ಮಡಿಕೇರಿ, ಫೆ. ೨ : ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಕಾರ್ಮಿಕ ಮಾಹಿತಿ ಶಿಬಿರ ತಾ.೪ರಂದು ಮಧ್ಯಾಹ್ನ ೩ ಗಂಟೆಗೆ ಕುಶಾಲನಗರದಲ್ಲಿ ನಡೆಯಲಿದೆ.

ಇಂದಿರಾ ಬಡಾವಣೆಯ ಮಲಯಾಳಿ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್‌ನ ಜಿಲ್ಲಾಧ್ಯಕ್ಷ ಅಣ್ಣ ಶರೀಫ್ ವಹಿಸಲಿದ್ದಾರೆ. ಮುಖ್ಯ ಮಾಹಿತಿದಾರರಾಗಿ ಸೋಮವಾರಪೇಟೆ ಉಪ ವಿಭಾಗದ ಕಾರ್ಮಿಕ ಉಪನಿರೀಕ್ಷಕ ಶಶಿಧರ್ ಎಸ್., ಟ್ರೇಡ್ ಯೂನಿಯನ್‌ನ ರಾಜ್ಯ ಸಮಿತಿ ಸಂಚಾಲಕ ಖಾದರ್ ಪರಂಗಿಪೇಟೆ, ರಾಜ್ಯ ಸದಸ್ಯ ಅಬೂಬಕ್ಕರ್ ಮದ್ದ, ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಸಲೀಂ ಜಿ.ಕೆ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್, ಮಡಿಕೇರಿ ನಗರಸಭಾ ಸದಸ್ಯ ಎಂ.ಕೆ.ಮನ್ಸೂರ್ ಆಲಿ, ಮಾಜಿ ಸೈನಿಕÀ ಮೊಹಮ್ಮದ್ ನೆಬಿ ಪಿ.ಎ, ಎಸ್‌ಡಿಪಿಐ ಕುಶಾಲನಗರ ವಲಯಾಧ್ಯಕ್ಷ ಜಕ್ರಿಯ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಜಾಕ್ ಎಂ.ಎ. ಪತ್ರಿಕಾ ಪ್ರಕಟಣೆ ನೀಡಿದ್ದಾರೆ.