ಕೂಡಿಗೆ, ಫೆ. ೩: ಹಾಸನ ಹೆದ್ದಾರಿಯ ಕುಶಾಲನಗರ - ಕೂಡಿಗೆ ರಸ್ತೆಯ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಎದುರು ಪಾದಚಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಬೈಕ್‌ನಲ್ಲಿ (ಕೆ.ಎ. ೧೨ ಯು. ೮೨೭೫) ಬಂದ ಸವಾರರು ಪಾದಚಾರಿ ರಂಜಿತ್ (೨೪) ಎಂಬ ಯುವಕನಿಗೆ ಡಿಕ್ಕಿ ಹೊಡೆದಿದ್ದು, ರಂಜಿತ್‌ನ ಕುತ್ತಿಗೆ ಭಾಗ ಮುರಿತಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೈಕ್ ಸವಾರರಾದ ರಘು ಮತ್ತು ಕಾರ್ತಿಕ್ ಎಂಬವರಿಗೂ ತೀವ್ರವಾಗಿ ಗಾಯಗಳಾಗಿದ್ದು, ಈ ಹಿನ್ನೆಲೆ ಕುಶಾಲನಗರ ಸಮುದಾಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಿ ನಂತರ ಒಬ್ಬರನ್ನು ಮಡಿಕೇರಿ ಆಸ್ಪತ್ರೆಗೆ ಇನ್ನೊಬ್ಬರನ್ನು ಮೈಸೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಸಾಗಿಸಲಾಗಿದೆ. ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.