ಮಡಿಕೇರಿ, ಫೆ. ೧: ಹಾಕತ್ತೂರು ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ನೂತನ ಅಧ್ಯಕ್ಷ ಬಿ.ಕೆ. ನಾರಾಯಣ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಯಿತು.

ನೂತನ ಬೂತ್ ಅಧ್ಯಕ್ಷರು, ಬಿಎಲ್‌ಓಗಳ ನೇಮಕ ಸೇರಿದಂತೆ ಪಕ್ಷ ಸಂಘಟನೆ ಹಾಗೂ ಇತರ ವಿಷಯಗಳ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ವಲಯ ಉಪಾಧ್ಯಕ್ಷರಾಗಿ ಕೆ.ವೈ. ಜಲಿಲ್, ಕಾರ್ಯದರ್ಶಿಯಾಗಿ ಭುವನ್ ನೆಲ್ಲುಪೂಣಿ ಅವರನ್ನು ನೇಮಿಸಲಾಯಿತು. ಹುಲಿತಾಳ ಬೂತ್ ಅಧ್ಯಕ್ಷರಾಗಿ ದಯಾನಂದ (ಅಣ್ಣು), ಬಿಎಲ್‌ಓ ಆಗಿ ಅಶ್ವಥ್ ಕುಮಾರ್ ಹಾಗೂ ಶಶಿಕುಮಾರ್, ಕಗ್ಗೋಡ್ಲು ಬೂತ್ ಅಧ್ಯಕ್ಷರಾಗಿ ಎಂ.ಬಿ. ಪ್ರವೀಣ್, ಬಿಎಲ್‌ಓ ಆಗಿ ಕೊರಗಪ್ಪ ಪೂಜಾರಿ ಹಾಗೂ ಕಿಶೋರ್, ತೊಂಬತ್ತುಮನೆ ಬೂತ್ ಅಧ್ಯಕ್ಷರಾಗಿ ಹೆಚ್.ಬಿ.ಸುರೇಶ್, ಬಿ.ಎಲ್.ಓ ಆಗಿ ಕೆ.ವೈ. ಜಲೀಲ್ ಹಾಗೂ ಬಿ.ಎ. ಶರೀಫ್ ಬಚ್ಚ ಅವರನ್ನು ನೇಮಿಸಲಾಯಿತು.

ಸಭೆಯಲ್ಲಿ ಮಾಜಿ ಅಧ್ಯಕ್ಷ ಪಿಯೂಶ್ ಪೆರೇರ, ಪ್ರಮುಖರಾದ ದಂಬೆಕೋಡಿ ಕವನ ಭೀಷ್ಮ ಸೇರಿದಂತೆ ಮತ್ತಿತರರು ಹಾಜರಿದ್ದರು.