ಮಡಿಕೇರಿ, ಜ. ೨೧: ಇಂದು ನಡೆದ ಹುದಿಕೇರಿಯ ಅಂಜಿಗೇರಿ ನಾಡ್ ಕೂಟದ ಸಭೆಯಲ್ಲಿ ನೂತನವಾಗಿ ಸಾಂಸ್ಕೃತಿಕ ಪಡೆಯನ್ನು ರಚಿಸಲಾಯಿತು. ಈ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹುಮ್ಮಸ್ಸಿನಿಂದ ಸಾಂಸ್ಕೃತಿಕ ಕೂಟದಲ್ಲಿ ಭಾಗವಹಿಸತ್ತಿದ್ದು, ಅಂಜಿಗೇರಿ ನಾಡ್ ಕೂಟದ ಅಧ್ಯಕ್ಷ ಬಯವಂಡ ಪೂವಣ್ಣ ಹಾಗೂ ಕಾರ್ಯದರ್ಶಿ ಚೆಕ್ಕೇರ ಆದರ್ಶ್ ಸಮ್ಮುಖದಲ್ಲಿ ನಡೆಯಿತು.
ಸಾಂಸ್ಕೃತಿಕ ಪಡೆಯ ಮುಖ್ಯಸ್ಥರಾಗಿ ಚಂಗುಲAಡ ಅಯ್ಯಪ್ಪ ಹಾಗೂ ಚಂಗುಲAಡ ವಿನಯ್ ಪೊನ್ನಣ್ಣ ಅವರನ್ನು ನೇಮಿಸಲಾಯಿತು.