ಮಡಿಕೇರಿ, ಜ. ೩೦: ವೀರಾಜಪೇಟೆ, ಪೊನ್ನಂಪೇಟೆ ಹಾಗೂ ಕುಶಾಲನಗರ ತಾಲೂಕಿನ ಕೆಲವು ಗ್ರಾಮ ಪಂಚಾಯಿತಿಗಳನ್ನು ಪುನರ್ ರಚಿಸಲು ಕರಡು ಅಧಿಸೂಚನೆ ಪ್ರಕಟಿಸಿ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಆದೇಶ ಹೊರಡಿಸಿದ್ದಾರೆ.

ಈ ಕರಡು ಅಧಿಸೂಚನೆಯಿಂದ ಬಾಧಿತರಾಗುವವರು ಫೆ. ೬ ರೊಳಗಾಗಿ ತಮ್ಮ ಆಕ್ಷೇಪಣೆಯನ್ನು ಸಲ್ಲಿಸುವಂತೆ ತಿಳಿಸಿದ್ದಾರೆ.

ಪುನರ್‌ರಚನೆ ಗ್ರಾಮಗಳು

ವೀರಾಜಪೇಟೆ ತಾಲೂಕಿನ ಚೆಂಬೆಬೆಳ್ಳೂರು ಗ್ರಾ.ಪಂ. ವ್ಯಾಪ್ತಿಯ ಚೆಂಬೆಬೆಳ್ಳೂರು, ಕುಕ್ಲೂರು, ದೇವಣಗೇರಿ, ಐಮಂಗಲ, ಮಗ್ಗುಲ, ಬಿಟ್ಟಂಗಾಲ ಗ್ರಾಮದ ಬಿಟ್ಟಂಗಾಲ, ಬಾಳುಗೋಡು, ನಾಂಗಾಲ, ೧ನೇ ರುದ್ರಗುಪ್ಪೆ, ವಿ. ಬಾಡಗ, ಬೇಟೋಳಿ ಗ್ರಾ.ಪಂ.ನ ಬೇಟೋಳಿ, ಹೆಗ್ಗಳ, ಆರ್ಜಿ ಗ್ರಾಮ ಪಂಚಾಯಿತಿಯ ಆರ್ಜಿ, ಕೆದಮುಳ್ಳೂರು ಗ್ರಾ.ಪಂ.ನ ಕೆದಮುಳ್ಳೂರು, ಕೊಟ್ಟೋಳಿ, ಪಾಲಂಗಾಲ, ಕದನೂರು ಗ್ರಾ.ಪಂ.ನ ಕದನೂರು, ಅರಮೇರಿ ಹಾಗೂ ಮೈತಾಡಿ ಗ್ರಾಮಗಳನ್ನು ಆಯಾ ಪಂಚಾಯಿತಿ ವ್ಯಾಪ್ತಿಗೆ ಒಳಪಡಿಸಲಾಗಿದೆ.

ಪೊನ್ನಂಪೇಟೆ ತಾಲೂಕಿನ ಹಾತೂರು ಗ್ರಾಮದ ಹಾತೂರು, ಕೈಕೇರಿ, ಕುಂದ, ಬಲ್ಯಮಂಡೂರು ಗ್ರಾ.ಪಂ.ನ ಬಲ್ಯಮಂಡೂರು, ಚಿಕ್ಕಮಂಡೂರು, ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು ಗ್ರಾ.ಪಂ.ನ ಬಸವನಹಳ್ಳಿ, ರಸಲ್‌ಪುರ, ಅತ್ತೂರು ಅರಣ್ಯ, ಅನೆಕಾಡು ಅರಣ್ಯ, ಬೈಚನಹಳ್ಳಿಯಲ್ಲಿ ಆಯಾ ಪಂಚಾಯಿತಿ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕರಡು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.