ಮಡಿಕೇರಿ, ಫೆ. ೪: ಅಡುಗೆ ಅನಿಲ ಸೋರಿಕೆಗೊಂಡು ಬೆಂಕಿ ಕಾಣಿಸಿಕೊಂಡ ಘಟನೆ ನಗರ ವ್ಯಾಪ್ತಿಯ ಪುಟಾಣಿ ನಗರದಲ್ಲಿ ಸಂಭವಿಸಿದೆ. ಅಲ್ಲಿನ ನಿವಾಸಿ ಮಲ್ಲಿಗೆ ಎಂಬವರ ಮನೆಯಲ್ಲಿ ಇಂದು ರಾತ್ರಿ ವೇಳೆ ಅಡುಗೆ ಮಾಡುತ್ತಿದ್ದ ಸಂದರ್ಭ ಅನಿಲ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡಿದೆ. ಅಕ್ಕಪಕ್ಕದವರು ಧಾವಿಸಿ ಸಿಲಿಂಡರ್ ಬಂದ್ ಮಾಡಿದ್ದರಿಂದ ಸಂಭವಿಸಬಹುದಾದ ಅನಾಹುತ ತಪ್ಪಿದಂತಾಗಿದೆ. ಸ್ಥಳಕ್ಕೆ ಅಗ್ನಿಶಾಮಕದಳದವರು ಆಗಮಿಸಿ ಪರಿಶೀಲನೆ ಮಾಡಿದರು.