ಮಡಿಕೇರಿ, ಫೆ. ೪: ಇಲ್ಲಿಗೆ ಸಮೀಪದ ಮಕ್ಕಂದೂರು ಗ್ರಾಮದ ಮಕ್ಕಂದೂರು ಪ್ರೀಮಿಯರ್ ಲೀಗ್ ಬಳಗದ ವತಿಯಿಂದ ಏರ್ಪಡಿಸಲಾಗಿದ್ದ ಮಕ್ಕಂದೂರು ಪ್ರೀಮಿಯರ್ ಲೀಗ್ ಸೀಸನ್-೬ರ ಚಾಂಪಿಯನ್ ಆಗಿ ಹಿಂದೂ ಕ್ರಿಕೆಟ್ ಕ್ಲಬ್ (ಹೆಚ್‌ಸಿಸಿ) ಹೊರ ಹೊಮ್ಮಿದೆ.

ಮಕ್ಕಂದೂರು ಶ್ರೀ ಭದ್ರಕಾಳಿ ದೇವಾಲಯದ ಬಳಿ ಇರುವ ನಾಪಂಡ ಕಾಳಪ್ಪ ಅವರಿಗೆ ಸೇರಿದ ಆಟದ ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ಹೆಚ್‌ಸಿಸಿ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ರಾಯಲ್ ಟೈರ‍್ಸ್ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯಾಟದಲ್ಲಿ ಸ್ಟಾರ್ ಲೈಟ್ ಕ್ರಿಕೆರ‍್ಸ್ ಮೂರನೇ ಸ್ಥಾನ ಪಡೆದರೆ, ಟೀಂ ಟೈಟನ್ಸ್ ನಾಲ್ಕನೇ ಸ್ಥಾನ ಪಡೆದುಕೊಂಡಿತು.

ಮಕ್ಕಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎನ್. ರಮೇಶ್, ಉಪಾಧ್ಯಕ್ಷೆ ವಿಮಲ ರವಿ, ಸದಸ್ಯ ಕಟ್ಟೆಮನೆ ಗಣೇಶ್ ಅವರುಗಳು ಪಂದ್ಯಾವಳಿ ಉದ್ಘಾಟನೆ ಮಾಡಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬಿ.ಎನ್. ರಮೇಶ್, ವಿಮಲ ರವಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ದಾನಿಗಳಾದ ಶಾಂತೆಯAಡ ವಿಕಾಸ್ ಅಚ್ಚಯ್ಯ, ಕುಂಬಗೌಡನ ಭರತ್, ಕುಂಬಗೌಡನ ವಿನೋದ್, ಅಣ್ಣಚ್ಚಿರ ಸತೀಶ್, ಎಂಪಿಎಲ್‌ನ ಅಧ್ಯಕ್ಷ ಬಿ.ಎಸ್. ವಿಜು ಅವರುಗಳು ಬಹುಮಾನ ವಿತರಣೆ ಮಾಡಿದರು. ಇದೇ ಸಂದರ್ಭ ಮಕ್ಕಳು ಹಾಗೂ ಸಾರ್ವಜನಿಕರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೂರೆಗೊಂಡವು.