ಐಗೂರು, ಜ. ೨೧: ಕಾಜೂರಿನ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಕರ ಜ್ಯೋತಿಯ ಪ್ರಯುಕ್ತ ವಿಶೇಷ ಪೂಜೆಯನ್ನು ಏರ್ಪಡಿಸಲಾಗಿತ್ತು. ಪೂಜೆಯಲ್ಲಿ ದಾನಿ ಹಾಗೂ ಸಮಾಜ ಸೇವಕ ಎ.ಎನ್ ಪದ್ಮನಾಭ ಅವರು ಭಾಗವಹಿಸಿ ಅಯ್ಯಪ್ಪ ಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕೆ ರೂ.೫ ಲಕ್ಷ ಹಣವನ್ನು ನೀಡುವ ಭರವಸೆ ಇತ್ತರು. ಈ ಸಂದರ್ಭದಲ್ಲಿ ಅವರನ್ನು ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಿ.ಕೆ. ವಿನೋದ್ ಅವರ ಸಮ್ಮುಖದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷರಾದ ಎಸ್.ಎನ್ ಯೋಗೇಶ್, ಕಾರ್ಯದರ್ಶಿ ಎ.ಕೆ. ಶಿವದಾಸ್, ಖಜಾಂಚಿ ಬಿ.ಬಿ ಭರತ್ ಕುಮಾರ್, ಉಪಾಧ್ಯಕ್ಷ ಟಿ.ಆರ್ ವಿಜಯ, ಹರಿಹರ ಯುವಕ ಸಂಘದ ಅಧ್ಯಕ್ಷ ಎಂ.ಕೆ ಮೋಹನ್, ಉಪಾಧ್ಯಕ್ಷ ಟಿ.ಕೆ. ಭಾಸ್ಕರ್, ಕಾರ್ಯದರ್ಶಿ ಕೆ.ಎಂ ಗೋಪಾಲಕೃಷ್ಣ, ಮಾಜಿ ಅಧ್ಯಕ್ಷ ಜಿ.ಕೆ. ಅವಿಲಾಶ್, ರಕ್ಷಣಾ ವೇದಿಕೆಯ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಎಚ್.ಕೆ. ವಸಂತ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.