ಶನಿವಾರಸಂತೆ, ಫೆ. ೨: ಹಂಡ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಶ್ರೀಬಸವೇಶ್ವರ ದೇವಸ್ಥಾನದ ಸಹಭಾಗಿತ್ವದಲ್ಲಿ ಗುಡುಗಳಲೆ ಜಾತ್ರಾ ಮೈದಾನದಲ್ಲಿ ನಡೆಯುವ ೧೫ ದಿನಗಳ ಐತಿಹಾಸಿಕ ಗುಡುಗಳಲೆ ಶ್ರೀಜಯದೇವ ಜಾನುವಾರುಗಳ ಜಾತ್ರಾ ಮಹೋತ್ಸವಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಬೆಳಿಗ್ಗೆ ಗುಡುಗಳಲೆ ಶ್ರೀಬಸವೇಶ್ವರ ದೇವಸ್ಥಾನದದಲ್ಲಿ ನೆರೆ ಶ್ರೀಬಸವಣ್ಣ ದೇವರಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು.

ನಂತರ ಅಡ್ಡಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನಿರಿಸಿ, ರಾಸುಗಳು, ವಾದ್ಯಗೋಷ್ಠಿ , ವೀರಗಾಸೆ ಕುಣಿತ ಹಾಗೂ ಕಳಸ ಹೊತ್ತ ಮಹಿಳೆಯರ ಸಹಿತ ಮೆರವಣಿಗೆ ಮುಖ್ಯರಸ್ತೆಯಲ್ಲಿ ಸಾಗಿ ಜಾತ್ರಾ ಮೈದಾನ ತಲುಪಿತು. ಠಾಣಾ ಪಿಎಸ್‌ಐ ಎಚ್.ವೈ.ಚಂದ್ರ ಜಾತ್ರಾ ಸಮಿತಿಯ ಪದಾಧಿಕಾರಿಗಳ ಜೊತೆ ಜಾತ್ರೆಯನ್ನು ಉದ್ಘಾಟಿಸಿದರು. ನಂತರ ಮೆರವಣಿಗೆಯ ದೀಣೆ ಮೇಲಿನ ಶ್ರೀ ಬಸವೇಶ್ವರ ದೇವಸ್ಥಾನ ತಲುಪಿ ಅಲ್ಲಿಯೂ ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನ ನಡೆದ ಉದ್ಘಾಟನಾ ಸಮಾರಂಭವನ್ನು ಪಿಎಸ್‌ಐ ಎಚ್.ವೈ.ಚಂದ್ರ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಜಾತ್ರೆಗಳು ಜಾನಪದದ ಸಂಸ್ಕೃತಿಯ ಪ್ರತೀಕವಾಗಿದ್ದು, ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು. ಜಾತ್ರೆ ಯಶಸ್ವಿಯಾಗಿ ನಡೆಯಲು ಜಾತ್ರ ಸಮಿತಿಯೊಂದಿಗೆ ಗ್ರಾಮಸ್ಥರ ಸಹಕಾರವೂ ಅತ್ಯಗತ್ಯವಾಗಿದೆ. ಅಹಿತಕರ ಘಟನೆಗಳು ನಡೆಯದೆ ಜಾತ್ರೆ ಸುವ್ಯವಸ್ಥಿತವಾಗಿ ನಡೆಯುವಲ್ಲಿ ಪೊಲೀಸರ ಪಾತ್ರವು ಮಹತ್ವದಾಗಿದೆ ಎಂದರು.

ಮಾದ್ರೆ ಗ್ರಾಮದ ಮುದ್ದಿನಕಟ್ಟೆ ಮಠದ ಸಿದ್ಧಲಿಂಗಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ ಸಮುದಾಯದವರೆಲ್ಲಾ ಒಂದೆಡೆ ಕಲೆತು ಆಚರಿಸುವ ಹಬ್ಬವೇ ಜಾತ್ರೆಗಳು.ಸಮಾಜದ ವ್ಯವಸ್ಥೆಯಲ್ಲಿ ಸಂಘಟನೆ ಕಷ್ಟ. ಹಿತೈಷಿ ಭಾವನೆಗಳು ಮಾಯವಾಗಿವೆ.ಜಾನುವಾರು ಜಾತ್ರೆಗಳಲ್ಲಿ ಜಾನುವಾರುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಗೋಮಾತೆ ಹಸು ಬಹುಪಯೋಗಿಯಾಗಿದ್ದು ಪವಿತ್ರ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಭಾವನೆಯಿಂದ ಪೂಜಿಸಬೇಕು ಎಂದರು.

