ಶನಿವಾರಸಂತೆ, ಫೆ. ೪: ನ್ಯಾಷನಲ್ ಇನ್ಸಿ÷್ಟಟ್ಯೂಟ್ ಆಫ್ ಕರಾಟೆ ಮತ್ತು ಯೋಗ ಅಕಾಡೆಮಿ ವತಿಯಿಂದ ಕುಶಾಲನಗರದ ರೈತ ಸಹಕಾರ ಭವನದಲ್ಲಿ ಆಯೋಜಿಸಿದ್ದ ೯ನೇ ಕರಾಟೆ ಮತ್ತು ಯೋಗ ಚಾಂಪಿಯನ್ ಶಿಪ್ನಲ್ಲಿ ಆಲೂರು-ಸಿದ್ದಾಪುರ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಸಾಧನೆ ಮಾಡಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಆಲೂರು-ಸಿದ್ದಾಪುರ ವಸತಿ ಶಾಲೆಯ ೪೭ ವಿದ್ಯಾರ್ಥಿಗಳಲ್ಲಿ ೧೯ ಮಂದಿ ಪ್ರಥಮ, ೧೬ ದ್ವಿತೀಯ ಹಾಗೂ ೧೨ ತೃತೀಯ ಸ್ಥಾನ ಪಡೆದು ಬಹುಮಾನಗಳಿಸಿದ್ದಾರೆ. ಮುಳ್ಳೂರು ಸರ್ಕಾರಿ ಕಿರಿಯ ಶಾಲೆಯ ೧೯ ವಿದ್ಯಾರ್ಥಿಗಳು
ಕತಾ ವಿಭಾಗದಲ್ಲಿ ಭಾಗವಹಿಸಿ ೧೧ ಪ್ರಥಮ, ೬ ದ್ವಿತೀಯ, ೨ ತೃತೀಯ ಬಹುಮಾನಗಳನ್ನು ಗಳಿಸಿದ್ದಾರೆ. ಎರಡೂ ಶಾಲೆಗಳ ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿ ನೀಡಿದ ಶಿಕ್ಷಕಿ ಎಂ.ವಿ. ನಳಿನಾಕ್ಷಿ ವಿದ್ಯಾರ್ಥಿಗಳ ಸಮಗ್ರ ಸಾಧನೆಗಾಗಿ ವಿಶೇಷ ಟ್ರೋಫಿಯನ್ನು ಸ್ವೀಕರಿಸಿದರು.