ಸೋಮವಾರಪೇಟೆ, ಫೆ. ೧: ಕರ್ನಾಟಕ ಪರಿಶಿಷ್ಟ ಜಾತಿಗಳ-ಪಂಗಡಗಳ ಕೆಲವೊಂದು ಜಮೀನುಗಳ ಪರಭಾರೆ ನಿಷೇಧ ಕಾಯ್ದೆಯ ಸೆಕ್ಷನ್ ೫ಕ್ಕೆ ಸಂಬAಧಿಸಿ ದಂತೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಪರಿವರ್ತನವಾದ) ಪದಾಧಿಕಾರಿಗಳು ತಾಲೂಕು ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈಗಿರುವ ಕಾಯ್ದೆಯ ಅಂಶಗಳಿAದ ಪರಿಶಿಷ್ಟ ಜಾತಿ-ಪಂಗಡಗಳ ಸಮುದಾಯದವರಿಗೆ ಅನುಕೂಲವಾಗಿಲ್ಲ. ನ್ಯಾಯಾಲಯಗಳೂ ಸಹ ಕಾಯ್ದೆಯನ್ವಯ ತೀರ್ಪು ನೀಡಿದ್ದು, ಇದು ಪರಿಶಿಷ್ಟ ಸಮುದಾಯಕ್ಕೆ ಸಮಸ್ಯೆಯನ್ನು ತಂದೊಡ್ಡುತ್ತಿದೆ. ರಾಜ್ಯಾದ್ಯಂತ ಸಾವಿರಾರು ಮಂದಿ ಪರಿಶಿಷ್ಟರು ಭೂಮಿಯನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಈ ಹಿನ್ನೆಲೆ ಕಾಯ್ದೆಗೆ ತಿದ್ದುಪಡಿ ತಂದು ಪರಿಶಿಷ್ಟರ ಭೂಮಿಯನ್ನು ಉಳಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ. ಪರಿಶಿಷ್ಟ ಗ್ರಾಂಟಿಗಳು/ಅರ್ಜಿದಾರರು ಮೊದಲ ಬಾರಿಗೆ ತಡವಾಗಿ ಎ.ಸಿ., ಡಿ.ಸಿ., ಹೈಕೋರ್ಟ್, ಇತರ ನ್ಯಾಯಾಲಯಗಳಿಗೆ ಅರ್ಜಿ ಸಲ್ಲಿಸುವಾಗ ಅಂತಹ ಅರ್ಜಿಗಳನ್ನು ಕೆಲವೊಂದು ಕಾರಣ ನೀಡಿ ವಜಾಗೊಳಿಸಬಾರದೆಂದು ಪಿಟಿಸಿಎಲ್ ಕಾಯ್ದೆಯ ಸೆಕ್ಷನ್ ೫ಕ್ಕೆ ಮತ್ತೊಂದು ತಿದ್ದುಪಡಿ ಆದೇಶ ಮಾಡಬೇಕೆಂದು ಪದಾಧಿಕಾರಿಗಳು ಮನವಿಯ ಮೂಲಕ ಸರ್ಕಾರದ ಗಮನ ಸೆಳೆದಿದ್ದಾರೆ.
ಈ ಸಂದರ್ಭ ಸಮಿತಿಯ ಜಿಲ್ಲಾ ಸಂಚಾಲಕ ಸಿ.ಸಿ. ಲೋಕೇಶ್, ಸಂಘಟನಾ ಸಂಚಾಲಕ ವಿಜಯ್ಕುಮಾರ್, ಸೋಮವಾರಪೇಟೆ ತಾಲೂಕು ಸಂಚಾಲಕ ಉಮೇಶ್, ಶನಿವಾರಸಂತೆ ಹೋಬಳಿ ಸಂಚಾಲಕ ಜೆ. ರೋಹಿತ್ಕುಮಾರ್ ಅವರುಗಳು ಇದ್ದರು.