ಮಡಿಕೇರಿ, ಫೆ. ೪: ಶಾಂತಿ ಗ್ರೂಪ್ ವತಿಯಿಂದ ಗಣರಾಜ್ಯೋತ್ಸವವನ್ನು ಮೂರ್ನಾಡಿನ ಜ್ಞಾನಜ್ಯೋತಿ ವಿದ್ಯಾಸಂಸ್ಥೆಯಲ್ಲಿ ಆಚರಿಸಲಾಯಿತು.

ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಮುಕ್ಕಾಟಿರ ರವಿ ಚೀಯಣ್ಣ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಬೇದಾರ್ ಮೇಜರ್ / ಗೌರವ ಕ್ಯಾಪ್ಟನ್ ಚಿಣ್ಣಪ್ಪ ಹೊಸೊಕ್ಲು, ಮರಗೋಡು ಅವರು ಭಾಗವಹಿಸಿದ್ದರು. ದೇಶಕ್ಕಾಗಿ ಸಲ್ಲಿಸಿದ ಅಪಾರ ಸೇವೆ ಹಾಗೂ ಪಡೆದ ಅನೇಕ ಪದಕಗಳನ್ನು ಪರಿಗಣಿಸಿ, ಗೌರವಿಸಿ ಅವರನ್ನು ಸನ್ಮಾನಿಸಲಾಯಿತು.

ಧ್ವಜಾರೋಹಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಶಾಲಾ ಬ್ಯಾಂಡ್ ಮೂಲಕ ಗೌರವ ವಂದನೆ ಸಲ್ಲಿಸಲಾಯಿತು. ವಂಶಿಕಾ ರೈ ಪ್ರಾರ್ಥಿಸಿ, ಅನ್ಶೀದಾ ಪಿ.ಎ. ಸ್ವಾಗತಿಸಿದರು. ಮುಖ್ಯ ಅತಿಥಿಗಳು ತಮ್ಮ ಭಾಷಣದಲ್ಲಿ ದೇಶಭಕ್ತಿ, ಶಿಸ್ತು ಮತ್ತು ತ್ಯಾಗದ ಮಹತ್ವವನ್ನು ವಿವರಿಸಿದರು.

ಶಾಲೆಯ ಮುಖ್ಯೋಪಾಧ್ಯಾಯಿನಿ ಶಿಲ್ಪಾ ಪೊನ್ನಮ್ಮ, ಅಧ್ಯಕ್ಷ ಮುಕ್ಕಾಟಿರ ರವಿ ಚೀಯಣ್ಣ ಮಾತನಾಡಿದರು. ವಿದ್ಯಾರ್ಥಿಗಳಿಂದ ದೇಶಭಕ್ತಿ ತುಂಬಿದ ಮನೋಹರ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಹಿಮಾಲಯನ್ ವುಡ್ ಬ್ಯಾಡ್ಜ್ಧಾರಕ ಗುಲ್ಶನ್ ಟಿ.ಸಿ. ಉಪಸ್ಥಿತರಿದ್ದರು. ಸಲ್ಮಾನ್ ಫಾರಿಸ್ ನಿರ್ವಹಿಸಿ, ಪೂರ್ವಿ, ಕೆ. ಧನಂಜಯ ಅವರು ವಂದನಾರ್ಪಣೆ ಸಲ್ಲಿಸಿದರು.