ಮಡಿಕೇರಿ, ಫೆ. ೨: ಮುಂಬೈನ ಮೊಗವೀರ ಕನ್ನಡ ಮಾಸಿಕ ಪತ್ರಿಕೆ ತನ್ನ ೮೫ನೇ ವರ್ಷದ ಸಂಭ್ರಮದ ಅಂಗವಾಗಿ ಏರ್ಪಡಿಸಿದ್ದ ಕಥಾ ಸ್ಪರ್ಧೆಯಲ್ಲಿ ಜಿಲ್ಲೆಯ ಸಂಪಾಜೆಯ ಬರಹಗಾರ್ತಿ ಸ್ಮಿತಾ ಅಮೃತ್ರಾಜ್ ಪ್ರಥಮ ಬಹುಮಾನಕ್ಕೆ ಭಾಜನರಾಗಿದ್ದಾರೆ. ಸ್ಮಿತಾ ಅವರ ಸತ್ಯನಾರಾಯಣ ಪೂಜೆ ಕಥೆಗೆ ಬಹುಮಾನ ಲಭಿಸಿದೆ. ಬಹುಮಾನ ರೂ. ೧೦ ಸಾವಿರ ನಗದು ಹಾಗೂ ಪ್ರಶಂಸನಾ ಪತ್ರವನ್ನು ಒಳಗೊಂಡಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.