ಮಡಿಕೇರಿ, ಜ. ೨೧: ಲವ್ ಜಿಹಾದ್ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು, ಇದರ ವಿರುದ್ಧ ಕಾನೂನಾತ್ಮಕ ಕ್ರಮಕ್ಕೆ ಆಗ್ರಹಿಸಿ ವಿವಿಧ ಕೊಡವ ಸಂಘಟನೆಗಳ ಪ್ರಮುಖರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರಿಗೆ ಮನವಿ ಸಲ್ಲಿಸಿದರು.

ಜಬ್ಭೂಮಿ ಚಾರಿಟೇಬಲ್ ಟ್ರಸ್ಟ್, ಕನೆಕ್ಟಿಂಗ್ ಕೊಡವಾಸ್, ತತ್ವಮಸಿ ಟ್ರಸ್ಟ್, ವ್ಯಾಲಿ ಡ್ಯೂ ಕಲ್ಚರಲ್ ಟ್ರಸ್ಟ್, ಕನ್ನಿ ಕಾವೇರಿ ಟ್ರಸ್ಟ್ ವತಿಯಿಂದ ಮನವಿ ಸಲ್ಲಿಸಿ ಲವ್ ಜಿಹಾದ್ ಪ್ರಕರಣಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಲಾಯಿತು.

ಈ ಸಂದರ್ಭ ಮಾತನಾಡಿದ ಜಬ್ಭೂಮಿ ಚಾರಿಟೇಬಲ್ ಟ್ರಸ್ಟ್ ಸಂಚಾಲಕ ರಾಜೀವ್ ಬೋಪಯ್ಯ, ಬೇರೆಡೆ ಲವ್ ಜಿಹಾದ್ ಪ್ರಕರ ಣಗಳು ಕಂಡುಬರುತ್ತಿತ್ತು. ಇದೀಗ ಕೊಡಗು ಜಿಲ್ಲೆಯಲ್ಲಿಯೂ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ. ಇಂತಹ ಘಟನೆ ನಿಲ್ಲಬೇಕು. ಮಕ್ಕಳನ್ನು ಕಳೆದುಕೊಳ್ಳುವ ಭೀತಿ ಪೋಷಕರಿಗೆ ಎದುರಾಗಿದೆ. ಎಲ್ಲಾ ಸಮುದಾಯದವರು ಜಾಗೃತರಾಗಬೇಕು. ಶಾಂತಿ, ಸಹಬಾಳ್ವೆ ಎಲ್ಲಾ ಧರ್ಮಗಳು ಪಾಲಿಸಬೇಕು ಎಂದು ಹೇಳಿದರು. ಕೊಡಗಿನಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ವಿವರ ನೀಡಲಾಗಿದೆ. ಕಾನೂನಾತ್ಮಕ ಕ್ರಮದ ಭರವಸೆ ಅಧಿಕಾರಿ ನೀಡಿದ್ದಾರೆ ಎಂದರು. ಮನವಿ ಸಲ್ಲಿಕೆ ಸಂದರ್ಭ ಸಂಘಟನೆಗಳ ಪ್ರಮುಖರು ಹಾಜರಿದ್ದರು.