ಮಡಿಕೇರಿ, ಫೆ. ೨: ಜಿಲ್ಲಾ ಎಸ್‌ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿ ವತಿಯಿಂದ ನಾಡೋಜ ಡಾ ಸಿದ್ದಲಿಂಗಯ್ಯ ಜನ್ಮದಿನ ಅಂಗವಾಗಿ ತಾ. ೮ ರಂದು ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದ್ದು, ಆಸಕ್ತ ಕವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಕವಿಗಳು ತಮ್ಮ ಸ್ವರಚಿತ ಕವನವನ್ನು ತಾ. ೫ ರೊಳಗೆ ಕಳುಹಿಸಿಕೊಡುವಂತೆ ಅಧ್ಯಕ್ಷ ಎಂ.ಎಸ್. ಮಹೇಂದ್ರ ಕೋರಿದ್ದಾರೆ. ೯೪೮೧೫೪೫೦೫೦, ೯೬೬೩೭೧೪೮೧೨, ೯೭೩೧೮೧೮೫೫೦ ಸಂಖ್ಯೆಗೆ ಕವನಗಳನ್ನು ಕಳುಹಿಸಿಕೊಡಬೇಕು. ಶೀರ್ಷಿಕೆಯು ಪ್ರಗತಿಪರ ಜನಮುಖಿ ಶೋಷಿತ ಸಮಾಜದ ಕುರಿತಾಗಿ ಒಳಗೊಂಡಿರಬೇಕು. ೨೦ ಸಾಲಿನೊಳಗೆ ಇರಬೇಕು. ಎ೪ ಶೀಟ್‌ನ ಒಂದೇ ಬದಿಯಲ್ಲಿ ರಚನೆಗೊಂಡಿರಬೇಕು. ಕವಿಗಳು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಸಹಿತ ಸಂಪೂರ್ಣ ವಿಳಾಸದೊಂದಿಗೆ ಮೊಬೈಲ್ ಸಂಖ್ಯೆ ನಮೂದಿಸಿ ಕಳುಹಿಸಬೇಕು. ಸ್ವರಚಿತ ಕವನಗಳನ್ನು ಕವನ ಸಂಕಲನವಾಗಿ ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.