ಕುಶಾಲನಗರ, ಫೆ. ೨: ರಸ್ತೆ ಕಾಮಗಾರಿಯ ಉದ್ಘಾಟನೆಗೆಂದು ಆಗಮಿಸಿದ ಶಾಸಕರು ರಸ್ತೆಯ ಕಳಪೆ ಗುಣಮಟ್ಟ ಗಮನಿಸಿ ಉದ್ಘಾಟನೆ ಮಾಡದೆ ಹಿಂತಿರುಗಿದ ಘಟನೆ ಕುಶಾಲನಗರದಲ್ಲಿ ನಡೆದಿದೆ.
ಕುಶಾಲನಗರ ಬೈಚನಹಳ್ಳಿ ಬಳಿ ಮಾರಿಯಮ್ಮ ದೇವಾಲಯದ ಹಿಂಭಾಗ ನಿಂಗೇಗೌಡ ಬಡಾವಣೆಯ ರಸ್ತೆ ಕಾಮಗಾರಿ ಪ್ಯಾಕೇಜ್ ಆಧಾರದಲ್ಲಿ ಒಟ್ಟು ರೂ. ೭ ಲಕ್ಷ ವೆಚ್ಚದಲ್ಲಿ ಕಳೆದ ಮೂರು ದಿನಗಳ ಹಿಂದೆ ಪೂರ್ಣಗೊಂಡಿದೆ.
ಎರಡು ಬಡಾವಣೆಗಳ ಎರಡನೇ ಹಂತದ ಕಾಮಗಾರಿ ಇದಾಗಿದ್ದು, ಗುತ್ತಿಗೆದಾರ ಸಂಪೂರ್ಣ ಕಳಪೆ ಮಟ್ಟದ ಸಾಮಗ್ರಿಗಳನ್ನು ಬಳಸಿ ಕಾಮಗಾರಿಯ ಅಂದಾಜು ಪಟ್ಟಿಯನ್ನು ನಿರ್ಲಕ್ಷಿಸಿ ಡಾಂಬರೀಕರಣ ಮಾಡಿದ್ದು ಇದರಿಂದ ಬಡಾವಣೆಯ ನಾಗರಿಕರು ರಸ್ತೆಯಲ್ಲಿ ಓಡಾಡಲು ಸಂಕಷ್ಟಕ್ಕೆ ಈಡಾಗುವ ಪರಿಸ್ಥಿತಿ ಗೋಚರಿಸಿದೆ. ಈ ರಸ್ತೆಯನ್ನು ಉದ್ಘಾಟಿಸಲು ಶಾಸಕ ಡಾ ಮಂತರ್ ಗೌಡ ಪಕ್ಷದ ಪ್ರಮುಖರೊಂದಿಗೆ ಆಗಮಿಸಿದ್ದು ಕಾಮಗಾರಿ ಗುಣಮಟ್ಟ ನೋಡಿ ಸಿಡಿಮಿಡಿಗೊಂಡಿದ್ದಾರೆ.
ನಾನು ಈ ರಸ್ತೆಯನ್ನು ಉದ್ಘಾಟಿಸುವುದಿಲ್ಲ. ಗುಣಮಟ್ಟದ ರಸ್ತೆ ಕಾಮಗಾರಿ ನಡೆದ ನಂತರವಷ್ಟೇ ತಾನು ಉದ್ಘಾಟಿಸುವುದಾಗಿ ಗುತ್ತಿಗೆದಾರನ ಮೇಲೆ ಆಕ್ರೋಶ ವ್ಯಕ್ತಪಡಿಸಿ ಹಿಂತಿರುಗಿದ್ದಾರೆ.
ಈ ಬಗ್ಗೆ ‘ಶಕ್ತಿ’ಗೆ ಪ್ರತಿಕ್ರಿಯೆ ನೀಡಿದ ಪುರಸಭೆ ಇಂಜಿನಿಯರ್ ಅರ್ಬಸ್ ಅಹ್ಮದ್, ಪಟ್ಟಣದ ವಿವೇಕಾನಂದ ಬಡಾವಣೆ ಮತ್ತು ನಿಂಗೇಗೌಡ ಬಡಾವಣೆ ಎರಡನೇ ಹಂತದ ರಸ್ತೆ ಡಾಂಬರೀಕರಣ ಕಾಮಗಾರಿ ೭ ಲಕ್ಷ ರೂಗಳಿಗೆ ಟೆಂಡರ್ ಆಗಿದ್ದು, ನಿಂಗೇಗೌಡ ಬಡಾವಣೆಯಲ್ಲಿ ನಡೆದಿರುವ ಕಾಮಗಾರಿ ಗುಣಮಟ್ಟದಲ್ಲಿ ನಡೆದಿಲ್ಲ ಎನ್ನುವ ಕಾರಣದಿಂದ ಮತ್ತೆ ಕಾಮಗಾರಿ ನಡೆಸಲಾಗುವುದು. ಸುಮಾರು ೧೨೦ ಮೀಟರ್ ಉದ್ದದ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ಎಂದು ತಿಳಿಸಿದ್ದಾರೆ.
ಕಾಮಗಾರಿ ಸಂಪೂರ್ಣ ಕಳಪೆ ಆಗಿದ್ದು, ಮಣ್ಣಿನ ಮೇಲೆ ನಾಮಕಾವಸ್ಥೆಗೆ ಜಲ್ಲಿ ತುಂಬಿಸಿ ಕ್ರಷರ್ ಪೌಡರ್ ಹಾಕಿ ಅದರ ಮೇಲೆ ಗುಣಮಟ್ಟ ಇಲ್ಲದ ಡಾಂಬರ್ ತಂದು ಸುರಿದಿರುವ ಬಗ್ಗೆ ಸಾರ್ವಜನಿಕರಿಂದಲೂ ಅಸಮಾಧಾನ ವ್ಯಕ್ತವಾಗಿದೆ. ರಸ್ತೆ ಮೇಲೆ ನಡೆದುಕೊಂಡು ಓಡಾಡುವ ಬಡಾವಣೆ ನಿವಾಸಿಗಳ ಕಾಲಿಗೆ ಡಾಂಬರು ಆಂಟಿಕೊAಡು ಮನೆ ಒಳಗೆ ತೆರಳಲು ಕೂಡ ಸಾಧ್ಯವಾಗುತ್ತಿಲ್ಲ ಎಂದು ಅಲ್ಲಿನ ನಿವಾಸಿ ಅಶ್ರಫ್ ತಿಳಿಸಿದ್ದಾರೆ. ಕಾಮಗಾರಿ ನಡೆದು ಮೂರು ದಿನಗಳು ಕಳೆದರೂ ರಸ್ತೆಗೆ ಹಾಕಿರುವ ಡಾಂಬರ್ ಕಿತ್ತು ಬರುತ್ತಿರುವುದು ಪ್ರಸಕ್ತ ಬೆಳವಣಿಗೆಯಾಗಿದೆ.