ಕೊಡ್ಲಿಪೇಟೆ ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ ಆಶೀರ್ವಚನ ನೀಡಿ, ಜಾನುವಾರುಗಳ ಸ್ಪರ್ಶ ಮಾತ್ರದಿಂದಲೇ ಪುಣ್ಯ ಸಂಚಯವಾಗುತ್ತದೆ.ಧರ್ಮ ಇಲ್ಲದ ಜೀವನವಿಲ್ಲ.ಧರ್ಮ, ಗುರು, ದೇವಾಲಯ, ಮಠಗಳ ಅವಶ್ಯಕತೆ ಇದೆ.ದಯವೇ ಧರ್ಮದ ಮೂಲವಾಗಬೇಕು ಎಂದರು. ಗ್ರಾಮ ಮುಖಂಡ ಬೆಳೆಗಾರ ಎಸ್.ಕೆ.ವೀರಪ್ಪ ಮಾತನಾಡಿ, ಜಾತ್ರೆಯ ಗತವೈಭವ ಸ್ಮರಿಸಿ ಜಾತ್ರೆಯ ಜೊತೆ ದೇವಸ್ಥಾನಗಳ ಪರಂಪರೆ ಮುಂದುವರೆಯಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೆರವಣಿಗೆಗೆ ರಾಸುಗಳನ್ನು ಕರೆತಂದ ಮಾಲೀಕ ಗಣೇಶ್ ಹಾಗೂ ಜಾತ್ರಾ ಸಮಿತಿ-ಸಲಹಾ ಸಮಿತಿ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಯಸಳೂರಿನ ಕಲಾವಿದರ ವೀರಗಾಸೆ ಹಾಗೂ ನಂದಿಧ್ವಜ ಕುಣಿತ ಜನಮನ ರಂಜಿಸಿತು. ಜಾತ್ರಾ ಸಮಿತಿ ಅಧ್ಯಕ್ಷೆ ಎಂ.ಎಸ್.ಚೈತ್ರಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಚ್.ಎಂ.ವಿನೀತ್ ಕುಮಾರ್, ಉಪಾಧ್ಯಕ್ಷ ಬಸವಯ್ಯ, ಸಹಕಾರ್ಯದರ್ಶಿ ಉಷಾ, ಸದಸ್ಯರಾದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಧಾ, ಉಪಾಧ್ಯಕ್ಷ ಅಶೋಕ್, ಸದಸ್ಯರಾದ ವೀರೇಂದ್ರಕುಮಾರ್, ಎನ್.ಎಂ.ಬಸವರಾಜ್, ಸುವರ್ಣ, ಎಂ.ಸಿ.ರೂಪಾ, ಮಾದೇವಿ, ಪಿಎಸ್‌ಐ ಗೋವಿಂದ್ ರಾಜ್, ದೇವಾಲಯ ಸಮಿತಿ ಅಧ್ಯಕ್ಷ ಡಿ.ಬಿ.ಧರ್ಮಪ್ಪ, ಕಾರ್ಯದರ್ಶಿ ಎಸ್.ಎಂ.ಉಮಾಶAಕರ್, ಕಾಳಿಕಾಂಬ ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಬಿ.ನಾಗರಾಜ್, ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿಗುರುಪ್ರಸನ್ನ, ಮುಖಂಡರಾದ ಕೆ.ಬಿ.ಹಾಲಪ್ಪ, ಚಿದಾನಂದ್, ಕುಶಾಲಪ್ಪ, ಸುಮಂತ್, ಲಕ್ಷಿö್ಮಶೆಟ್ರು ಹಾಗೂ ಮಣಿಕಂಠ ಪುರೋಹಿತರು ಉಪಸ್ಥಿತರಿದ್ದರು. ಸುಪ್ರಜಾ ಗುರುಕುಲ ವ್ಯವಸ್ಥಾಪಕಿ ಸುಜಲಾದೇವಿ ಕಾರ್ಯಕ್ರಮ ನಿರ್ವಹಿಸಿದರು. ಮುಖಂಡ ವೀರೇಂದ್ರ ಕುಮಾರ್ ಸ್ವಾಗತಿಸಿ, ವಂದಿಸಿದರು.