ಕರಿಕೆ, ಫೆ. ೩. ಭಾಗಮಂಡಲ, ಕರಿಕೆ, ಕೇರಳ ಸಂಪರ್ಕ ಕಲ್ಪಿಸುವ ಹೆದ್ದಾರಿಯ ಮೇಲಡ್ಕ ಬಳಿ ಒಂಟಿಸಲಗವೊAದು ಪ್ರತ್ಯಕ್ಷವಾಗಿ ಕೆಲ ಕಾಲ ಸಂಚಾರಕ್ಕೆ ಅಡಚಣೆ ಉಂಟಾಗಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಈ ರಸ್ತೆಯಲ್ಲಿ ಕೆಲ ತಿಂಗಳುಗಳಿAದ ರಾತ್ರಿ ವೇಳೆ ವಾಹನ ಸವಾರರಿಗೆ ಗೋಚರಿಸುತ್ತಿದ್ದ ಕಾಡಾನೆ ಇದೀಗ ಮೇವು ಹಾಗೂ ನೀರಿನ ಅಭಾವದಿಂದ ಹಗಲು ವೇಳೆಯಲ್ಲೆ ಊರಿನತ್ತ ಹೆಜ್ಜೆ ಹಾಕಲಾರಂಭಿಸಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಪ್ರಯಾಣಿಸಬೇಕಾಗಿ ಅರಣ್ಯ ಇಲಾಖೆ ಮನವಿ ಮಾಡಿದೆ. - ಸುಧೀರ್ ಹೊದ್ದೆಟ್ಟಿ