ಮಡಿಕೇರಿ, ಫೆ. ೩: ಮಡಿಕೇರಿಯ ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯಿ) ಬಾಲಕಿಯರ ಕ್ರಿಡಾ ನಿಲಯಕ್ಕೆ ಹಾಕಿ ಕ್ರೀಡಾರ್ಥಿಗಳ ಆಯ್ಕೆ ಪ್ರಕ್ರಿಯೆ ತಾ. ೯ ಹಾಗೂ ೧೦ ರಂದು ನಡೆಯಲಿದೆ.
೧ಚಿ೨ ರಿಂದ ೧೫ ವರ್ಷದೊಳಗಿನ ಬಾಲಕಿಯರು ಅಂದು ಬೆಳಿಗ್ಗೆ ೯ ಗಂಟೆಗೆ ವೈದ್ಯಕೀಯ ಅರ್ಹತಾ ಪತ್ರ, ಜಿಲ್ಲೆ, ವಿಭಾಗ, ರಾಜ್ಯ ಹಾಗೂ ಅದಕ್ಕಿಂತ ಮೇಲ್ಪಟ್ಟ ೩ ವರ್ಷದ ಹಿಂದಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕ್ರೀಡಾ ಸಾಧನೆಯ ಪ್ರಮಾಣ ಪತ್ರ, ಜನ್ಮ ದಿನಾಂಕ ಪ್ರಮಾಣ ಪತ್ರ, ಇತ್ತೀಚಿನ ೫ ಪಾಸ್ಪೋರ್ಟ್ ಅಳತೆಯ ಭಾವಚಿತ್ರ. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಆಧಾರ್ ಕಾರ್ಡ್ಗಳ ಮೂಲ ಹಾಗೂ ನಕಲು ಪ್ರತಿಗಳೊಂದಿಗೆ ಸಾಯಿ ಹಾಕಿ ಟರ್ಫ್ ಮೈದಾನದಲ್ಲಿ ಹಾಜರಿರಬೇಕು.
ಆಯ್ಕೆ ಪ್ರಕ್ರಿಯೆಯನ್ನು ಹಿಂದಿನ ಮೂರು ವರ್ಷದ ಹಾಕಿ ಕ್ರೀಡಾ ಸಾಧನೆಯ ಪ್ರಮಾಣ ಪತ್ರ ಹಾಗೂ ಕೆಲವೊಂದು ಸಾಯಿ ನಿಗದಿತ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುವದು. ಆಯ್ಕೆಯಾದ ಕ್ರೀಡಾಪಟುಗಳಿಗೆ ವಸತಿ, ಊಟ, ಕ್ರೀಡಾ ಸಾಮಗ್ರಿ, ವೈದ್ಯಕೀಯ ವೆಚ್ಚ, ಶೈಕ್ಷಣಿಕ ಸೌಲಭ್ಯವನ್ನು ಉಚಿತವಾಗಿ ಸಾಯಿ ತರಬೇತಿ ಕೇಂದ್ರದಿAದ ನೀಡಲಾಗುವದು ಎಂದು ಸಾಯಿ ಆಡಳಿತಾಧಿಕಾರಿ ಮಿನಿ ಉಣ್ಣಿರಾಜ್ ತಿಳಿಸಿದ್ದಾರೆ.