋಸೆಫರ ಶಾಲೆಯ ಆಟದ ಮೈದಾನದಲ್ಲಿ ನಡೆಯಲಿದೆ. ೮೦೦ ರಿಂದ ೧ ಸಾವಿರ ಮಂದಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದು, ಕಾನ್ವೆಂಟ್ ಮೈದಾನದಿಂದ ಮೆರವಣಿಗೆ ನಡೆಯಲಿದೆ. ಕಲ್ಲಡ್ಕದ ಗೊಂಬೆ ಕುಣಿತ, ಚಂಡೆ ವಾದ್ಯ, ಕೋಟೆ ಮಾರಿಯಮ್ಮ, ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ, ಕಂಚಿಕಾಮಾಕ್ಷಿ ದೇವಾಲಯದಿಂದ ಟ್ಯಾಬ್ಲೋ, ಸಿಡಿಮದ್ದು ಪ್ರದರ್ಶನ ಇರಲಿದೆ ಎಂದು ತಿಳಿಸಿದರು.

ಸಮರ್ಥ ವಿಭಾಗದ ಪ್ರಮುಖ್ ಸಂತೋಷ್ ಅಣ್ವೇಕರ್ ಮಾತನಾಡಿ, ಮಹದೇವಪೇಟೆ, ಗಣಪತಿ ಬೀದಿ, ದಾಸವಾಳ, ಹಿಲ್ ರಸ್ತೆ, ಮುತ್ತಪ್ಪ ದೇವಾಲಯ, ಭಗವತಿನಗರ, ತ್ಯಾಗರಾಜ ಕಾಲೋನಿ, ಉಕ್ಕಡವನ್ನೊಳಗೊಂಡ ಸಮರ್ಥ ವಸತಿಯ ಸಭೆ ಮುತ್ತಪ್ಪ ದೇವಾಲಯ ಆವರಣದಲ್ಲಿ ನಡೆಯಲಿದೆ. ಭಾರತಾಂಬೆ ಭಾವಚಿತ್ರ, ಚೌಡೇಶ್ವರಿ, ಕೋಟೆ ಗಣಪತಿ, ಕೋದಂಡ ರಾಮ ದೇವಾಲಯದಿಂದ ಟ್ಯಾಬ್ಲೋ, ಕುಣಿತ ಭಜನೆ ರಾಜಬೀದಿಯಲ್ಲಿ ತೆರಳಲಿದೆ ಎಂದು ವಿವರಿಸಿದರು.

ಅಶ್ವಿನಿ ವಸತಿ ವಿಭಾಗದ ಪ್ರಮುಖ್ ಚೇತನ್ ಮಾತನಾಡಿ, ಸುದರ್ಶನ ಬಡಾವಣೆ, ಅಶೋಕಪುರ, ಮಂಗಳಾದೇವಿ ನಗರ, ಶಾಂತಿನಿಕೇತನವನ್ನೊಳಗೊAಡ ಅಶ್ವಿನಿ ವಸತಿಯ ಸಭೆ ರೋಟರಿ ಸಭಾಂಗಣದಲ್ಲಿ ನಡೆಯಲಿದೆ. ೨ ಮಂಟಪ, ಚಂಡೆವಾದ್ಯದೊAದಿಗೆ ಚೌಕಿಗೆ ತೆರಳಲಾಗುವುದು ಎಂದರು.