ಮಡಿಕೇರಿ, ಫೆ. ೩: ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸೇವೆಯಿಂದ ನಿವೃತ್ತಿ ಹೊಂದಿದ ಅವಳಿ ಸಹೋದರರಾದ ಕಟ್ಟಕೋಡಿ ಹರೀಶ ಮತ್ತು ಗಿರೀಶ ಅವರಿಗೆ ಹಾಗೂ ಭಾರತೀಯ ಸೇನೆಯಿಂದ ನಿವೃತ್ತರಾಗಿರುವ ಕಟ್ಟಕೋಡಿ ರಾಮಕೃಷ್ಣ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಕರಿಕೆ ಗ್ರಾಮದ ಕಟ್ಟಕೋಡಿ ಕುಟುಂಬಸ್ಥರು ಏರ್ಪಡಿಸಿದ್ದರು.

ಕುಟುಂಬದ ಹಿರಿಯರಾದ ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಕಟ್ಟಕೋಡಿ ನಾಗಪ್ಪ, ಪ್ರಮುಖರಾದ ಸೀತಾರಾಮ, ಮಾಧವ, ಅನಂತ, ದೇವರಾಜ, ಜಾನಕಿ, ಶಾಂತಿ ಹಾಗೂ ಅರಣ್ಯ ಇಲಾಖೆಯ ಉದ್ಯೋಗಿ ಲಕ್ಷಿö್ಮಕುಮಾರ್ ಹಾಗೂ ಇತರರು ಸಮಾರಂಭದಲ್ಲಿ ಭಾಗವಹಿಸಿ ನಿವೃತ್ತರ ಸೇವೆಯನ್ನು ಗೌರವಿಸಿದರು. ಸನ್ಮಾನಿತ ಸೇವಾ ನಿವೃತ್ತರು ತಮ್ಮ ಸೇವಾ ದಿನಗಳನ್ನು ಸ್ಮರಿಸಿಕೊಂಡು ಅನಿಸಿಕೆ ವ್ಯಕ್ತಪಡಿಸಿದರು.