ಕಣಿವೆ, ಫೆ. ೩: ಕೃಷಿಕರೊಬ್ಬರು ತಾವು ಬೆಳೆದ ಕೃಷಿ ಫಸಲಿನ ಮೇಲೆ ರಸ್ತೆಯಲ್ಲಿ ಸಾಗುವ ಮಂದಿಯ ಕಣ್ಣು ದೃಷ್ಟಿ ತಾಗದಿರಲೆಂದು ಹಚ್ಚ ಹಸಿರಿನ ಫಸಲು ತುಂಬಿದ ಹೊಲದೊಳಗೆ ಅರೆನಗ್ನ ಸ್ಥಿತಿಯ ನಟಿಯೊಬ್ಬರ ಚಿತ್ರವನ್ನು ಅಳವಡಿಸಿದ್ದಾರೆ.

ಕುಶಾಲನಗರದಿಂದ ಬೆಟ್ಟದಪುರಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಯ ಕೋಳಿ ಮನೆ ಗ್ರಾಮದ ಕೃಷಿಕರೊಬ್ಬರು ಕಲ್ಲಂಗಡಿ ಹಣ್ಣಿನ ಕೃಷಿ ಮಾಡಿದ್ದಾರೆ. ಹೆಚ್ಚು ಜನಸಂದಣಿಯ ರಸ್ತೆ ಇದಾಗಿರುವ ಕಾರಣ ರಸ್ತೆ ಹೋಕರ ಕಣ್ಣು ದೃಷ್ಟಿ ಬೆಳೆಯತ್ತ ಬಾಧಿಸದೇ ಇರಲೆಂದು ಇಂತಹ ಚಿತ್ರ ಅಳವಡಿಕೆ ಮಾಡಿದ್ದಾರೆ. ಹಾಗಾಗಿ ಈ ಚಿತ್ರಪಟದತ್ತ ದೃಷ್ಟಿಹರಿಸುವ ಕೆಲವು ಮಂದಿ ಅರೆ.... ಇದ್ಯಾರಪ್ಪಾ ಹುಡುಗಿ ಹೊಲದೊಳಗೆ ನಿಂತಿದ್ದಾಳೆ ಎಂದುಕೊAಡು ಅರೆಕ್ಷಣ ದೃಷ್ಟಿ ಬೀರಿ ಬಳಿಕ ಅಯ್ಯೋ ಅದು ಚಿತ್ರಪಟವಾ ಎಂದುಕೊAಡು ಒಂದಿಷ್ಟು ನಸು ನಕ್ಕು ತೆರಳುವುದು ಕೂಡ ಗೋಚರಿಸುತ್ತಿದೆ.

ಮೊದ ಮೊದಲು ಕೃಷಿಕರು ಬೆಳೆಗೆ ಕಣ್ಣು ತಾಗದಿರಲೆಂದು ತೂತು ಬಿದ್ದ ಮಡಿಕೆಗೆ ಅಥವಾ ಖಾಲಿ ಪ್ಲಾಸ್ಟಿಕ್ ಬಿಂದಿಗೆಗೆ ಬಿಳಿ ಬಣ್ಣದ ಲೇಪನ ಮಾಡಿ ಅದರ ಮೇಲೆ ಕಣ್ಣು, ಮೀಸೆ, ಮೂಗು ಬಿಡಿಸಿ ಮನುಷ್ಯನಂತೆ ಪ್ರತಿಕೃತಿ ರಚಿಸಿ ಹೊಲದಲ್ಲಿ ನಿಲ್ಲಿಸುತ್ತಿದ್ದರು. ಆದರೆ ಈ ರಸ್ತೆಯಲ್ಲಿನ ಹೈಟೆಕ್ ಕೃಷಿಕರೊಬ್ಬರು ಇಂತಹ ಮಾಡೆಲ್‌ನ ಅರೆ ನಗ್ನ ಸ್ಥಿತಿಯ ಫೋಟೋವನ್ನು ಹಾಕುವ ಮೂಲಕ ನೋಡುಗರ ಆಕರ್ಷಣೆಗೆ ತುತ್ತಾಗಿದ್ದಾರೆ.