ಕೋವರ್ಕೊಲ್ಲಿ ಇಂದ್ರೇಶ್
ಮAಗಳೂರು, ಜ. ೩೦: ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್ಗಳನ್ನೇ ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ ಅಂತರ ಜಿಲ್ಲಾ ಕಳ್ಳನೊಬ್ಬನನ್ನು ಮಂಗಳೂರಿನ ಬರ್ಕೆ ಪೊಲೀಸರು ಬಂಧಿಸಿದ್ದಾರೆ.
ಬAಧಿತನನ್ನು ಮಡಿಕೇರಿ ದಾಸವಾಳ ರಸ್ತೆ ನಿವಾಸಿ ಮಹಮ್ಮದ್ ಇಮ್ರಾನ್ (೪೪) ಎಂದು ಗುರುತಿಸಲಾಗಿದೆ. ಈತನಿಂದ ಪೊಲೀಸರು ೬,೪೭,೯೨೦ ರೂಪಾಯಿ ಮೌಲ್ಯದ ೪೬.೨೮ ಗ್ರಾಂ ಚಿನ್ನದ ಒಡವೆಗಳು ಹಾಗೂ ೫, ಸಾವಿರ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ತಾ. ೨೩ರಂದು ಬಿಜೈ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಬೆಂಗಳೂರಿಗೆ ತೆರಳಲು ಸಜ್ಜಾಗಿದ್ದ ಇಬ್ಬರು ವಯಸ್ಸಾದ ಮಹಿಳೆಯರು ಮತ್ತು ಹಿರಿಯ ನಾಗರಿಕರಿದ್ದ ತಂಡವನ್ನು ಈತ ಗಮನಿಸಿದ್ದ. ಅವರು ಬಸ್ಸಿನಲ್ಲಿ ಕುಳಿತು ತಮ್ಮ ಬ್ಯಾಗ್ ಅನ್ನು ಪಕ್ಕದಲ್ಲಿ ಇರಿಸಿದ್ದಾಗ, ಅವರ ಗಮನ ಬೇರೆಡೆ ಇದ್ದ ಸಮಯ ನೋಡಿ ಕ್ಷಣಾರ್ಧದಲ್ಲಿ ಬ್ಯಾಗ್ ಎಗರಿಸಿ ಪರಾರಿಯಾಗಿದ್ದ. ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರು ಮೈಮರೆತಾಗ ಅಥವಾ ಬಸ್ ಹತ್ತುವ ಧಾವಂತದಲ್ಲಿದ್ದಾಗ ಅವರ ಬೆಲೆಬಾಳುವ ಬ್ಯಾಗ್ಗಳನ್ನು ಈತ ಕಳವು ಮಾಡುತ್ತಿದ್ದ. ಬಂಧಿತ ಇಮ್ರಾನ್ ಕೇವಲ ಮಂಗಳೂರಿನಲ್ಲಿ ಮಾತ್ರವಲ್ಲದೆ ಹಾಸನ, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತನ್ನ ಕೃತ್ಯ ಮುಂದುವರಿಸಿದ್ದ. ಈತನ ಮೇಲೆ ಹಾಸನದ ವಿವಿಧ ಠಾಣೆಗಳಲ್ಲಿ ೭, ಮೈಸೂರಿನಲ್ಲಿ ೧ ಸೇರಿದಂತೆ ಒಟ್ಟು ೧೧ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಬಸ್ ನಿಲ್ದಾಣದ ಬ್ಯಾಗ್ ಕಳ್ಳತನ ಮಾತ್ರವಲ್ಲದೆ ಮನೆಗೆ ನುಗ್ಗಿ ಕಳ್ಳತನ ನಡೆಸಿದ ಪ್ರಕರಣಗಳೂ ಸೇರಿವೆ. ಈ ಹಿಂದೆ ಹಾಸನದಲ್ಲಿ ಮನೆಯಲ್ಲಿ ಕಳ್ಳತನ ಪ್ರಕರಣದಲ್ಲಿ ಜಾಮೀನು ಪಡೆದು ಕೋರ್ಟ್ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಈತನ ವಿರುದ್ಧ ನ್ಯಾಯಾಲಯವು ವಾರೆಂಟ್ ಕೂಡ ಹೊರಡಿಸಿತ್ತು. ಮಡಿಕೇರಿ ಡಿಸಿಆರ್ಬಿ ವಿಭಾಗದ ಸಹಾಯದೊಂದಿಗೆ ಆರೋಪಿಯನ್ನು ಬಂಧಿಸಿ ಮಂಗಳೂರು ಪೊಲೀಸರಿಗೆ ಒಪ್ಪಿಸಲಾಗಿದೆ.